Video: ತಂದೆಯ ಪ್ರಾರ್ಥನೆಗೆ ಒಲಿದ ಪುರಿ ಜಗನ್ನಾಥ; ದೇವರ ಪಾದದಡಿಗೆ ಹಾಕುತ್ತಿದ್ದಂತೆ ಚೇತರಿಸಿಕೊಂಡ ಬಾಲಕ

ಬದುಕಿನಲ್ಲಿ ಕೆಲವೊಮ್ಮೆ ಕಹಿ ಘಟನೆ ಸಂಭವಿಸುತ್ತದೆ. ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲ್ಲ. ನಮ್ಮಿಂದ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ದೇವರ ಮೇಲೆ ಭಾರ ಹಾಕಿ ಕುಳಿತು ಬಿಡುತ್ತೇವೆ. ಹೌದು, ಕೋಮದಲ್ಲಿದ್ದಮಗನನ್ನು ಎತ್ತಿಕೊಂಡು ಬಂದು ಪುರಿ ಜಗನ್ನಾಥ ದೇವರ ಮುಂದೆ ನೀನೇ ಕಾಪಾಡು ಎಂದು ಬೇಡಿಕೊಂಡ ಅಸಹಾಯಕ ತಂದೆಯ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ.

Video: ತಂದೆಯ ಪ್ರಾರ್ಥನೆಗೆ ಒಲಿದ ಪುರಿ ಜಗನ್ನಾಥ; ದೇವರ ಪಾದದಡಿಗೆ ಹಾಕುತ್ತಿದ್ದಂತೆ ಚೇತರಿಸಿಕೊಂಡ ಬಾಲಕ
ವೈರಲ್‌ ವಿಡಿಯೋ
Image Credit source: Instagram

Updated on: Nov 17, 2025 | 11:53 AM

ಒಡಿಶಾ, ನವೆಂಬರ್‌ 17:  ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಪವಾಡಗಳನ್ನು ನಂಬಲು ಅಸಾಧ್ಯ. ಆದರೆ ದೇವರು ಇದ್ದಾನೆ ಎನ್ನುವುದಕ್ಕೆ ಕೆಲವು ದೃಶ್ಯಗಳು ಸಾಕ್ಷಿಯಾಗುತ್ತದೆ. ಇಲ್ಲೊಬ್ಬ ತಂದೆಯು ತನ್ನ ಪ್ರಪಂಚವಾಗಿದ್ದ ಮಗನನ್ನು ಉಳಿಸಿಕೊಳ್ಳಲು ಪುರಿ ಜಗನ್ನಾಥನ ಮೊರೆ ಹೋಗಿದ್ದಾನೆ. ಕೋಮದಲ್ಲಿದ್ದ ಎಂಟು ವರ್ಷದ ಬಾಲಕನು (Boy) ಬದುಕಿ ಉಳಿಯಲ್ಲ ಎಂದು ವೈದ್ಯರು ಕೈಚೆಲ್ಲಿದಾಗ ಈ ವ್ಯಕ್ತಿಗೆ ದಿಕ್ಕೇ ತೋಚದಂತಾಗಿದೆ. ಕೊನೆಗೆ ದೇವರೇ ದಿಕ್ಕು ಎಂದುಕೊಂಡು ಮಗನನ್ನು ಎತ್ತಿಕೊಂಡು ಒಡಿಶಾದ ಪುರಿ ಜಗನ್ನಾಥ (Odisha, Puri Jagannath) ಸನ್ನಿಧಾನಕ್ಕೆ ಅಸಹಾಯಕ ತಂದೆ ಬಂದಿದ್ದಾನೆ. ಆಮೇಲೆ ಆಗಿದ್ದು ನೋಡಿದ್ರೆ ನಿಮಗೆ ನಂಬಲು ಕಷ್ಟವಾಗಬಹುದು. ಈ  ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ಎಂತಹವರ ಕಣ್ಣಲ್ಲಿ ನೀರು ತರಿಸುವಂತಿದೆ.

ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಚೇತರಿಕೆ ಕಂಡ ಬಾಲಕ

ಭಾರತ್‌ (Bharat) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಮಗನನ್ನು ಉಳಿಸಿಕೊಳ್ಳಲು ಅಸಹಾಯಕ ತಂದೆಯ ಸ್ಥಿತಿ ಹಾಗೂ ದೇವರು ಇದ್ದಾನೆ ಎನ್ನುವುದಕ್ಕೆ ವಿಡಿಯೋ ಸಾಕ್ಷಿಯಾಗಿದೆ. ಕೋಮದಲ್ಲಿದ್ದ ಎಂಟು ವರ್ಷದ ಮಗುವನ್ನು ಉಳಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದಾಗ  ಪುರಿ ಜಗನ್ನಾಥನ ಸನ್ನಿಧಿಗೆ ಎತ್ತಿಕೊಂಡು ಬಂದು ದೇವರ ಪಾದದಡಿಗೆ ಹಾಕುತ್ತಿರುವುದನ್ನು ಕಾಣಬಹುದು. ಅಸಹಾಯಕ ತಂದೆಯೂ ಮಗನನ್ನು ಉಳಿಸಿ ಕೊಡು ಎಂದು ಅಳುತ್ತಾ ಪ್ರಾರ್ಥನೆ ಸಲ್ಲಿಸಿದ್ದಾನೆ. ಈ ಜಗನ್ನಾಥನ ಕೃಪೆಯಿಂದ ಕೋಮದಲ್ಲಿದ್ದ ಬಾಲಕನು ನಿಧಾನಕ್ಕೆ ತಲೆ ಅಲ್ಲಾಡಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಓದುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ; ಹಣ್ಣು ವ್ಯಾಪಾರ ಮಾಡಿ ತಾಯಿಗೆ ನೆರವಾಗುವ ಪುಟ್ಟ ಬಾಲಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದೇವರು ಇದ್ದಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದಿದ್ದಾರೆ. ಮತ್ತೊಬ್ಬರು, ಅಸಹಾಯಕ ತಂದೆ ಸ್ಥಿತಿ ಕಂಡು ಕಣ್ಣೀರು ಬಂತು, ಆದರೆ ಕೊನೆಗೆ ದೇವರು ಕಣ್ಣು ಬಿಟ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಹೃದಯ ಸ್ಪರ್ಶಿ ವಿಡಿಯೋ, ದೇವರು ಇದ್ದಾನೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Mon, 17 November 25