New Year 2026: ಹೊಸ ವರ್ಷವನ್ನು ವಿಶೇಷ ಡೂಡಲ್‌ನೊಂದಿಗೆ ಸ್ವಾಗತಿಸಿದ ಗೂಗಲ್

Google Doodle Today : ಗೂಗಲ್ ತನ್ನ ಡೂಡಲ್ ಮೂಲಕ ವಿಶೇಷ ದಿನಗಳನ್ನು ಆಚರಿಸುತ್ತದೆ. ಆದರೆ ಇದೀಗ ಗೂಗಲ್ ವಿಶೇಷ ಹಾಗೂ ಆಕರ್ಷಕ ಡೂಡಲ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದೆ. ಹಾಗಾದ್ರೆ ಇಂದಿನ ಡೂಡಲ್ ವಿಶೇಷತೆಯೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

New Year 2026: ಹೊಸ ವರ್ಷವನ್ನು ವಿಶೇಷ ಡೂಡಲ್‌ನೊಂದಿಗೆ ಸ್ವಾಗತಿಸಿದ ಗೂಗಲ್
ಗೂಗಲ್‌ ಡೂಡಲ್‌
Image Credit source: Google

Updated on: Jan 01, 2026 | 10:22 AM

2025ಕ್ಕೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು (New Year) ಸ್ವಾಗತಿಸಿದ್ದಾಗಿದೆ. ಹಳೆಯ ವರ್ಷದ ಕಹಿ ಘಟನೆಗಳು ಮರೆತು ಹೊಸ ಭರವಸೆ, ಹೊಸ ಕನಸುಗಳೊಂದಿಗೆ ಆರಂಭಿಸುವ ಹುರುಪು ಎಲ್ಲರಲ್ಲೂ ತುಂಬಿದೆ. ಈ ನಡುವೆ ಹೊಸ ವರ್ಷವನ್ನು ಗೂಗಲ್​ ಕೂಡ ವಿಶೇಷವಾಗಿ ಸ್ವಾಗತಿಸಿದೆ. ಗೂಗಲ್ ಹೊಸ ಆರಂಭವನ್ನು ಸೂಚಿಸುವ ಹಾಗೂ ಚೈತನ್ಯವನ್ನು ಮೂಡಿಸುವ ಗೂಗಲ್ ಡೂಡಲ್ (Google Doodle) ಹಂಚಿಕೊಂಡಿರುವುದು ವಿಶೇಷ.

ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್‌ನೊಂದಿಗೆ ಸ್ವಾಗತಿಸಿದ್ದು, ಕಸ್ಟಮೈಸ್ಡ್ ಆ್ಯನಿಮೆಟೇಡ್ ಡೂಡಲ್ ಇದೀಗ ಗೂಗಲ್ ಪೇಜ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇಂದಿನ ಗೂಗಲ್ ಡೂಡಲ್‌ನಲ್ಲಿ, G ಹಾಗೂ Gle ಅಕ್ಷರಗಳ ನಡುವೆ, 2026 ಸಂಖ್ಯೆಯನ್ನು ಬರೆದಿದ್ದು, ಅದರ ಪಕ್ಕದಲ್ಲೇ ಡೈರಿ ಮತ್ತು ಪೆನ್ನು ಇದೆ.

ಇದನ್ನೂ ಓದಿ:2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ವಿಶೇಷ ಡೂಡಲ್ ಹಂಚಿಕೊಂಡ ಗೂಗಲ್

ಈ ಡೂಡಲ್‌ನಲ್ಲಿ ಡೈರಿಯ ಪಕ್ಕದಲ್ಲಿ ಒಂದು ಕಪ್ ಕಾಫಿ ಇರುವುದನ್ನು ಕಾಣಬಹುದು. ಬಿಸಿ ಬಿಸಿ ಕಾಫಿ ಕುಡಿದು ದಿನವನ್ನು ಆರಂಭಿಸಿ. ನಿಮ್ಮ ಬದುಕಿನ ಖಾಲಿ ಹಾಳೆಯ ತುಂಬೆಲ್ಲಾ ಸಿಹಿ ಘಟನೆಗಳೇ ತುಂಬಲಿ. ಹೊಸ ವರ್ಷದ ಹೊಸ ಸಂಕಲ್ಪದೊಂದಿಗೆ  ಆರಂಭಿಸಿ ಎನ್ನುವ ಸಂದೇಶದೊಂದಿಗೆ ಡೈರಿ ಹಾಗೂ ಪೆನ್ನನ್ನು ಇಟ್ಟಂತಿದೆ. ಇಂದಿನ ಡೂಡಲ್ ಹೊಸ ವರ್ಷದ ಸಂಕಲ್ಪವನ್ನು ಚಿತ್ರಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 10:21 am, Thu, 1 January 26