AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು!

Trending News: ಮಧ್ಯಪ್ರದೇಶದ ರಾಯಘಡದಲ್ಲಿ ನವೆಂಬರ್ 7ರಂದು ಮುಸ್ಲಿಂ ಸಮುದಾಯದ ಯುವಕ- ಯುವತಿಯ ಮದುವೆ ನಡೆಯುತ್ತಿತ್ತು. ಮದುವೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಸಿದ್ಧವಾಗಿದ್ದ ಯುವತಿ ಇನ್ನೇನು ತನ್ನ ವರನಿಗೆ ಕಬೂಲ್ ಎಂದು ಹೇಳಬೇಕಾಗಿತ್ತು.

Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು!
ಮದುವೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Nov 13, 2021 | 7:28 PM

Share

ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ಏನೇನೋ ಕನಸುಗಳಿರುತ್ತವೆ. ಆದರೆ, ಭಾರತದ ಮದುವೆಗಳಲ್ಲಿ ಒಂದಲ್ಲ ಒಂದು ರೀತಿಯ ಹೈಡ್ರಾಮಾಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲೇ ವಧು-ವರರು ಬದಲಾದ ಅದೆಷ್ಟೋ ಪ್ರಕರಣಗಳು ನಡೆದಿವೆ. ಇನ್ನು ಕೆಲವೊಮ್ಮೆ ಮದುವೆ ಮಂಟಪದಿಂದ ಓಡಿ ಹೋದ ಹುಡುಗಿ ಇನ್ಯಾರನ್ನೋ ಮದುವೆಯಾದ ಘಟನೆಗಳೂ ನಡೆದಿವೆ. ಆದರೆ, ಮದುವೆಯಾಗಲು ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ವಧು ತನಗೆ ಈ ಹುಡುಗ ಬೇಡ ಎಂದು ವರನನ್ನು ತಿರಸ್ಕರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆ ವಧು ವರನನ್ನು ತಿರಸ್ಕರಿಸಲು ಕಾರಣವೇನೆಂದು ತಿಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಿ.

ಮಧ್ಯಪ್ರದೇಶದ ರಾಯಘಡದಲ್ಲಿ ನವೆಂಬರ್ 7ರಂದು ಮುಸ್ಲಿಂ ಸಮುದಾಯದ ಯುವಕ- ಯುವತಿಯ ಮದುವೆ ನಡೆಯುತ್ತಿತ್ತು. ಮದುವೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಸಿದ್ಧವಾಗಿದ್ದ ಯುವತಿ ಇನ್ನೇನು ತನ್ನ ವರನಿಗೆ ಕಬೂಲ್ ಎಂದು ಹೇಳಬೇಕಾಗಿತ್ತು. ಆದರೆ, ವರ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಮದುವೆ ಮನೆಯ ಕಳೆಯೇ ಬದಲಾಯಿತು. ಆಕೆ ತನಗೆ ಈ ಮದುವೆ ಇಷ್ಟವಿಲ್ಲ ಎಂದು ಘೋಷಿಸಿಬಿಟ್ಟಳು.

ಮದುವೆಗೆ ಬಂದಿದ್ದ ತನ್ನ ಗೆಳೆಯರ ಜೊತೆ ಕುಳಿತು ವರನೂ ಮದ್ಯಪಾನ ಮಾಡಿದ್ದ. ಮದುವೆಗೂ ಮುನ್ನ ಏರ್ಪಡಿಸಿದ್ದ ಪಾರ್ಟಿಯಲ್ಲಿ ವಧು-ವರರ ಮನೆಯವರು ಕುಡಿದು ಎಂಜಾಯ್ ಮಾಡಿದ್ದರು. ಆದರೆ, ತನ್ನನ್ನು ಮದುವೆಯಾಗುವ ಹುಡುಗನೂ ಆಲ್ಕೋಹಾಲ್ ಕುಡಿಯುತ್ತಾನೆ ಎಂದು ವಧುವಿಗೆ ಗೊತ್ತಿರಲಿಲ್ಲ. ಗೆಳೆಯರೊಂದಿಗೆ ಆಲ್ಕೋಹಾಲ್ ಕುಡಿದು ಟೈಟ್ ಆಗಿದ್ದ ವರನಿಗೆ ಮದುವೆಯಲ್ಲಿ ವಧುವಿನ ಪಕ್ಕ ಗಟ್ಟಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ.

ಇದರಿಂದ ಕೋಪಗೊಂಡ ವಧು ತಾನು ಆ ಹುಡುಗನನ್ನು ಮದುವೆಯಾಗುವುದಿಲ್ಲ ಎಂದಿದ್ದಾಳೆ. ಈ ಮದುವೆಗೆ ಒಪ್ಪಿಗೆ ಇದೆಯೇ? ಎಂದು ಮುಸ್ಲಿಂ ಧರ್ಮಗುರುಗಳು ಕೇಳಿದಾಗ ನನಗೆ ಈ ಮದುವೆ ಇಷ್ಟವಿಲ್ಲ (ಕಬೂಲ್ ನಹೀ) ಎಂದು ಹೇಳಿದ್ದಾಳೆ.

ಮದ್ಯವ್ಯಸನಿಯಾದ ಹುಡುಗನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಯುವತಿ ಹೇಳಿದ್ದರಿಂದ ಆಕೆಯ ಕುಟುಂಬಸ್ಥರು ಈ ಮದುವೆಯನ್ನು ರದ್ದುಗೊಳಿಸಿದ್ದಾರೆ. ಕಳೆದ ವರ್ಷ ಇದೇ ರೀತಿಯ ಹಲವು ಘಟನೆಗಳು ನಡೆದಿದ್ದವು. ಮಟನ್ ಊಟವಿಲ್ಲವೆಂದು, ವಧುವಿನ ಅಂಕಲ್ ಮೇಲೆ ಆರೋಪ ಮಾಡಿದ್ದಕ್ಕೆ ಮದುವೆ ರದ್ದಾದ ಪ್ರಕರಣಗಳು ಕೂಡ ನಡೆದಿದ್ದವು.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ