Viral: ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ
ಒಂದೊಳ್ಳೆ ಉದ್ಯೋಗ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡಿದ್ರೆ ನೆಮ್ಮದಿಯಾಗಿ ಇರ್ಬಹುದು ಎಂದುಕೊಳ್ತಾರೆ. ಆದರೆ ಇಲ್ಲೊಬ್ಬ ಉದ್ಯಮಿ ಲಕ್ಷ ಲಕ್ಷ ದುಡಿಮೆಯೂ ಸಮಾಧಾನ ನೀಡ್ತಾ ಇಲ್ಲಂತೆ. ತಿಂಗಳಿಗೆ 4.1 ಲಕ್ಷ ಸಂಪಾದಿಸಲು ಕಷ್ಟಪಟ್ಟಿದ್ದೇನೆ ಆದರೆ ಇಂದು ಸಂತೋಷವಾಗಿಲ್ಲ ಎಂದಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಇಲ್ಲೊಬ್ಬ ಉದ್ಯಮಿಗೂ (Entrepreneur) ಅದೇ ರೀತಿಯಾಗಿದೆ. ತಿಂಗಳಿಗೆ 4 ಲಕ್ಷ ರೂ ಸಂಪಾದಿಸುವ ಉದ್ಯಮಿ ಅತೃಪ್ತರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಸಲಹೆಯನ್ನು ನೀಡಿದ್ದಾರೆ.
r/Indian_ flex ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ನನಗೀಗ 32 ವರ್ಷ ವಯಸ್ಸು. ತಿಂಗಳಿಗೆ 4.1 ಲಕ್ಷ ಸಂಪಾದಿಸಲು ಕಷ್ಟಪಟ್ಟಿದ್ದೇನೆ ಆದರೆ ಸಂತೋಷವಾಗಿಲ್ಲ. ಎಲ್ಲವೂ ಯಶಸ್ವಿಯಾಗಿರುವಂತೆ ಕಾಣುತ್ತದೆ. ನನಗೆ ಏನು ಸಂತೋಷವಾಗುತ್ತದೆ ಎಂಬುದೇ ತಿಳಿದಿಲ್ಲ. ಯಾವ ಕೆಲಸವು ನನಗೆ ಸಂತೋಷ ಅಥವಾ ತೃಪ್ತಿ ನೀಡುತ್ತಿಲ್ಲ . ಹಣ ಸಂತೋಷ ತರುತ್ತದೆ ಎಂದು ಭಾವಿಸಿದ್ದ ನಾನು ಆ ಉತ್ಸಾಹ ಇಂದು ಕಾಣಿಸುತ್ತಿಲ್ಲ; ಬದಲಾಗಿ, ಬದುಕಿನಲ್ಲಿ ಏನೋ ಕಾಣೆಯಾಗಿದೆ ಎನ್ನುವ ಭಾವನೆ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ:ಯುವಕನ ಕೈ ಹಿಡಿದ ವಾಕಿಂಗ್ ಕಾಫಿ ಶಾಪ್, ವೈರಲ್ ಆಯ್ತು ದೃಶ್ಯ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೇರೆ ಹವ್ಯಾಸ ಬೆಳೆಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಬೇರೆ ವ್ಯವಹಾರ ಪ್ರಾರಂಭಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದೇವೆ. ನನಗೂ ಆ ಭಾವನೆಯೇ ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




