Childhood : ಮನೆಯನ್ನೇ ತಮ್ಮ ಜಗತ್ತಾಗಿಸಿಕೊಂಡು ಮನಬಂದಂತೆ ಇದ್ದ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಒಮ್ಮೊಮ್ಮೆ ಕೋಪ ಬಂದುಬಿಡುತ್ತದೆ! ಪಕ್ಷಿಯಂತೆ ರೆಕ್ಕೆ ಬಿಚ್ಚಿ ಹಾರಾಡಿಕೊಂಡಿರುವ ಅವುಗಳನ್ನು ಶಿಸ್ತಿನ ನೆಪದಲ್ಲಿ ಪ್ರತೀ ಹಂತಕ್ಕೂ ಕಟ್ಟಿಹಾಕುತ್ತಿದ್ದರೆ ಹೇಗಾಗಬೇಡ ಮತ್ತೆ? ಅದಕ್ಕೆ ಒಮ್ಮೊಮ್ಮೆ ಟೀಚರ್ ಮೇಲೆ ಕೋಪ ಬರುತ್ತದೆ. ವ್ಯಾನ್ ಡ್ರೈವರ್ ಮೇಲೆ ಕೋಪ ಬರುತ್ತದೆ. ವ್ಯಾನ್ (Van) ಆಂಟೀಗಳ ಮೇಲೂ ಕೋಪ ಬರುತ್ತದೆ. ಆ ಕೋಪ ಹಾಗೇ ಮುಂದುವರಿದಿದ್ದರೆ ಅಮ್ಮ ಅಪ್ಪನ ಮೇಲೂ ಬರುತ್ತದೆ. ಒಟ್ಟಿನಲ್ಲಿ ಕೋಪ ಕೋಪ ಕೋಪ! ಇದೀಗ ಈ ಮುದ್ದಾದ ಹೆಣ್ಣುಮಗುವಿಗೆ ಯಾಕೆ ಕೋಪ ಬಂದಿದೆ ಅಂತ ಕೇಳಿ.
‘ಯಾವಾಗಲೂ ಸೈಲಂಟ್ ಆಗಿರು ಅಂತ ಹೇಳ್ತಾನೇ ಇರ್ತಾರೆ ಬಸ್ ಆಂಟೀ. ಸಣ್ಣ ವಿಷಯಕ್ಕೂ ಚೂರೂ ಮಾತಾಡೋ ಹಾಗಿಲ್ಲ, ನಗುವ ಹಾಗೂ ಇಲ್ಲ. ನನಗೆ ಕೋಪ ಬಂದಿದೆ ಅವರ ಮೇಲೆ. ಆ ಲಿಪ್ಸ್ಟಿಕ್ ಆಂಟೀ ಜೊತೆ ನೀ ಮಾತಾಡು. ನನಗೆ ಬೇಜಾರಾಗಿ ಹೋಗಿದೆ. ಯಾವಾಗಲೂ ಸೈಲಂಟ್ ಆಗಿರು ಅಂತಾರೆ, ಹುಚ್ಚು ಹಿಡಿದಿದೆ ಅವರಿಗೆ.’ ಅಮ್ಮನಿಗೆ ಈ ಮಗು ಮುದ್ದುಮುದ್ದಾಗಿ ಹೀಗೆ ಕಂಪ್ಲೆಂಟ್ ಹೇಳಿದೆ.
ಇದನ್ನೂ ಓದಿ : Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?
ಈತನಕ ಈ ವಿಡಿಯೋ ಅನ್ನು 1.9 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ತಮಾಷೆ ಅಲ್ಲ. ನಿಜಕ್ಕೂ ಮಗು ತುಂಬಾ ಬೇಸರದಲ್ಲಿದೆ, ಭಾರತೀಯ ಶಾಲೆಗಳ ವಸ್ತುಸ್ಥಿತಿ ಇದು ಎಂದಿದ್ದಾರೆ ಒಬ್ಬರು. ಹತ್ತನೇ ಕ್ಲಾಸಿನಲ್ಲಿರುವ ಮಕ್ಕಳು ಕೂಡ ಇಷ್ಟೊಂದು ಚೆನ್ನಾಗಿ ಇಂಗ್ಲಿಷ್ ಮಾತನಾಡಲಾರರು ಎಂದಿದ್ದಾರೆ ಮತ್ತೊಬ್ಬರು. ಆ ಏರು ಧ್ವನಿ, ಕೈ ಮಾಡಿ ಮಾತಾಡುವ ರೀತಿ, ಮುಖದ ಮೇಲಿನ ಆ ಭಾವ ಎಲ್ಲವೂ ಬಹಳ ಮುದ್ದಾಗಿದೆ. ತಮಗಾದ ನೋವನ್ನು ಹೀಗೆ ಮಕ್ಕಳು ವ್ಯಕ್ತಪಡಿಸಬೇಕು ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಕಥಕ್ನಲ್ಲಿ ಕಾಮ್ ಡೌನ್; ನಿಜಕ್ಕೂ ಇದು ಕಣ್ಣಿಗೆ ಕಿವಿಗೆ ಹಬ್ಬವೇ ಎನ್ನುತ್ತಿರುವ ನೆಟ್ಟಿಗರು
ಮಕ್ಕಳೊಂದಿಗೆ ಪೋಷಕರು ಹೀಗೆಯೇ ಮಾತನಾಡಬೇಕು. ಮಕ್ಕಳು ತಮಗನ್ನಿಸಿದ್ದನ್ನು ಹೇಳುವಾಗ ತಡೆಯಬಾರದು. ಅಳು ಬಂದರೆ ಅಳಲಿ, ಕೋಪ ಬಂದರೆ ವ್ಯಕ್ತಪಡಿಸಲಿ ಆದರೆ ಹತ್ತಿಕ್ಕಬೇಡಿ. ಬೆಳವಣಿಗೆಯಲ್ಲಿ ಈ ಎಲ್ಲ ಪ್ರಕ್ರಿಯೆಯೂ ನಡೆಯುತ್ತಿರಬೇಕು ಎಂದಿದ್ದಾರೆ ಮತ್ತೊಬ್ಬರು. ಒಟ್ಟಿನಲ್ಲಿ ಮಕ್ಕಳ ಕೋಪ, ಬೇಸರ, ನೋವನ್ನು ಎಂದಿಗೂ ಕಡೆಗಣಿಸಬಾರದು. ಅದು ಅವರೊಳಗೆ ಬೇರೂರುವ ಮೊದಲು ಅದನ್ನು ಚಿವುಟಿ ಮಕ್ಕಳ ಹೃದಯದಲ್ಲಿ ಹೂವನ್ನರಳಿಸುವ ಕೆಲವನ್ನು ಪೋಷಕರೂ, ಶಿಕ್ಷಕರೂ ಮಾಡಲೇಬೇಕು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:24 pm, Tue, 8 August 23