Viral Video: ಚಾಕೊಲೇಟ್ ಬ್ರೌನಿ ವಿತ್ ಪಾನ್! ಈ ವಿಲಕ್ಷಣ ಆಹಾರ ಸಂಯೋಜನೆ ಕಂಡು ಏನೇನ್ ನೋಡ್ಬೇಕಪ್ಪಾ ಎಂದ ನೆಟ್ಟಿಗರು
ಇದೀಗ ವೈರಲ್ ಆದ ವಿಡಿಯೊವೆಂದರೆ ಚಾಕೊಲೇಟ್ ಬ್ರೌನಿಯೊಂದಿಗೆ ಪಾನ್ ನೀಡಲಾಗುತ್ತಿದೆ. ಈ ವಿಭಿನ್ನ ರೀತಿಯ ತಿಂಡಿ ಕೆಲವರಿಗೆ ವಿಚಿತ್ರ ಅನಿಸರೆ ಇನ್ನು ಕೆಲವರು ಇನ್ನೇನೇನ್ ನೋಡ್ಬೇಕಪ್ಪಾ! ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಅಹಮದಾಬಾದ್ನಲ್ಲಿ ಒರಿಯೊ ಬಿಸ್ಕೆಟ್ನಿಂದ ತಯಾರಿಸಿದ ಪಕೋಡಾ ವೈರಲ್ ಆಗಿತ್ತು. ಇದೀಗ ವೈರಲ್ ಆದ ವಿಡಿಯೊವೆಂದರೆ ಚಾಕೊಲೇಟ್ ಬ್ರೌನಿಯೊಂದಿಗೆ ಪಾನ್ ನೀಡಲಾಗುತ್ತಿದೆ. ಈ ವಿಭಿನ್ನ ರೀತಿಯ ತಿಂಡಿ ಕೆಲವರಿಗೆ ವಿಚಿತ್ರ ಅನಿಸರೆ ಇನ್ನು ಕೆಲವರು ಇನ್ನೇನೇನ್ ನೋಡ್ಬೇಕಪ್ಪಾ! ಎಂದು ಹೇಳಿದ್ದಾರೆ. ಈ ವಿಲಕ್ಷಣ ಆಹಾರದ ಸಂಯೋಜನೆಯ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.
ಹೊಸ ಹೊಸ ವಿಧಾನದ ಖಾದ್ಯವನ್ನು ಸವಿಯುವುದು ಕೆಲವರಿಗೆ ಇಷ್ಟ. ಆದರೆ ವಿಲಕ್ಷಣ ಆಹಾರ ಸಂಯೋಜನೆಯು ಕೆಲವು ಬಾರಿ ಇಷ್ಟವಾಗುವುದಿಲ್ಲ. ಅದೇ ರೀತಿ ಚಾಕೊಲೇಟ್ ಬ್ರೌನಿ ಜೊತೆ ಪಾನ್ ಇಟ್ಟು ಹೊಸ ರೆಸಿಪಿ ತಯಾರಿಸಲಾಗಿದೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು ಕೆಲವರು ಇಷ್ಟಪಟ್ಟಿದ್ದರೆ ಇನ್ನು ಕೆಲವರು ಇದೇನಪ್ಪಾ ವಿಚಿತ್ರ ಎಂದು ಉತ್ತರಿಸಿದ್ದಾರೆ.
Pan and Browny Combo. Only from Ahmedabad, Gujarat. ???? pic.twitter.com/ggXwGURFS1
— raman (@Dhuandhaar) November 9, 2021
ವಿಡಿಯೊದಲ್ಲಿ ಗಮನಿಸುವಂತೆ ಬಿಸಿ ತಟ್ಟೆಯಲ್ಲಿ ಚಾಕೊಲೇಟ್ ಸಾಸ್ಅನ್ನು ಹಾಕಿದ ನಂತರ ಐಸ್ ಕ್ರೀಮ್ ಇಡಲಾಗುತ್ತದೆ. ಅದರ ಮೇಲೆ ಪಾನ್ ಇರಿಸಿ ವಿಭಿನ್ನ ಶೈಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪಾನ್ ಮತ್ತು ಚಾಕೊಲೇಟ್ ಬ್ರೌನಿ ಕಾಂಬಿನೇಶನ್ ಖಾದ್ಯ ಗುಜರಾರ್ನ ಅಹಮದಾಬಾದ್ನಿಂದ.. ಎಂಬ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ. 146 ಸಾವಿರ ವೀಕ್ಷಣೆಗಳನ್ನು ವಿಡಿಯೊ ಗಳಿಸಿಕೊಂಡಿದೆ. ನೆಟ್ಟಿಗರು ಈ ಖಾದ್ಯವನ್ನು ಇಷ್ಟಪಟ್ಟಿಲ್ಲ. ಬ್ರೌನಿ ಪ್ರಿಯರು ಅಹಸ್ಯವಾಗಿದೆ ಎಂದು ಉತ್ತರಿಸಿದ್ದಾರೆ. ಪಾನ್ ಪ್ರಿಯರೂ ಸಹ ಈ ಕಾಂಬಿನೇಶನ್ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.
Pan and Browny Combo. Only from Ahmedabad, Gujarat. ???? pic.twitter.com/ggXwGURFS1
— raman (@Dhuandhaar) November 9, 2021
Pan and Browny Combo. Only from Ahmedabad, Gujarat. ???? pic.twitter.com/ggXwGURFS1
— raman (@Dhuandhaar) November 9, 2021
?? Enough internet for today https://t.co/dzmJWPNAYy
— Thafheem (@thafhm7) November 10, 2021
ಇದನ್ನೂ ಓದಿ:
Viral Video: ಮದುವೆ ದಿನ ಅಪ್ಪನ ಜೊತೆಗೆ ವೇದಿಕೆಯ ಮೇಲೆ ಕುಣಿದ ಮಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್
Published On - 10:54 am, Fri, 12 November 21