ಜಾಗತಿಕ ತಾಪಮಾನ (Global warming) ಹೆಚ್ಚುತ್ತಿರುವುದು ಮುಂದುವರಿದು ಅದು ಪರಿಸರ ಮತ್ತು ಇತರ ಚಟುವಟಿಕೆಗಳ ಮೇಲೆ ಬೀರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಬದುಕು ನಿರ್ಭರವಾಗದಿರಲು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು (natural resources) ಸಂರಕ್ಷಿಸಲು ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಹಲವಾರು ಪ್ರಯೋಗಗಳನ್ನು ನಡೆಸುತ್ತಿವೆ. ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನೀವು ನೋಡಿರಬಹುದು. ಜಪಾನ್ ದೇಶದಲ್ಲಿ ವಿನೂತನ ಟಾಯ್ಲೆಟ್ (toilet) ವಿನ್ಯಾಸವೊಂದು ಸುಸ್ಥಿರ ಜೀವನಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.
ಅಸಾಧಾರಣವೆನಿಸುವ ಸೃಜನಶೀಲತೆ ಮತ್ತು ಆವಿಷ್ಕಾರ ವಿಷಯಕ್ಕೆ ಬಂದಾಗ, ಜಪಾನ್ ದೇಶಕ್ಕೆ ಯಾರೂ ಸರಿಸಾಟಿಯಾಗಲಾರರು. ನೀರನ್ನು ಸಂರಕ್ಷಿಸಲು ಈ ದೇಶದ ಸಂಶೋಧಕರು ಸೋಜಿಗ ಹುಟ್ಟಿಸುವ ವಿನ್ಯಾಸವೊಂದ್ನು ರೂಪಿಸಿದ್ದಾರೆ,
ಪರಿಸರ ಸ್ನೇಹಿ ಶೌಚಾಲಯದ ಚಿತ್ರವೊಂದನ್ನು ಫ್ಯಾಸಿನೇಟಿಂಗ್ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ಸಿಂಕ್ ಅಳವಡಿಸಿದ ಟಾಯ್ಲೆಟ್ ಒಂದನ್ನು ನಮಗೆ ತೋರಿಸುತ್ತದೆ. ಶೌಚವನ್ನು ಮುಗಿಸಿದ ನಂತರ ಕೈ ತೊಳೆದ ಅಶುಚಿ ನೀರನ್ನು ಫ್ಲಶ್ ಮಾಡಲು ಬಳಸಬಹುದಾಗಿದೆ.
ಟ್ವಿಟರ್ ಕ್ಯಾಪ್ಶನಲ್ಲಿ ಹೀಗೆ ಹೇಳಲಾಗಿದೆ: ‘ಜಪಾನಿನ ಅಸಂಖ್ಯಾತ ಟಾಯ್ಲೆಟ್ ಗಳಿಗೆ ಹ್ಯಾಂಡ್ ವಾಷ್ ಸಿಂಕ್ ಜೋಡಿಸಿರುವುದರಿಂದ ಕೈತೊಳೆದ ನೀರನ್ನು ಫ್ಲಷ್ ಮಾಡಲು ಬಳಸಬಹುದು. ಹೀಗೆ ಮಾಡುವುದರಿಂದ ಜಪಾನ್ ಮಿಲಿಯನ್ ಗಟ್ಟಲೆ ನೀರನ್ನು ಉಳಿಸುತ್ತದೆ.’
On many Japanese toilets, the hand wash sink is attached so that you can wash your hands and reuse the water for the next flush. Japan saves millions of liters of water every year doing this. pic.twitter.com/HmDGu73iqa
— Fascinating (@fasc1nate) October 11, 2022
ಟ್ವಿಟರ್ ನಲ್ಲಿ ಈ ಪೋಸ್ಟ್ ಶೇರ್ ಆದ ಬಳಿಕ ಇಂಟರ್ನೆಟ್ ನಲ್ಲಿ ಅದು ವಿಪರೀತ ಕುತೂಹಲವನ್ನು ಸೃಷ್ಟಿಸಿದ್ದು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ತನ್ನದಾಗಿಸಿಕೊಂಡಿದೆ. ಟ್ವಿಟರ್ ನಲ್ಲಿ 14 ಸಾವಿರಕ್ಕಿಂತ ಹೆಚ್ಚು ಜನ ಅದನ್ನು ಮರುಶೇರ್ ಮಾಡಿದ್ದಾರೆ. ಅಸಂಖ್ಯಾತ ಜನ ಟಾಯ್ಲೆಟ್ ವಿನ್ಯಾಸವನ್ನು ಕೊಂಡಾಡುತ್ತಾ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಒಬ್ಬ ಜಪಾನಿ ಯೂಸರ್ ಕಾಮೆಂಟ್ ಮಾಡುತ್ತಾ ತನ್ನ ದೇಶದ ಕ್ರಿಯಾತ್ಮಕ ವಿನ್ಯಾಸಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಿದ್ದಾನೆ: ‘ಜಪಾನ್ ಪ್ರತಿವರ್ಷ ಸುಮಾರು 80 ಟ್ರಿಲಿಯನ್ ಲೀಟರ್ ಗಳಷ್ಟು ನೀರನ್ನು ಬಳಸುತ್ತದೆ. ಒಪಿಯನ್ನು ವರ್ಷಕ್ಕೆ ಮಿಲಿಯನ್ ಗಟ್ಟಲೆ ಲೀಟರ್ ನೀರು ಅಂತ ಭಾವಿಸಿ, ಅದನ್ನ 10 ಮಿಲಿಯನ್ ಲೀಟರ್ ಗಳಿಗೆ ರೌಂಡಪ್ ಮಾಡಿ ಅವಲೋಕಿಸಿದಾಗ ನಾವು ಜಪಾನ್ ಬಳಸುವ ಒಟ್ಟಾರೆ ನೀರಿನ ಶೇಕಡ 0.0001 ರಷ್ಟನ್ನು ಉಳಿಸುತ್ತೇವೆ. ಹೆಚ್ಚಿನಾಂಶ ನೀರನ್ನು ಕೃಷಿಗೆ ಬಳಸಲಾಗುತ್ತದೆ.’
ಟಾಯ್ಲೆಟ್ ಹೊಸ ವಿನ್ಯಾಸವು ಹೆಚ್ಚುವರಿ ಸಿಂಕ್ ಗೆ ಬೇಕಾಗುವ ವಸ್ತುಗಳನ್ನು ಸಹ ಉಳಿಸುತ್ತದೆ. ಈ ಡಿಸೈನನ್ನು ಜಾಗತಿಕವಾಗಿ ಬಳಸಬೇಕೆನ್ನುವುದು ನನ್ನ ಅಭಿಪ್ರಾಯವಾಗಿದೆ,’ ಎಂದು ಮತ್ತೊಬ್ಬ ಯೂಸರ್ ಟ್ವೀಟ್ ಮಾಡಿದ್ದಾರೆ.