Video: ಕೊಲ್ಕತ್ತಾ ವೈದ್ಯೆಗಾದ ಸ್ಥಿತಿಯೇ ನಿನಗೂ ಆಗುತ್ತೆ ಎಂದು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಆಟೋ ಚಾಲಕ
ಪ್ರಪಂಚ ಮುಂದುವರೆದಿದ್ದರೂ ಕೂಡಾ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ,ದೌರ್ಜನ್ಯ,ಕಿರುಕುಳ ಕಡಿಮೆಯಾಗಿಲ್ಲ. ಇತ್ತೀಚಿಗಷ್ಟೇ ಕೋಲ್ಕತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಇದೀಗ ಇಲ್ಲೊಬ್ಬ ಆಟೋ ಡ್ರೈವರ್ ಕೋಲ್ಕತ್ತಾದಲ್ಲಿ ಏನಾಯಿತೋ ಅದೇ ರೀತಿ ನಿನಗೂ ಮಾಡುವೆ ಎಂದು ಶಾಲಾ ವಿದ್ಯಾರ್ಥಿನಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಈ ವಿಷಯ ತಿಳಿದ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರತಿನಿತ್ಯ ಶಾಲಾ-ಕಾಲೇಜು, ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ, ಬಸ್ಸು, ರೈಲು, ಆಟೋದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವಾಗ ಅದೆಷ್ಟೋ ಹೆಣ್ಣುಮಕ್ಕಳ ಮೇಲೆ ಒಂದಲ್ಲಾ ಒಂದು ರೀತಿಯ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುತ್ತಲೇ ಇವೆ. ಏನೇ ಮಾಡಿದರೂ ಈ ಕಾಮುಕರ ಅಟ್ಟಹಾಸ ನಿಲ್ಲುತ್ತಿಲ್ಲ. ಇತ್ತೀಚಿಗಷ್ಟೇ ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಇಲ್ಲೊಬ್ಬ ಕಾಮಾಂಧ ಆಟೋ ಚಾಲಕ ಕೋಲ್ಕತ್ತಾದಲ್ಲಿ ಏನಾಯಿತೋ ಅದೇ ರೀತಿ ನಿನಗೂ ಮಾಡುವೆ ಎಂದು ವಿದ್ಯಾರ್ಥಿನಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಈ ವಿಷಯ ತಿಳಿದ ಸ್ಥಳೀಯರು ಆತನಿಗೆ ಕೆನ್ನೆಗೆ ಬಾರಿಸಿ ಸರಿಯಾಗಿ ಮಂಗಳಾರತಿ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಶಾಲಾ ವಿದ್ಯಾರ್ಥಿನಿಗೆ ಆಟೋ ಚಾಲಕ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತ ಪೋಸ್ಟ್ ಒಂದನ್ನು @MeghUpdates ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕೋಲ್ಕತ್ತಾದಲ್ಲಿ ಏನಾಯಿತೋ ಅದೇ ರೀತಿ ನಿನಗೂ ಮಾಡುವೆ ಎಂದು ಯುವತಿಗೆ ಬೆದರಿಕೆ ಹಾಕಿದ ಆಟೋ ಚಾಲಕ; ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಮೊದಲು ಸರಿಯಾಗಿ ಆತನಿಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
“I will do the same to you as happened in Kolkata!” An auto driver threatened a girl.
Public caught him and serviced him properly before handing him over to police. pic.twitter.com/BfNvNakZj6
— Megh Updates 🚨™ (@MeghUpdates) August 23, 2024
ವೈರಲ್ ವಿಡಿಯೋದಲ್ಲಿ ಕೋಲ್ಕತ್ತಾದಲ್ಲಿ ಏನಾಯಿತೋ ಅದೇ ರೀತಿ ನಿನಗೂ ಮಾಡುವೆ ಎಂದು ವಿದ್ಯಾರ್ಥಿನಿಗೆ ಅತ್ಯಾಚಾರದ ಬೆದರಿಕೆ ಹಾಕಿದ ಕಾಮಾಂಧ ಆಟೋ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗ ಜಾಡಿಸುವ ದೃಶ್ಯವನ್ನು ಕಾಣಬಹುದು. ಆಟೋ ಚಾಲಕನ ಬೆದರಿಕೆಯಿಂದ ಭಯಗೊಂಡು ಅಳುತ್ತಾ ನಿಂತಿದ್ದ ಆ ವಿದ್ಯಾರ್ಥಿನಿಗೆ ಸ್ಥಳೀಯರು ಸಮಾಧಾನ ಮಾಡಿ, ಏನೋ ಮಗ್ನೆ ಅತ್ಯಾಚಾರ ಬೆದರಿಕೆ ಹಾಕ್ತಿಯಾ ಎಂದು ಆಟೋ ಚಾಲನಿಗೆ ಕೆನ್ನೆಗೆರಡು ಬಾರಿಸಿ ಸರಿಯಾಗಿ ಮಂಗಳಾರತಿ ಮಾಡಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಕಾಮ ತೃಷೆ ತೀರಿಸಲು ನಾವಿದ್ದೇವೆ, ದಯವಿಟ್ಟು ಅಮಾಯಕ ಹೆಣ್ಮಕ್ಕಳ ಬಾಳು ಹಾಳು ಮಾಡಬೇಡಿ; ಲೈಂಗಿಕ ಕಾರ್ಯಕರ್ತೆ
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಅವನ ಕೈ ಕಾಲು ಮುರಿದು ಹಾಕ್ಬೇಕು’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಮರಣ ದಂಡನೆಯೇ ಇಂತಹ ಕಾಮುಕರಿಗೆ ಸರಿಯಾದ ಶಿಕ್ಷೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ