AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬುಲೆಟ್​​​ಗೆ ಗುದ್ದಿ ಅರ್ಧ ಕಿಮೀ ಎಳೆದೊಯ್ದ ಕಾರು, ರಸ್ತೆಯುದ್ದಕ್ಕೂ ಬೆಂಕಿಯ ಕಿಡಿ

ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್‌ನಲ್ಲಿ ನಡೆದ ಅಘಾತಕಾರಿ ಘಟನೆ ಇದು. ಡಿಸೆಂಬರ್ 24ರಂದು ವೇಗವಾಗಿ ಬಂದ ಎಸ್‌ಯುವಿ ಕಾರೊಂದು ಬುಲೆಟ್ ಬೈಕ್ ಅನ್ನು ಸುಮಾರು 500 ಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಚಾಲಕ ಶ್ರೀನಿವಾಸ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯಲ್ಲಿ ಚಾಲಕ ಮದ್ಯಪಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬೆಂಗಳೂರು: ಬುಲೆಟ್​​​ಗೆ ಗುದ್ದಿ ಅರ್ಧ ಕಿಮೀ  ಎಳೆದೊಯ್ದ ಕಾರು, ರಸ್ತೆಯುದ್ದಕ್ಕೂ ಬೆಂಕಿಯ ಕಿಡಿ
ವಿಡಿಯೋ ವೈರಲ್
ಅಕ್ಷಯ್​ ಪಲ್ಲಮಜಲು​​
|

Updated on: Dec 26, 2025 | 3:30 PM

Share

ಬೆಂಗಳೂರು, ಡಿ.26: ಬೆಂಗಳೂರಿನಲ್ಲಿ (Bengaluru) ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಬುಧವಾರ (ಡಿ.24) ರಾತ್ರಿ ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್‌ನಲ್ಲಿ ಒಂದು ಎಸ್‌ಯುವಿ ಕಾರೊಂದು ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗಿದೆ. ಕಾರಿನ ಮುಂದೆ ಒಂದು ಬುಲೆಟ್​​​ ಬೈಕ್​​ ಸಿಲುಕಿಕೊಂಡು ಅದನ್ನು ರಸ್ತೆ ಉದ್ದಕ್ಕೂ ಎಳೆದುಕೊಂಡು ಹೋಗಿದೆ. ಇದನ್ನು ನೋಡಿ ಇತರ ಸವಾರರು ಅಚ್ಚರಿಗೊಂಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಕಾರಿನ ಪಕ್ಕದಲ್ಲಿದ್ದ ಮತ್ತೊಂದು ಕಾರಿನರು ಎಷ್ಟೇ ಎಚ್ಚರಿಕೆ ನೀಡಿದ್ರು ಅದನ್ನು ಕೇಳಿಕೊಳ್ಳದೇ ಸುಮಾರು 500 ಮೀಟರ್‌ಗಳ ವರೆಗೆ ಬುಲೆಟ್​​​​ ಬೈಕ್​​ನ್ನು ಎಳೆದುಕೊಂಡು ಹೋಗಿದ್ದಾರೆ. ಇದರಿಂದ ಕಾರಿನ ಕೆಳಗಿನಿಂದ ಬೆಂಕಿ ಕಿಡಿಗಳು ಬಂದಿದೆ. ಈ ಘಟಮನೆಯಿಂದ ಜನನಿಬಿಡ ಪ್ರದೇಶದಲ್ಲಿ ಭೀತಿ ಉಂಟು ಮಾಡಿದೆ.

ಕೊನೆಗೆ ನಾಯಂಡಹಳ್ಳಿ ಜಂಕ್ಷನ್ ಬಳಿ ಕೋಪಗೊಂಡ ಇತರ ಪ್ರಯಾಣಿಕರು ಎಸ್‌ಯುವಿ ಕಾರು ಹಾಗೂ ಡ್ರೈವರ್​​​ನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಈ ಕೃತ್ಯವನ್ನು ಮಾಡಿದ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನ ಶ್ರೀನಿವಾಸ್ ಕೆವಿ ಎಂದು ಗುರುತಿಸಲಾಗಿದೆ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ, ಈ ಕಾರು ಬೈಕ್​​​ ಸವಾರನಿಗೆ ಡಿಕ್ಕಿ ಹೊಡೆದು ರಸ್ತೆ ಉದ್ದಕ್ಕೂ ಬೈಕ್​​ನ್ನು ಎಳೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ. ದೂರಿನ ಪ್ರಕಾರ, ಶ್ರೀನಿವಾಸ್ ಅವರು ಬೈಕ್​​ ಓಡಿಸುತ್ತಿದ್ದ ರೋಹಿತ್ ಎಸ್ ಅವರ ಬುಲೆಟ್​​​ಗೆ ಹಿಂಭಾಗದಿಂದ ಡಿಕ್ಕಿ ಹೊಡೆದು ರಸ್ತೆ ಉದ್ದಕ್ಕೂ ಎಳೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಹಬ್ಬದ ದಿನ ಬೆಂಗಳೂರಿಗೆ ಬರುವಾಗ ಖಾಲಿ ಖಾಲಿ, ಆದರೆ ಹೊರಗೆ ಹೋಗುವಾಗ ಹೇಗಿರುತ್ತದೆ ನೋಡಿ?

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಈ ಬಗ್ಗೆ ಬೈಕ್​​ ಸವಾರ ದೂರಿನಲ್ಲಿ ಹೀಗೆ ಹೇಳಿದ್ದಾರೆ. “ನನ್ನ ಬೈಕ್​​​ಗೆ ಡಿಕ್ಕಿ ಹೊಡೆದು ನನ್ನನ್ನು ಕೆಳಗೆ ಹಾಕಿ, ಬುಲೆಟ್​​ನ್ನು ರಸ್ತೆಯಲ್ಲಿ ಎಳೆದುಕೊಂಡು ಬಂದಿದ್ದಾರೆ” ಎಂದು ಹೇಳಿದ್ದಾರೆ. ಈ ಅಪಘಾತದಿಂದ ರೋಹಿತ್​​ ಅವರಿಗೆ ಯಾವುದೇ ತೊಂದರೆಗಳು ಆಗಿಲ್ಲ. ಬೈಕ್​​​​​​​​ಗೆ ದೊಡ್ಡ ಮಟ್ಟದ ಡ್ಯಾಮೆಜ್​​ ಆಗಿದೆ ಎಂದು ಹೇಳಲಾಗಿದೆ. ಇದೀಗ ಪೊಲೀಸ್​​ ತನಿಖೆಯಲ್ಲಿ ಶ್ರೀನಿವಾಸ್ ಅವರು ಮದ್ಯಪಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಡಿಕ್ಕಿಯ ನಂತರ ಭಯಭೀತನಾಗಿದ್ದೆ, ತನ್ನ ಕಾರಿನ ಮುಂದೆ ಬೈಕ್​​ ಸಿಲುಕಿಕೊಂಡಿದೆ ಎಂಬ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕರು ಶ್ರೀನಿವಾಸ್​​​ ಅವರ ಈ ಹುಚ್ಚುತನಕ್ಕೆ ಕಾರನ್ನು ಪುಡಿಪುಡಿ ಮಾಡಿ, ಶ್ರೀನಿವಾಸ್​​​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ