Viral Video: ವಾಸುದೇವ…. ನೈವೇದ್ಯ ತಯಾರಿಸಲು ಅನುಮತಿ ನೀಡು, ಕೃಷ್ಣನ ಅಪ್ಪಣೆ ಪಡೆದು ಪ್ರಸಾದ ಮಾಡುವ ವಿಶೇಷ ದೇವಾಲಯ

ಕೇರಳದ ದೇವಾಲಯಗಳು ತಮ್ಮ ಹಳೆಯ ಪೂಜಾ ಸಂಪ್ರದಾಯಗಳ ಪಾಲನೆಗೆ ಹೆಸರುವಾಸಿಯಾಗಿದೆ. ಹೀಗೆ ಹಿಂದಿನ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿರುವ ದೇವಾಲಯಗಳಲ್ಲಿ ಶ್ರೀ ಕೃಷ್ಣನ ವಿಶೇಷ ದೇವಾಲಯವೂ ಒಂದು. ಈ ದೇವಾಲಯದಲ್ಲಿ ಪ್ರತಿದಿನ ನೈವೇದ್ಯಕ್ಕೆ ಸಕ್ಕರೆಯನ್ನು ಸೇರಿಸುವ ಮೊದಲು ಅಡುಗೆ ಭಟ್ಟರು ಕೃಷ್ಣನ ಅನುಮತಿಯನ್ನು ಪಡೆಯಲು ವಾಸುದೇವೋ ಎಂದು ಜೋರಾಗಿ ಕೂಗುತ್ತಾರೆ. ಈ ಕುರಿತ ವಿಶೇಷ ವಿಡಿಯೊವೊಂದು ಇದೀಗ ವೈರಲ್‌ ಆಗುತ್ತಿದೆ.

Viral Video: ವಾಸುದೇವ.... ನೈವೇದ್ಯ ತಯಾರಿಸಲು ಅನುಮತಿ ನೀಡು, ಕೃಷ್ಣನ ಅಪ್ಪಣೆ ಪಡೆದು ಪ್ರಸಾದ ಮಾಡುವ ವಿಶೇಷ ದೇವಾಲಯ
ಅಂಬಲಪುಳ ಕೃಷ್ಣ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 08, 2024 | 2:10 PM

ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಹಲವಾರು ದೇವಾಲಯಗಳು ಕಾಣಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯವೂ ಒಂದು. ಇಲ್ಲಿ ಪಾರ್ಥಸಾರಥಿಯ ರೂಪದಲ್ಲಿ ಒಂದು ಕೈಯಲ್ಲಿ ಶಂಖ ಹಾಗೂ ಮತ್ತೊಂದು ಕೈಯಲ್ಲಿ ಚವಟಿಯನ್ನು ಹಿಡಿದಿರುವ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಪಾಲ್ಪಾಯಸಂ. ಹಾಲು, ಅಕ್ಕಿ ಹಾಗೂ ಸಕ್ಕರೆಯಿಂದ ತಯಾರಿಸಿದ ಶ್ರೀ ಕೃಷ್ಣನಿಗೆ ಪ್ರಿಯವಾದ ಈ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಈ ನೈವೇದ್ಯದ ಇನ್ನೊಂದು ವಿಶೇಷವೆಂದರೆ, ಪ್ರತಿದಿನ ಇಲ್ಲಿ ನೈವೇದ್ಯಕ್ಕೆ ಸಕ್ಕರೆಯನ್ನು ಸೇರಿಸುವ ಮೊದಲು ಅಡುಗೆ ಭಟ್ಟರು ಕೃಷ್ಣನ ಅನುಮತಿಯನ್ನು ಪಡೆಯಲು ವಾಸುದೇವೋ ಎಂದು ಜೋರಾಗಿ ಕೂಗುತ್ತಾರೆ. ಈ ಕುರಿತ ಸುಂದರ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಅಂಬಲಪುಳ ಕೃಷ್ಣ ಈ ದೇವಾಲಯವು ಆಧ್ಯಾತ್ಮಿಕ ಮಹತ್ವದ ಜೊತೆಗೆ ಭಕ್ತರಿಗೆ ವಿತರಿಸುವ ರುಚಿಕರವಾದ ಪ್ರಸಾದಕ್ಕೂ ಹೆಸರುವಾಸಿಯಾಗಿದೆ. ಹೌದು ಈ ದೇವಾಲಯವು ಅಕ್ಕಿ, ಹಾಲು ಮತ್ತು ಸಕ್ಕರೆಯಿಂದ ತಯಾರಿಸಿದ ಪಲ್ಪಾಯಸಂ ಎಂಬ ವಿಶೇಷ ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿದಿನ 100 ಲೀ ಗಳಷ್ಟು ಪ್ರಸಾದವನ್ನು ತಯಾರಿಸಲಾಗುತ್ತದೆ. ಹಳೆಯ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿರುವ ಈ ದೇವಾಲಯದಲ್ಲಿ ನೈವೇದ್ಯ ತಯಾರಿಸುವಾಗ ಕೊನೆಯಲ್ಲಿ ಆ ಪ್ರಸಾದಕ್ಕೆ ಸಕ್ಕರೆಯನ್ನು ಸೇರಿಸುವ ಸಂದರ್ಭದಲ್ಲಿ ಬಾಗಿಲ ಬಳಿ ನಿಂತು ಅಡುಗೆ ಭಟ್ಟರು “ವಾಸುದೇವೋ” ಎಂದು ಜೋರಾಗಿ ಕೂಗುವ ಮೂಲಕ ಶ್ರೀ ಕೃಷ್ಣನ ಅನುಮತಿಯನ್ನು ಪಡೆಯುತ್ತಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ( ಫೇಸ್​​​ಬುಕ್​​​ ವಿಡಿಯೋ)

ಈ ಕುರಿತ ಪೋಸ್ಟ್‌ ಒಂದನ್ನು Team Hindu United ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ದೇವಾಲಯದ ಬಾಗಿಲ ಬಳಿ ನಿಂತು ಅರ್ಚಕರೊಬ್ಬರು ವಾಸುದೇವೋ…… ಎಂದು ಕೂಗಿ ಹೇಳುವ ರೋಮಾಂಚನಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ; ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ಈ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Mon, 8 July 24

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ