ಸಾಯುವ ಕೊನೆಯ ಕ್ಷಣದಲ್ಲಿ ಮನಸ್ಸಿನಲ್ಲಿ ಏನು ಆಲೋಚನೆಯಿರಬಹುದು? ಆ ಸಮಯದಲ್ಲಿ ಮನಸ್ಸಿನಲ್ಲಿ ಯಾವೆಲ್ಲಾ ದುಗುಡಗಳಿರಬಹುದು? ಸಾಮಾನ್ಯವಾಗಿ ಸಾಯುವ ಕೊನೆಯ ಹಂತದಲ್ಲಿ ಜನರು ಏನು ಮಾತನಾಡತ್ತಾರೆ? ಏನು ಹೇಳಲು ಪ್ರಯತ್ನಿಸುತ್ತಾರೆ ಎಂಬೆಲ್ಲಾ ಕುತೂಹಲಗಳು ಕೆಲವರಲ್ಲಿ ಕಾಡಿರಬಹುದು. ಸಾಯುವ ಮೊದಲು ಹೆಚ್ಚಿನ ಜನರು ಏನು ಹೇಳುತ್ತಾರೆಂಬುದನ್ನು ಲಾಸ್ ಎಂಜಲೀಸ್ನ (Los Angeles) ನೋಂದಾಯಿತ ನರ್ಸ್ ಅವರು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಒಂದನ್ನು ನೀವು ನಿರೀಕ್ಷಿಸರಬಹುದು. ಆದರೆ ಇನ್ನೊಂದು ಹ್ರದಯವಿದ್ರಾವಕವಾಗಿದ್ದು ಕೆಲವರಿಗೆ ಆಶ್ಚರ್ಯವನ್ನುಂಟೂ ಮಾಡಬಹುದು ಎಂದು ಹೇಳಿದ್ದಾರೆ.
ನರ್ಸ್ ಆಗಿರುವ ಜೂಲಿ ಮ್ಯಾಕ್ ಫ್ಯಾಡೆನ್ (Julie McFadden) ಅವರು ಮೂಲತಃ ಕ್ಯಾಲಿಫೋರ್ನಿಯಾದ (California) ಲಾಸ್ ಎಂಜಲೀಸ್ (Los Angeles)ನವರು. ಅವರು 10 ವರ್ಷಕ್ಕೂ ಹೆಚ್ಚು ಕಾಲ ಐಸಿಯು (ICU) ನಲ್ಲಿ ಕೆಲಸ ಮಾಡಿದ್ದಾರೆ. ನಂತರ ಐದು ವರ್ಷಗಳ ಕಾಲ ಧರ್ಮಶಾಲೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸಿದ್ದಾರೆ. ತಾವು ನರ್ಸ್ ಆಗಿದ್ದಾಗ ತಮ್ಮ ಅನುಭವಗಳು ಹೇಗಿದ್ದವು ಎಂಬುದರ ಕುರಿತಾಗಿ ಟಿಕ್ ಟಾಕ್ನಲ್ಲಿ ಆಗಾಗ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅವರು ಹೇಳುವ ಪ್ರತಿಯೊಂದು ವಿಷಯವೂ ಅಥವಾ ಘಟನೆಯು ತನ್ನ ಕೆಲಸದ ಭಾಗದಲ್ಲಿ ಒಂದು. ಅವುಗಳಲ್ಲಿ ಸಾವಿನ ಬಗ್ಗೆ ಇತರರಿಗೆ ತಿಳಿಸುವುದು ಕೂಡಾ ಒಂದು ಎಂದು ಜೂಲಿ ಹೇಳಿದ್ದಾರೆ.
ನನ್ನ ಕೆಲಸದ ಬಗ್ಗೆ ನಾನು ಮೆಚ್ಚಿಕೊಳ್ಳುತ್ತೇನೆ. ಜನರು ಸಾಯುವ ಹಂತದಲ್ಲಿದ್ದಾಗ ಅವರಿಗೆ ಧೈರ್ಯ ಹೇಳುವುದು, ಕುಟುಂಬದವರಲ್ಲಿ ವಿಶ್ವಾಸ ತುಂಬುವುದು, ಭಾವನಾತ್ಮಕವಾಗಿ ಅವರನ್ನು ಗಟ್ಟಿಗೊಳಿಸುವುದು ಮತ್ತು ದೈಹಿಕವಾಗಿ ಬೆಂಬಲಿಸುವ ಕಾರ್ಯವನ್ನು ಮಾಡುತ್ತೇನೆ. ಅದಲ್ಲದೆ, ಆ ನೋವಿನ ಕ್ಷಣದಲ್ಲಿ ಕುಟುಂಬದವರನ್ನು ಸಮಾಧಾನ ಮಾಡುವುದು ನನ್ನ ಕರ್ತವ್ಯವೂ ಹೌದು. ರೋಗಿಯು ಬದುಕಿಲ್ಲ ಎಂಬುದನ್ನು ಅವರ ಕುಟುಂಬಕ್ಕೆ ಅರ್ಥೈಸುವುದು ನನ್ನ ಕೆಲಸದಲ್ಲಿ ಕಷ್ಟದ ಸಂಗತಿ ಎಂದು ದಿ ಸನ್ ಜೊತೆ ಮಾತನಾಡಿದ ನರ್ಸ್ ಜೂಲಿ ಅನುಭವ ಹಂಚಿಕೊಂಡಿದ್ದಾರೆ.
ಸಾಯುವ ಮೊದಲು ಜನರು ಏನಾದರೂ ಮಾತನಾಡುತ್ತಾರೆ, ಆ ಕೊನೆಯ ಕ್ಷಣದಲ್ಲಿ ರೋಗಿಗಳು ಈಗಾಗಲೇ ಸಾವನ್ನಪ್ಪಿದ ತಮ್ಮ ಪ್ರೀತಿಪಾತ್ರರನ್ನು ಕರೆಯುತ್ತಾರೆ ಎಂದು ಜೂಲಿ ಹೇಳುತ್ತಾರೆ. ಇಲ್ಲವೇ ಅವರ ತಂದೆ ತಾಯಿಯ ಹೆಸರನ್ನು ಕರೆಯಬಹುದು. ಅವರ ತಂದೆ ತಾಯಿ ಈಗಾಗಲೇ ಸಾವನ್ನಪಿದ್ದರೂ ಸಹ ಅದು ಸಾಮಾನ್ಯ. ಇಲ್ಲವೇ ಜನರು ತಮ್ಮ ಕೊನೆಯ ಕ್ಷಣದಲ್ಲಿ ಐ ಲವ್ ಯು ಕೂಗುತ್ತಾರೆ ಎಂದು ನರ್ಸ್ ಜೂಲಿ ಹೇಳಿದ್ದಾರೆ.
ಜೂಲಿ ತಮ್ಮ ಇತ್ತೀಚಿನ ವಿಡಿಯೊವೊಂದರಲ್ಲಿ ಹೇಳಿರುವಂತೆ, ಜನರ ಜೀವನದ ಕೊನೆಯ ಕ್ಷಣದಲ್ಲಿ ಮನಸ್ಸಿನಲ್ಲಿ ಸಂಭವಿಸುವ ಕೆಲವು ವಿಷಯಗಳು ಯಾವುವು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದು ನಿಜವಾಗಿಯೂ ಅಸಹಜವಾಗಿ ಕಂಡು ಬಂದರು ಅದು ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಇವುಗಳಲ್ಲಿ ಉಸಿರಾಟದ ಬದಲಾವಣೆಗಳು, ಚರ್ಮದ ಬಣ್ಣದಲ್ಲಿನ ಬದಲಾವಣೆ, ಜ್ವರ ಮುಂತಾದವು ಮನುಷ್ಯ ಸಾಯುವ ಕೊನೆಯ ಕ್ಷಣದಲ್ಲಿ ಎದುರಾಗುತ್ತವೆ ಎಂದಿದ್ದಾರೆ.
ಈ ಆಶ್ಚರ್ಯದ ಸಂಗತಿ ಹಲವು ವಿಧಗಳಲ್ಲಿ ಕಾಣಿಸಿಕೊಳ್ಳಬಹುದು. ಅಂದರೆ ಅವರು ಇದ್ದಕ್ಕಿದ್ದಂತೆ ತಿನ್ನುವುದು, ಮಾತನಾಡುವುದು, ನಡೆಯುವುದು ಅಥವಾ ಹಳೆಯ ಅವರ ಸ್ವಭಾವದಂತೆ ವರ್ತಿಸುವುದು, ನಗುವುದು, ತಮಾಷೆ ಮಾಡುವುದು ಈ ರೀತಿಯ ವರ್ತನೆಗಳನ್ನು ತೋರುತ್ತಾರೆ. ಹೆಚ್ಚಿನ ಜನರಿಗೆ ತಿಳಿದಿಲ್ಲದ ಸಾವಿನ ಸಂದರ್ಭದಲ್ಲಿಯೂ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳಲು ಮತ್ತು ಸಾವನ್ನು ಸಾಮಾನ್ಯೀಕರಿಸಲು ಬಯಸುತ್ತೇನೆ ಎಂದು ಜೂಲಿ ಹೇಳಿದ್ದಾರೆ.
ತಾವು ಟಿಕ್ ಟಾಕ್ ಬಳಸುವ ಬಗ್ಗೆ ಮಾತನಾಡಿದ ನರ್ಸ್ ಜ್ಯೂಲಿ, ನಾನು ಆತ್ಮೀಯರನ್ನು ಮಾತನಾಡಿಸಲೆಂದು ಅವರ ಮನೆಗೆ ಹೋಗಿದ್ದಾಗ ಅವರು ಟಿಕ್ ಟಾಕ್ನಲ್ಲಿ ನೃತ್ಯದ ವಿಡಿಯೊ ಮಾಡುವ ಮೂಲಕ ಪೋಸ್ಟ್ ಹರಿಬಿಟ್ಟಿದ್ದರು. ಅವರ ನೃತ್ಯದ ವಿಡಿಯೊವನ್ನು ನೋಡಲು ನಾನು ಕುತೂಹಲನಾಗಿದ್ದೆ. ಆ ನಂತರ ಮೊದಲ ಬಾರಿಗೆ ಟಿಕ್ ಟಾಕ್ ಬಳಸಿದೆ. ನರ್ಸ್ ಆಗಿರುವ ನಾನು ನನ್ನ ಅನುಭವಗಳನ್ನು ಒಂದೊಂದೇ ಜನರಿಗೆ ತಿಳಿಸಿಲು ಟಿಕ್ ಟಾಕ್ ಬಳಸುತ್ತಿದ್ದೆ. ನಾನು ಆರು ತಿಂಗಳಿನಿಂದ ವಿಡಿಯೊ ಹಂಚಿಕೊಳ್ಳುತ್ತಿದ್ದೇನೆ. ಇದೀಗ ನನಗೆ 340,000 ಹಿಂಬಾಲಕರಿದ್ದಾರೆ ಎಂದು ಜೂಲಿ ಮಾತನಾಡಿದ್ದಾರೆ.
ಇದನ್ನೂ ಓದಿ:
Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು!
Viral News: ಫೇಸ್ಬುಕ್ ಬಳಸುವಾಗೆಲ್ಲಾ ಕಪಾಳಮೋಕ್ಷ ಮಾಡಲು ಮಹಿಳೆಯನ್ನು ನೇಮಿಸಿಕೊಂಡ ಇಂಡಿಯನ್- ಅಮೆರಿಕನ್ ವ್ಯಕ್ತಿ!
Published On - 8:38 am, Fri, 19 November 21