AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಮ್ಗೆ ಪುರುಷ ಮ್ಯಾನೇಜರ್ ಸಾಕು, ಮಹಿಳಾ ಮ್ಯಾನೇಜರ್ ಬೇಡ್ವೇ ಬೇಡ; ಪ್ರಾಮಾಣಿಕ ಉತ್ತರ ನೀಡಿದ ಉದ್ಯೋಗಿಗಳು

ಬಹುತೇಕ ಉದ್ಯೋಗಿಗಳಿಗೆ ಆಫೀಸು ಹಾಗೂ ಬಾಸ್ ಬಗ್ಗೆ ಇರುವ ಅಭಿಪ್ರಾಯಗಳು ಒಂದೇ ರೀತಿ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ನೋಯ್ಡಾದ ಖಾಸಗಿ ಕಂಪನಿಯೊಂದರ ವಿಡಿಯೋ ವೈರಲ್ ಆಗಿದೆ. ಇದು ಕೆಲಸದ ಸ್ಥಳದಲ್ಲಿ ನಾಯಕತ್ವ ಸ್ಥಾನಗಳಿಗೆ ಪುರುಷರು ಅಥವಾ ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಸೂಕ್ತರು ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಮ್ಗೆ ಪುರುಷ ಮ್ಯಾನೇಜರ್ ಸಾಕು, ಮಹಿಳಾ ಮ್ಯಾನೇಜರ್ ಬೇಡ್ವೇ ಬೇಡ; ಪ್ರಾಮಾಣಿಕ ಉತ್ತರ ನೀಡಿದ ಉದ್ಯೋಗಿಗಳು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jan 01, 2026 | 2:05 PM

Share

ಪುರುಷರು ಅಥವಾ ಮಹಿಳೆಯ ಉದ್ಯೋಗಿಗಳೇ ಇರಲಿ, ಮ್ಯಾನೇಜರ್ ಯಾರಿರಬೇಕೆಂದು ಕೇಳಿದಾಗ ಪುರುಷರೇ ಮ್ಯಾನೇಜರ್ (female manager) ಇರಬೇಕೆಂದು ಬಯಸುತ್ತಾರೆ. ಹೌದು, ನೋಯ್ಡಾದ (Noida) ಖಾಸಗಿ ಕಂಪನಿಯೊಂದರ ಉದ್ಯೋಗಿಗಳ ಅಭಿಪ್ರಾಯವು ಅದೇ ಆಗಿದೆ. ಆದರೆ ಇದೀಗ ನೋಯ್ಡಾ ಮೂಲದ ‘ಕ್ಲೌಡ್ ಸೈನ್ಸ್ ಲ್ಯಾಬ್ಸ್’ ಕಂಪನಿಯ ಉದ್ಯೋಗಿಗಳ ಸಮೀಕ್ಷೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಇಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳು ಪುರುಷರೇ ಬಾಸ್ ಆಗಿ ಇರಬೇಕೆಂದು ಪ್ರಾಮಾಣಿಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಸದ್ಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನ್ಯೂಸ್ ಅಲ್ಗೆಬ್ರಾ (News algebra) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ತಮಾಷೆ ವಿಡಿಯೋ ಇದಾಗಿದೆ. ಈ ವಿಡಿಯೋಗೆ ನೋಯ್ಡಾದ ಖಾಸಗಿ ಕಂಪನಿಯ ಉದ್ಯೋಗಿಗಳು ಮಹಿಳಾ ಬಾಸ್‌ಗಳಿಗಿಂತ ಪುರುಷ ಬಾಸ್ ಗಳನ್ನೇ ಆಯ್ಕೆ ಮಾಡಿಕೊಂಡರು. “ಇದು ಅಥವಾ ಅದು” ಈ ಸಮೀಕ್ಷೆಯಲ್ಲಿ ಭಾಗವಹಿಸುವವರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ. ಆದರೆ ಆಶ್ಚರ್ಯಕರವಾಗಿ ಎಲ್ಲರೂ ಪುರುಷ ಮ್ಯಾನೇಜರ್ ರನ್ನೇ ಆಯ್ಕೆ ಮಾಡಿದರು. ಇದರಲ್ಲಿ ಮಹಿಳಾ ಉದ್ಯೋಗಿಗಳೂ ಸೇರಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಉದ್ಯೋಗಿಗಳಿಗೆ ಕಂಪನಿಯ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದಕ್ಕೆ ಅನುಸಾರವಾಗಿ ಉದ್ಯೋಗಿಗಳು ತಮ್ಮ ಆಯ್ಕೆಯ ಮುಂದೆ ನಿಲ್ಲಬೇಕು. ಅದರಂತೆ ಆಫೀಸ್ ಟ್ರಿಪ್ – ಲಾಂಗ್ ವೀಕೆಂಡ್, ಅರ್ಲಿ ಲಾಗ್ ಇನ್, ಲೇಟ್ ಲಾಗ್ ಔಟ್, ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಆಫೀಸ್ ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ ಒಂದು ಪ್ರಮುಖ ಪ್ರಶ್ನೆಯೆಂದರೆ ‘ನೀವು ಮಹಿಳಾ ಮ್ಯಾನೇಜರ್ ಬಯಸುತ್ತೀರಾ ಅಥವಾ ಪುರುಷ ಮ್ಯಾನೇಜರ್ ರನ್ನು ಬಯಸುತ್ತೀರಾ? ಎನ್ನುವುದಾಗಿದ್ದು, ಎಲ್ಲಾ ಉದ್ಯೋಗಿಗಳು ‘ಪುರುಷ ಮ್ಯಾನೇಜರ್’ ಆಯ್ಕೆಯನ್ನು ಆರಿಸಿಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ

ಜನವರಿ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪ್ರಸ್ತುತ ಮ್ಯಾನೇಜರ್ ಪುರುಷರೇ ಆಗಿರುವುದರಿಂದ ಈ ರೀತಿ ಆಯ್ಕೆ ಮಾಡಲಾಯಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕೆಲಸದ ಸ್ಥಳದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳ ಒಂದು ಗಮನಾರ್ಹ ಚಿತ್ರಣ – ಲಿಂಗ ಸಮಾನತೆ ಇನ್ನೂ ಹಲವು ಮೈಲಿಗಳಷ್ಟು ದೂರ ಸಾಗಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಹಿಳೆಯರು ಕೂಡ ಪುರುಷ ಬಾಸ್‌ಗಳನ್ನು ಆಯ್ಕೆ ಮಾಡುತ್ತಾರೆ. ಪಕ್ಷಪಾತವು ಆಳವಾಗಿ ಬೇರೂರಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು