Video: ಛೇ ಛೇ ಇದೆಂಥಾ ಅಸಹ್ಯ…. ಪೋಸ್ಟ್‌ಮಾರ್ಟಂ ರೂಮ್​​​ನಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಸ್ವಚ್ಛತಾ ಸಿಬ್ಬಂದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2024 | 6:36 PM

ಇಲ್ಲೊಂದು ಅಸಹ್ಯಕರ ಕೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಪೋಸ್ಟ್ ಪೋಸ್ಟ್‌ಮಾರ್ಟಂ ಹೌಸ್ ನ ಡೀಪ್ ಫ್ರೀಜರ್ ಕೋಣೆಯಲ್ಲಿ ಅಲ್ಲಿನ ಸ್ವಚ್ಛತಾ ಸಿಬ್ಬಂದಿಯೋರ್ವ ಮೃತ ದೇಹಗಳ ನಡುವೆಯೇ ಕಾಲ್ ಗರ್ಲ್ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಹೇಯ ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಬಂಧಿಸಲಾಗಿದೆ.

Video: ಛೇ ಛೇ ಇದೆಂಥಾ ಅಸಹ್ಯ.... ಪೋಸ್ಟ್‌ಮಾರ್ಟಂ ರೂಮ್​​​ನಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಸ್ವಚ್ಛತಾ ಸಿಬ್ಬಂದಿ
Follow us on

ಕೆಲವೊಬ್ಬರಿಗೆ ಎಲ್ಲಿ ಹೇಗೆ ನಡೆದುಕೊಳ್ಳಬೇಕು, ಯಾವ ರೀತಿ ವರ್ತಿಸಬೇಕು ಎಂಬುದೇ ಗೊತ್ತಿಲ್ಲ, ಹೀಗೆ ಸಾರ್ವಜನಿಕ ಸ್ಥಳಗಳಲ್ಲಿಯೇ ರೊಮ್ಯಾನ್ಸ್ ಮಾಡಿ, ಅಸಭ್ಯವಾಗಿ ನಡೆದುಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಅಸಹ್ಯ ಕೃತ್ಯವೊಂದು ನಡೆದಿದ್ದು, ಪೋಸ್ಟ್ ಪೋಸ್ಟ್‌ಮಾರ್ಟಂ ಕೇಂದ್ರದ ಡೀಪ್ ಫ್ರೀಜರ್ ಕೋಣೆಯಲ್ಲಿ ಅಲ್ಲಿನ ಸ್ವಚ್ಛತಾ ಸಿಬ್ಬಂದಿಯೋರ್ವ ಮೃತ ದೇಹಗಳ ನಡುವೆಯೇ ಕಾಲ್ ಗರ್ಲ್ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಹೈಟೆಕ್ ಸಿಟಿ ನೋಯ್ಡಾದಲ್ಲಿ ನಡೆದಿದ್ದು, ಇಲ್ಲಿನ ಸೆಕ್ಟರ್ -94 ನಲ್ಲಿರುವ ಪೋಸ್ಟ್‌ಮಾರ್ಟಂ ಹೌಸ್ ನ ಡೀಪ್ ಫ್ರೀಜರ್ ಕೋಣೆಯಲ್ಲಿ ಸ್ವಚ್ಛತಾ ಸಿಬ್ಬಂದಿಯೋರ್ವ ಮಹಿಳೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

HateDetectors ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ನೋಯ್ಡಾದಲ್ಲಿರುವ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಅಲ್ಲಿನ ಡೀಪ್ ಫ್ರೀಜರ್ ಕೋಣೆಯೊಳಗೆ ಪುರುಷ ಮತ್ತು ಮಹಿಳೆ ಅಸಭ್ಯ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಮರಣೋತ್ತರ ಪರೀಕ್ಷಾ ಕೇಂದ್ರದ ಡೀಪ್ ಫ್ರೀಜರ್ ಕೋಣೆಯೊಳಗೆ ಮೃತದೇಹಗಳ ಮಧ್ಯೆಯೇ ಅಲ್ಲಿನ ಸ್ವಚ್ಛತಾ ಸಿಬ್ಬಂದಿ ಮಹಿಳೆಯೋರ್ವಳ ಜೊತೆ ಅಸಹ್ಯ ಕೃತ್ಯದಲ್ಲಿ ತೊಡಗಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೊಲ್ಕತ್ತಾ ವೈದ್ಯೆಗಾದ ಸ್ಥಿತಿಯೇ ನಿನಗೂ ಆಗುತ್ತೆ ಎಂದು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಆಟೋ ಚಾಲಕ

ಆಗಸ್ಟ್ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಮಹಿಳೆಯರು ಸುರಕ್ಷಿತವಾಗಿಲ್ಲ. ದಯವಿಟ್ಟು ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಮ್ಮ ದೇಶದಲ್ಲಿ ಇದೆಂತಾ ಅಸಹ್ಯ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ