AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಫೇಸ್​ಬುಕ್​ ಬಳಸುವಾಗೆಲ್ಲಾ ಕಪಾಳಮೋಕ್ಷ ಮಾಡಲು ಮಹಿಳೆಯನ್ನು ನೇಮಿಸಿಕೊಂಡ ಇಂಡಿಯನ್- ಅಮೆರಿಕನ್ ವ್ಯಕ್ತಿ!

ಫೇಸ್​ಬುಕ್​ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಕಪಾಳಮೋಕ್ಷ ಮಾಡಲು ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡ ಉದ್ಯಮಿ. ಈ ಹೊಸ ಪ್ರಯೋಗವು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.

Viral News: ಫೇಸ್​ಬುಕ್​ ಬಳಸುವಾಗೆಲ್ಲಾ ಕಪಾಳಮೋಕ್ಷ ಮಾಡಲು ಮಹಿಳೆಯನ್ನು ನೇಮಿಸಿಕೊಂಡ ಇಂಡಿಯನ್- ಅಮೆರಿಕನ್ ವ್ಯಕ್ತಿ!
TV9 Web
| Edited By: |

Updated on: Nov 12, 2021 | 9:15 AM

Share

ಸಾಮಾನ್ಯವಾಗಿ ಹೆಚ್ಚಿನ ಸಮಯವನ್ನು ಆನ್​ಲೈನ್​, ಇಂಟರ್​ನೆಟ್​, ಮೊಬೈಲ್​ ಇವುಗಳಲ್ಲಿಯೇ ಕಳೆದು ಬಿಡುತ್ತೇವೆ. ಅದರಲ್ಲಿಯೂ ಫೇಸ್​ಬುಕ್​ ಇನ್​ಸ್ಟಾಗ್ರಾಮ್​ ಹೀಗೆ ಅನೇಕ ಸಾಮಾಜಿಕ ವೇದಿಕೆಗಳನ್ನು ಮೊಬೈಲ್​ನಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಸಾಮಾಜಿಕ ವೇದಿಕೆಗಳ ಬಳಕೆ ಇಷ್ಟರ ಮಟ್ಟಿಗೆ ಒಗ್ಗಿಕೊಂಡುಬಿಟ್ಟಿದೆ ಅಂದರೆ, ಮೊಬೈಲ್​ನಲ್ಲಿ ಫೇಸ್​ಬುಕ್​ ನೋಡುತ್ತಿದ್ದರೆ ಸಮಯ ಕಳೆಯುತ್ತಿರುವುದೇ ಅರಿವಿಗೆ ಬರುವುದಿಲ್ಲ. ಅಂತಹ ಸಮಯದಲ್ಲಿ ಕೆಲಸದಲ್ಲಿ ಆಸಕ್ತಿ ಬರುವಂತೆ ಮಾಡಿಕೊಳ್ಳಲು ಮತ್ತು ಸಮಯವನ್ನು ವ್ಯರ್ಥ ಮಾಡದೇ ತನ್ನ ಉದ್ಯಮದಲ್ಲಿ ಹೆಚ್ಚಿನ ಗಳಿಕೆ ಸಾಧಿಸಲು ವೇರೆಬಲ್ ಡಿವೈಸಸ್ ಬ್ರಾಂಡ್ ಪಾವ್ಲೋಕ್ (wearable devices brand Pavlok) ಸಂಸ್ಥಾಪಕ ಮನೀಶ್ ಸೇಥಿ ಅವರು ಹೊಸ ಪ್ರಯೋಗವನ್ನು ಪ್ರಾರಂಭಿಸಿದರು. ಅವರು ಫೇಸ್​ಬುಕ್​ ಬಳಸಿದಾಗಲೆಲ್ಲಾ ಕಪಾಳ ಮೋಕ್ಷ ಮಾಡಲು ಓರ್ವ ಮಹಿಳೆಯನ್ನು ಕೆಲಸಕ್ಕಾಗಿ ನೇಮಿಸಿಕೊಂಡರು. ಈ ಹೊಸ ಪ್ರಯೋಗದ ಮೂಲಕ ಯಶಸ್ವಿಯಾದ ಕಥೆ ಮತ್ತೆ ಇಂಟರ್​ನೆಟ್​ನಲ್ಲಿ ಫುಲ್ ವೈರಲ್ ಆಗಿದೆ.

ಸೇಥಿ ಅವರು ಅಮೆರಿಕಾದ ಜಾಹಿರಾತುಗಳ ವೆಬ್​ಸೈಟ್​ ಕ್ರೇಗ್ಲಿಸ್ಟ್ ಮೂಲಕ ಮಹಿಳೆಯನ್ನು ನೇಮಿಸಿಕೊಂಡರು. ಕೆಫೆಯಲ್ಲಿ ಅಥವಾ ಮನೆಯಲ್ಲಿ ಅವರ ಪಕ್ಕದಲ್ಲಿ ಕುಳಿತು ಯಾವಾಗಲೂ ಕೆಲಸದಲ್ಲಿ ಎಚ್ಚರದಿಂದಿರಲು ನೋಡಿಕೊಳ್ಳಲು ಅವರು ಗಂಟೆಗೆ 8 ಡಾಲರ್ ನೀಡುತ್ತಿದ್ದರು. ನಾನು ಸಮಯವನ್ನು ವ್ಯರ್ಥ ಮಾಡುತ್ತಿರುವಾಗ ನೀವು ನನ್ನ ಮೇಲೆ ಕೂಗಾಡಬೇಕು ಅಥವಾ ಅಗತ್ಯವಿದ್ದಲ್ಲಿ ನನಗೆ ಕಪಾಳಮೋಕ್ಷ ಮಾಡಿ ಎಂದು ಅವರು 2012ರಲ್ಲಿ ಜಾಹಿರಾತಿನಲ್ಲಿ ಬರೆದಿದ್ದರು. ಮಹಿಳೆಯನ್ನು ನೇಮಿಸಿಕೊಂಡ ಬಳಿಕ ಅವರ ವಿವೇಚನಾ ಶಕ್ತಿ ಮತ್ತು ಅವರ ಹೊಸ ಪ್ರಯೋಗವು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.

ಹೆಚ್ಚಿನ ದಿನಗಳಲ್ಲಿ ನನ್ನ ಸರಾಸರಿ ಉತ್ಪಾದಕತೆ ಸುಮಾರು ಶೇ. 35 ರಿಂದ 45 ರಷ್ಟಿತ್ತು. ಕಾರಾ ಎಂಬ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡ ಬಳಿಕ ನನ್ನ ಕೆಲಸದಲ್ಲಿ ಉತ್ಪಾದನೆ ಶೇ 98ಕ್ಕೆ ಏರಿಕೆಯಾಗಿದೆ ಎಂದು ಅವರು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ. ಸೇಥಿ ಅವರ ಹೊಸ ಪ್ರಯೋಗವು 2012ರಲ್ಲಿ ವ್ಯಾಪಕವಾಗಿ ಹರಡಿತು. ಇದೀಗ ಒಂಭತ್ತು ವರ್ಷಗಳ ಬಳಿಕ ಎಲೋನ್ ಮಸ್ಕ್ ಅವರು ಕಳುಹಿಸಿದ ಎಮೋಜಿಯಿಂದ ಪುನಃ ಇಂಟರ್ನೆಟ್​ನಲ್ಲಿ ಸುದ್ದಿಯಲ್ಲಿದೆ.

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಈ ಹೊಸ ಪ್ರಯೋಗದ ಕುರಿತಾದ ಟ್ವೀಟ್​ಗೆ ಎರಡು ಬೆಂಕಿಯ ಎಮೋಜಿ ಕಳುಹಿಸುವ ಮೂಲಕ ಸರಳವಾಗಿ ಪ್ರತಿಕ್ರಿಯಿಸಿದರು. ಹೀಗಾಗಿ ಈ ಪ್ರಯೋಗವು​ ಅವರ ಹಿಂಬಾಲಕರಿಗೆ ಕುತೂಹಲವನ್ನು ಕೆರಳಿಸಿತು. ನಾನು ಈ ಚಿತ್ರದಲ್ಲಿರುವ ವ್ಯಕ್ತಿ. ಎಲೋನ್​ ಮಸ್ಕ್​ ಅವರು ನನ್ನ ಟ್ವೀಟ್​ಗೆ ಎಮೋಜಿಗಳನ್ನು ಕಳುಹಿಸಿದ್ದಾರೆ ಎಂದು ಸೇಥಿ ಅವರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಈ ಪ್ರಯೋಗದ ಆಧಾರದ ಮೇಲೆ ಅವರು ವೇರೆಬಲ್ ಡಿವೈಸಸ್ ಕಂಪನಿಯನ್ನು ಸ್ಥಾಪಿಸಿದರು. ಎಲೋನ್ ಅವರು ಎಮೋಜಿಗಳನ್ನು ಕಳುಹಿಸಿದ ಬಳಿಕ ಸೇಥಿ ಅವರು ಇಂದು ನನ್ನ ದಿನವಲ್ಲವೇ? ಎಂದು ಉತ್ತರಿಸಿದ್ದಾರೆ. ಇತರ ಸಾಮಾಜಿಕ ಬಳಕೆದಾರರೂ ಸಹ ಕಪಾಳಮೋಕ್ಷದ ಪ್ರಯೋಗದ ಬಗ್ಗೆ ಕಾಮೆಂಟ್ ಮಾಡಿದ ಕೂಡಲೇ ಈ ಹೊಸ ಪ್ರಯೋಗ ಮತ್ತೆ ಇಂಟರ್​ನೆಟ್​ನಲ್ಲಿ ಸುದ್ದಿಯಲ್ಲಿದೆ.

ಇದನ್ನೂ ಓದಿ:

Viral News: ಗಾಂಜಾ ಎಣ್ಣೆ ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಲು ಸಹಾಯಕವೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ

Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್