ಇಂದೋರ್: ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಏನೇ ಮೂಗಿನ ಮೇಲೆ ಕುತೂಹಲದ ಬೆರಳಿಡುವಂತೆ ಮಾಡುವ ಈ ಸುದ್ದಿಯಂತೂ ಸತ್ಯ. ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಈ ತಳಿಯ ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 500ರಿಂದ 1,000 ಸಾವಿರ. ಅಬ್ಬಾ! ಅನಿಸಿತಾ? ಹೌದು, ನೂರ್ಜಹಾನ್ ತಳಿಯ ಈ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ.
ನೂರ್ಜಹಾನ್ ತಳಿ ಅಫ್ಘಾನಿಸ್ತಾನ ಮೂಲದ್ದೆಂದೂ, ಅಲಿರಾಜ್ಪುರ್ ಜಿಲ್ಲೆಯ ಕಾಥಿವಾಡ ಪ್ರಾಂತ್ಯದಲ್ಲೊಂದೇ ಬೆಳೆಯಲಾಗುವುದು ಎಂದು ತಿಳಿಸುತ್ತಾರೆ ಇಲ್ಲಿನ ರೈತರು. ಹಿಂದಿನ ವರ್ಷಕ್ಕಿಂತ ಈ ವರ್ಷ ಇನ್ನೂ ತ್ತಮ ಬೆಳೆ ಕೈಗೆ ದೊರೆತಿದೆ. ಆದರೂ ಬೆಲೆ ತುಂಬಾ ಚೆನ್ನಾಗಿದೆ ನೂರ್ಜಹಾನ್ ಮಾವನ್ನು ಬೆಳೆದ ರೈತರು ತಿಳಿಸಿದ್ದಾರೆ. ಓರ್ವ ರೈತನ ಜಮೀನಿನಲ್ಲಿ ಇರುವುದು ಕೇವಲ ಮೂರು ಮಾವಿನ ಮರವಷ್ಟೇ. ಮೂರು ಮರಗಳಿಂದ ಒಟ್ಟು 250 ಮಾವಿನ ಕಾಯಿಗಳು. ಆದರೆ ಒಂದು ಮಾವಿನ ಕಾಯಿಗೆ 500ರಿಂದ ಸಾವಿರದವರೆಗೂ ಬೆಲೆಯಿದೆ. ಈಗಾಗಲೇ ಎಲ್ಲಾ ಕಾಯಿಗಳನ್ನೂ ಗ್ರಾಹಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ.ಹೀಗಾಗಿ ಈ ವರ್ಷ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಿವ್ರಾನ್ ಸಿಂಗ್ ಜಾಧವ್.
ಪಕ್ಕದ ರಾಜ್ಯ ಗುಜರಾತ್ನಿಂದಲೂ ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ ಎನ್ನುತ್ತಾರವರು. ಅಂದಹಾಗೆ ಒಂದು ನೂರ್ಜಹಾನ್ ಮಾವಿನ ಹಣ್ಣು 2ರಿಂದ 3.5ಕೆಜಿಯವರೆಗೂ ತೂಗುತ್ತದಂತೆ. 2.75 ಕೆಜಿ ತೂಕ ಬಂದಿದ್ದ ಒಂದು ಮಾವಿನಹಣ್ಣಿಗೆ ₹1200ವರೆಗೂ ಪಾವತಿಸಿ ಗಿರಾಕಿಗಳು ಖರೀದಿಸಿದ್ದರು.
ಹೀಗೆ ಎಲ್ಲರಿಗೂ ಇಷ್ಟವಾದ ಮಾವಿನಲ್ಲೂ ಬಹು ವೈವಿಧ್ಯತೆಯನ್ನು ಕಾಣಬಹುದು. ಒಂದಕ್ಕಿಮತ ಒಂದು ಸಿಹಿ, ಒಂದಕ್ಕಿಂತ ಇನ್ನೊಂದು ರುಚಿ ಎಂದು ನಾವು ಇಲ್ಲಿಂದಲೇ ನೂರ್ಜಹಾನ್ ತಳಿಯ ಮಾವಿನ ಹಣ್ಣಿನ ಕನಸು ಕಾಣಬಹುದು. ಕೊವಿಡ್ ಪಿಡುಗು ಸಂಪೂರ್ಣವಾಗಿ ಕಡಿಮೆಯಾದ ನಂತರ ಮಧ್ಯ ಪ್ರದೇಶದ ಪ್ರವಾಸಕ್ಕೆ ತೆರಳಿ, ಅದರಲ್ಲೂ ಮಾವಿನ ಹಣ್ಣಿನ ಈ ಸೀಸನ್ನಲ್ಲೇ ಪ್ರವಾಸ ಮಾಡಿ ನೂರ್ಜಹಾನ್ ಮಾವಿನಹಣ್ಣನ್ನು ಸವಿಯಬಹುದು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ
Shah Rukh Khan: ಈ ಶಾರುಖ್ ಖಾನ್ ಅಸಲಿಯೋ ನಕಲಿಯೋ? ಫ್ಯಾನ್ಸ್ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್
(Noor Jahan Mango from Madhya Pradesh rate up to 1 thousand for on one piece)