
ಕೈ ತುಂಬಾ ಸಂಬಳ ಸಿಗೋ ಉದ್ಯೋಗ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಅಂದುಕೊಳ್ತಾರೆ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಆದರೆ ನಾವು ಅಂದುಕೊಂಡಂತೆ ಅಲ್ಲಿ ಅವರ ಇರಲ್ಲ. ಎಲ್ಲವೂ ದುಬಾರಿಯಾಗಿರುತ್ತದೆ. ಇದೀಗ ಜರ್ಮನಿಯಿಂದ (Germany) ಭಾರತಕ್ಕೆ ಮರಳಿದ ಅನಿವಾಸಿ ಭಾರತೀಯನಿಗೆ (Non-Resident Indian) ಈ ಅನುಭವ ಆಗಿದೆ. ವ್ಯಕ್ತಿಯೊಬ್ಬ ಭಾರತದಲ್ಲಿ ದಿನನಿತ್ಯದ ವಸ್ತುಗಳು ಕೈಗೆಟುಕುವ ಬೆಲೆಯಲ್ಲಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ವಿದೇಶಕ್ಕೂ ಇಲ್ಲಿಗೂ ಇಷ್ಟೇ ವ್ಯತ್ಯಾಸ ಎಂದಿದ್ದಾರೆ.
ಈ ವಿಡಿಯೋದ ಕ್ಲಿಪ್‌ನಲ್ಲಿ ಈಗಷ್ಟೇ ಹಿಂದಿರುಗಿದ ದೇಶಕ್ಕಿಂತ ಭಾರತದಲ್ಲಿ ಎಲ್ಲವೂ ಅಗ್ಗವಾಗಿದೆ ಎಂದು ಬರೆಯಲಾಗಿದೆ. ವ್ಯಕ್ತಿಯೊಬ್ಬ ತನ್ನ ಸಹೋದರಿಯೊಂದಿಗೆ ದಿನಸಿ ಅಂಗಡಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇಲ್ಲಿನ ಸಾಮಾನ್ಯ ಉತ್ಪನ್ನಗಳ ಬೆಲೆಗಳನ್ನು ನೋಡಿ ನಂಬಲಾಗದ ಪ್ರತಿಕ್ರಿಯೆ ನೀಡುತ್ತಿದ್ದಾನೆ. ಭಾರತದಲ್ಲಿ 20 ರೂ ಟಿಕ್ ಟ್ಯಾಕ್ ಬಾಕ್ಸ್ ಅನ್ನು ಕೈಗೆತ್ತಿಕೊಂಡಾಗ ಅವನಿಗೆ ಮೊದಲು ಆಘಾತವಾಗುತ್ತದೆ. ಅದೇ ಪುದೀನ ಕ್ಯಾಂಡಿಯ ಬೆಲೆ ಜರ್ಮನಿಯಲ್ಲಿ ಸುಮಾರು 200 ರೂ ಎಂದು ಶಾಕ್‌ನಿಂದ ಹೇಳುವುದನ್ನು ಕಾಣಬಹುದು.
ತದನಂತರದಲ್ಲಿ ಆ ವ್ಯಕ್ತಿ 2.25 ಲೀಟರ್ ಕೋಕ್ ಬಾಟಲಿಯನ್ನು ಕೈಗೆತ್ತಿಕೊಂಡಾಗ ಅದರ ಬೆಲೆ ಕೇವಲ 95 ರೂ ಎನ್ನುವುದು ತಿಳಿಯುತ್ತದೆ. ಜರ್ಮನಿಯಲ್ಲಿ, ಎರಡು ಲೀಟರ್ ಬಾಟಲಿಯು ಸುಮಾರು 250 ರೂ ಕ್ಕೆ ಮಾರಾಟವಾಗುತ್ತದೆ ಹೇಳುವುದನ್ನು ನೋಡಬಹುದು. ಇನ್ನು 100 ರೂ ಸಿಗುವ ಫ್ರೂಟಿ ಬಾಟಲಿಯನ್ನು ನೋಡಿ ಆತಂಕಗೊಂಡು ಭಾರತೀಯ ತಿಂಡಿಗಳು ವಿದೇಶಗಳಲ್ಲಿಯೂ ಲಭ್ಯವಿಲ್ಲ ಎಂದು ಉತ್ಸಾಹದಿಂದ ಹಂಚಿಕೊಂಡಿದ್ದಾನೆ. ಖರೀದಿಸಿದ ಒಟ್ಟು ವಸ್ತುಗಳ ಬಿಲ್ ಕೇವಲ 1,273 ರೂ ಆಗಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾನೆ.
ಈ ವಿಡಿಯೋ ಇಪ್ಪತ್ತನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ನೀವು ಹೇಳಿದ್ದು ನಿಜ. ನಾನು ಭಾರತೀಯ ದಿನಸಿಗಳಿಗೆ ಮೂರು ಪಟ್ಟು ಹಣವನ್ನು ಕೊರಿಯಾದಲ್ಲಿ ಕೊಟ್ಟು ಖರೀದಿಸುತ್ತೇನೆ ಎಂದಿದ್ದಾರೆ. ಇನ್ನೊಬ್ಬರು ವಿದೇಶಿ ಜೀವನವನ್ನು ಆಯ್ಕೆ ಮಾಡಿಕೊಂಡದ್ದು ನೀವೇ, ಇಲ್ಲಿಯೇ ಇದಿದ್ದರೆ ಕಡಿಮೆ ಸಂಬಳ ಇದ್ರೂ ನೆಮ್ಮದಿಯಿಂದ ಬದುಕಬಹುದಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ನಿಮಗೆ ಎದು ಅಚ್ಚರಿಯೆನಿಸಬಹುದು. ಭಾರತದಲ್ಲಿ ನೆಲೆಸಿರುವ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಈ ಬೆಲೆಯೇ ಹೆಚ್ಚು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Sun, 26 October 25