AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಾತ್ರಿ ಅಡುಗೆ ಮನೆಗೆ ಕಳ್ಳ ಬಂದಿರಬಹುದೆಂದು ನೋಡಿದ ಮಹಿಳೆಗೆ ಸಿಕ್ಕಿದ್ದು ಬೃಹತ್​ ಹೆಬ್ಬಾವು

ಇಲ್ಲೊಬ್ಬಳು ಮಹಿಳೆ ಮಧ್ಯರಾತ್ರಿ ಅಡುಗೆ ಮನೆಯಿಂದ ಬಂದ ಶಬ್ದ ಕೇಳಿ ಹೋಗಿ ನೋಡಿದಾಗ ಶಾಕ್​​ ಆಗಿದ್ದಾಳೆ. ಮಹಿಳೆಯೊಬ್ಬಳು ರಾತ್ರಿ ಕೇಳಿ ಅಡುಗೆ ಮನೆಗೆ ಹೋಗಿ ನೋಡಿದಾಗ ಬೃಹತ್​ ಹೆಬ್ಬಾವೊಂದು ಕಾಣಿಸಿದೆ.

Viral Video: ರಾತ್ರಿ ಅಡುಗೆ ಮನೆಗೆ ಕಳ್ಳ ಬಂದಿರಬಹುದೆಂದು ನೋಡಿದ ಮಹಿಳೆಗೆ ಸಿಕ್ಕಿದ್ದು ಬೃಹತ್​ ಹೆಬ್ಬಾವು
ಹೆಬ್ಬಾವು
TV9 Web
| Edited By: |

Updated on:Mar 21, 2022 | 9:58 AM

Share

ರಾತ್ರಿ ಮನೆಯಲ್ಲಿ ಇದ್ದಕ್ಕಿದ್ದಂತೆ ಶಬ್ದ ಕೇಳಿದರೆ ಎಂತಹವರಿಗೂ ಒಮ್ಮೆ ಭಯವಾಗುತ್ತದೆ. ಸಾಮಾನ್ಯವಾಗಿ ಕಳ್ಳರಿರಬಹುದು ಎಂದು ಊಹಿಸವುದು ಸಹಜ. ಇಲ್ಲೊಬ್ಬಳು ಮಹಿಳೆ ಮಧ್ಯರಾತ್ರಿ ಅಡುಗೆ ಮನೆಯಿಂದ ಬಂದ ಶಬ್ದ ಕೇಳಿ ಹೋಗಿ ನೋಡಿದಾಗ ಶಾಕ್​​ ಆಗಿದ್ದಾಳೆ. ಹೌದು. ಮಹಿಳೆಯೊಬ್ಬಳು ರಾತ್ರಿ ಶಬ್ದ ಕೇಳಿ ಅಡುಗೆ ಮನೆಗೆ ಹೋಗಿ ನೋಡಿದಾಗ ಬೃಹತ್​ ಹೆಬ್ಬಾವೊಂದು (Python) ಕಾಣಿಸಿದೆ. ಇದನ್ನು ನೋಡಿ ಮಹಿಳೆ ಹೌಹಾರಿದ್ದಾಳೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಗ್ಲೆನ್‌ವ್ಯೂ ನಗರದಲ್ಲಿ ಈ ಘಟನೆ ನಡೆದಿದೆ.

ರಾತ್ರಿ ಮನೆಯಲ್ಲಿ ಹೆಬ್ಬಾವನ್ನು ಕಂಡು ಮಹಿಳೆ ಗಾಬರಿಗೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾಳೆ. ನಂತರ ಹೆಬ್ಬಾವನ್ನು ರಕ್ಷಿಸಲಾಗಿದೆ. ಇದರ ವಿಡಿಯೋವನ್ನು ಫೇಸ್ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್‌ ಫೇಸ್‌ಬುಕ್​ನಲ್ಲಿ  ವೀಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯ ಮನೆಯಿಂದ ಹಾವನ್ನು ರಕ್ಷಿಸಿ ಹೊರಡುವಾಗ ಘಟನೆಯ ಬಗ್ಗೆ ವಿವರಗಳನ್ನು ಹಂಚಿಕೊಳ್ಳುವುದನ್ನು ವೀಡಿಯೊ ಮಾಡಿ ಹಂಚಿಕೊಂಡಿದ್ದಾನೆ. ಅವನು ಬರುತ್ತಿದ್ದಂತೆ, ಅವನನ್ನು ಪ್ಯಾಂಟ್ರಿಗೆ ಕರೆದೊಯ್ಯಲಾಗುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಹುಡುಕಾಟದ ನಂತರ ಹೆಬ್ಬಾವು ಒಂದು ಮೂಲೆಯಲ್ಲಿ ಸುತ್ತಿಕೊಂಡಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ವಿವರಿಸಿದ ಅವರು, ಅಡುಗೆ ಮನೆಯಲ್ಲಿ ಗಾಜಿನ ಪಾತ್ರೆಗಳೆಲ್ಲ ಒಡೆದುಹೋಗಿದ್ದವು. ಮಹಿಳೆ ಗಾಬರಿಗೊಂಡಿದ್ದರು. ಕಳ್ಳನೆಂದು ಭಾವಿಸಿ ಅವರು ಪೊಲೀಸರಿಗೆ ಕರೆ ಮಾಡಿದ್ದರು. ನಂತರ ತಿಳಿಯಿತು ಅಲ್ಲಿರುವುದು ಹೆಬ್ಬಾವು ಎಂದು. ನಂತರ ಮೂಲೆಯಲ್ಲಿ ಸುತ್ತಿಕೊಂಡು ಕುಳಿತಿರುವುದು ಕಂಡಿತು. ನಿಧಾನವಾಗಿ ಹೊರತೆಗೆಯಲಾಯಿತು. ರಾತ್ರಿ ಮನೆಯ ಸುತ್ತಲೂ ಹಲವು ಹಾವುಗಳು ಚಲಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಆಕಸ್ಮಾತ್​ ಆಗಿ ಈ ಹೆಬ್ಬಾವು ಮನೆಯ ಒಳಗೆ ನುಸುಳಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

Video: ರಾತ್ರಿ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ಓಡಿಕೊಂಡೇ ಹೋಗಿ ಮನೆ ಸೇರುವ ಯುವಕ; ಕಾರಣ ಕೇಳಿ ಸೆಲ್ಯೂಟ್​​ ಹೊಡೆದ ನೆಟ್ಟಿಗರು

Published On - 9:57 am, Mon, 21 March 22