ಪ್ರಸ್ತುತ ಕಾಲಘಟ್ಟದಲ್ಲಿ ಸೋಷಿಯಲ್ ಮೀಡಿಯಾದ ಜನರ ಜೀವನದ ಭಾಗವಾಗಿ ಹೋಗಿದೆ. ಅದರಲ್ಲೂ ಯೂಟ್ಯೂಬ್ ಸಾವಿರಾರು ಕ್ರಿಯೇಟರ್ಸ್‌ಗಳಿಗೆ ಹಣ ಗಳಿಸುವ ಒಂದು ಉತ್ತಮ ವೇದಿಕೆಯಾಗಿದೆ. ಹೆಚ್ಚಿನವರು ತಾವು ದಿನದಲ್ಲಿ ಏನೆಲ್ಲಾ ಮಾಡುತ್ತೇವೆ ಎಂಬುದನ್ನು ವ್ಲಾಗ್ ಮಾಡಿ, ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿ ಕ್ಷಣವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಕೆಲವೊಬ್ಬರು ಲೈಕ್ಸ್, ಫಾಲೋವರ್ಸ್‌ಗಳಿಗಾಗಿ ಹುಚ್ಚು ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ನವ ಜೋಡಿಯೊಂದು ತಮ್ಮ ಫಸ್ಟ್ ನೈಟ್ ವ್ಲಾಗ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸುನಂದಾ ರಾಯ್ (SaffronSunanda) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶೋಭನದ ವ್ಲಾಗ್ ಅಂತೆ, ಈ ವ್ಲಾಗರ್ಸ್ ಸಂಪೂರ್ಣವಾಗಿ ಹುಚ್ಚರಾಗುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Suhagraat Vlog 🥴
These vloggers have gone totally mad.
Wait for the blurred clip 😹 https://t.co/PMsiC5dS6U
— Sunanda Roy 👑 (@SaffronSunanda) July 5, 2024
ವೈರಲ್ ವಿಡಿಯೋದಲ್ಲಿ ಹಾಯ್ ಎಂದು ವ್ಲಾಗ್ ಶುರು ಮಾಡಿದ ಮದುಮಗ ತನ್ನ ಪತ್ನಿಯನ್ನು ಪರಿಚಯಿಸಿ ನಂತರ ರೂಮ್ ಡೆಕೋರೇಷನ್ ಮಾಡಿರುವುದನ್ನು ತೋರಿಸಿ ಪತ್ನಿಗೆ ಸಿಹಿ ಮುತ್ತನ್ನು ನೀಡಿದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ
ಜುಲೈ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಇತ್ತೀಚಿಗೆ ಜನರು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ” ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಈ ಜನರು ಲೈಕ್ಸ್, ಫಾಲೋವರ್ಸ್‌ಗಾಗಿ ಯಾವ ಮಟ್ಟಕ್ಕೂ ಬೇಕಾದ್ರೂ ಹೋಗ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ