Video: ಪ್ಲೀಸ್​​ ಸರ್​​ ಬೇಸಿಗೆ ರಜೆ ಬೇಡ, ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಊಟ ತುಂಬಾ ಮುಖ್ಯ ಎಂದ ವಿದ್ಯಾರ್ಥಿ

|

Updated on: Mar 13, 2024 | 3:28 PM

ಮಕ್ಕಳೆಲ್ಲ ಹಾಫ್ ಡೇ ಸ್ಕೂಲಿಗಾಗಿ ಖುಷಿಯಿಂದ ಕಾಯುತ್ತಿದ್ದರೆ, ಸಾತ್ವಿಕ್ ಎಂಬ ಹೆಸರಿನ ವಿದ್ಯಾರ್ಥಿ ರಜೆ ಬೇಡ ಎಂದು ಶಿಕ್ಷಕರಿಗೆ ಪತ್ರ ಬರೆದಿದ್ದಾನೆ. ಅಷ್ಟಕ್ಕೂ ಆತ ಪತ್ರದಲ್ಲಿ ಬರೆದಿರುವ ಅಂಶ ಕರುಳು ಹಿಂಡುವಂತಿದೆ. ಸಾತ್ವಿಕ್ ನೋಟ್ ಬುಕ್ ನಲ್ಲಿ ತನ್ನ ನೋವನ್ನು ಬರೆದಿದ್ದಾನೆ.

ಹೈದರಾಬಾದ್: ರಾಜ್ಯದಲ್ಲಿ ಬೇಸಿಗೆ ಆರಂಭಗೊಂಡಿದ್ದು, ಮಾರ್ಚ್ 15 ರಿಂದ ಅರ್ಧ ದಿನದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಶಾಲೆ ನಡೆಸಲು ಅರ್ಧ ದಿನದ ಅಧ್ಯಯನದ ವೇಳಾಪಟ್ಟಿಯನ್ನೂ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗೆ ಅರ್ಧ ದಿನ ರಜೆ ಬರಲಿದೆ ಎಂದು ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದರೆ, ಇಲ್ಲೊಬ್ಬ ವಿದ್ಯಾರ್ಥಿ ದಯವಿಟ್ಟು ರಜೆ ಬೇಡ ಸರ್​​ ಎಂದು ಪತ್ರ ಒಂದನ್ನು ಬರೆದಿದ್ದಾನೆ. ಸದ್ಯ ಈ ಬಾಲಕ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಮಕ್ಕಳೆಲ್ಲ ಹಾಫ್ ಡೇ ಸ್ಕೂಲಿಗಾಗಿ ಖುಷಿಯಿಂದ ಕಾಯುತ್ತಿದ್ದರೆ, ಸಾತ್ವಿಕ್ ಎಂಬ ಹೆಸರಿನ ವಿದ್ಯಾರ್ಥಿ ರಜೆ ಬೇಡ ಎಂದು ಶಿಕ್ಷಕರಿಗೆ ಪತ್ರ ಬರೆದಿದ್ದಾನೆ. ಅಷ್ಟಕ್ಕೂ ಆತ ಪತ್ರದಲ್ಲಿ ಬರೆದಿರುವ ಅಂಶ ಕರುಳು ಹಿಂಡುವಂತಿದೆ. ಸಾತ್ವಿಕ್ ನೋಟ್ ಬುಕ್ ನಲ್ಲಿ ತನ್ನ ನೋವನ್ನು ಬರೆದಿದ್ದಾನೆ. ಬೇಸಿಗೆ ರಜೆಯಲ್ಲಿ ಮನೆಗೆ ಹೋದರೆ ಅನ್ನ ಸಿಗುವುದಿಲ್ಲ. ಅಜ್ಜಿ ಮತ್ತು ಅಜ್ಜಿ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ಬೇಸಿಗೆ ರಜೆ ಕೊಡಬೇಡಿ. ನಾನು ಶಾಲೆಯಲ್ಲೇ ಇರುತ್ತೇನೆ. ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಊಟ ತುಂಬಾ ಮುಖ್ಯ ಎಂದು ಸಾತ್ವಿಕ್ ಪತ್ರದಲ್ಲಿ ಬರೆದಿದ್ದಾನೆ. ಕಷ್ಟಪಟ್ಟು ಓದಿ ಉನ್ನತ ಮಟ್ಟಕ್ಕೆ ಏರುತ್ತೇನೆ ಎಂದು ಹೇಳುತ್ತಾ ಸಾತ್ವಿಕ್ ಎರಡು ಪುಟಗಳಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಿದ ಬ್ಲೌಸ್‌ ತೊಟ್ಟು ಮಿಂಚಿದ ಅಂಬಾನಿಯ ಏಕೈಕ ಪುತ್ರಿ

ಈ ಪತ್ರ ನೋಡಿ ಬೆಚ್ಚಿಬಿದ್ದ ಕ್ಲಾಸ್ ಟೀಚರ್ ಸಾತ್ವಿಕ್ ಗೆ ಫೋನ್ ಮಾಡಿ ಆತನ ಸ್ಥಿತಿ ತಿಳಿದು ಬೇಸರಗೊಂಡಿದ್ದಾರೆ. ಬಳಿಕ ಸಾತ್ವಿಕ್​ಗೆ ಜನರಿಂದ ಸಹಾಯವಾಗಲಿ ಎಂಬ ಕಾರಣಕ್ಕೆ ಆತ ಬರೆದಿರುವ ಪತ್ರವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Wed, 13 March 24