AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಳ್ಳಿ ಜನರಿಗೆ ಇದು ದಿನನಿತ್ಯದ ಕೆಲ್ಸ, ಸಿಟಿ ಜನರಿಗೆ ಇದುವೇ ವರ್ಕ್ ಔಟ್

ಹಳ್ಳಿ ಜೀವನ ನೋಡೋಕೆ ಮಾತ್ರ ಅಲ್ಲ, ಅನುಭವಿಸುವುದಕ್ಕೂ ಚಂದ. ಆದರೆ ಈಗಿನ ಕಾಲದವರಿಗೆ ಹಳ್ಳಿ ಜೀವನ, ಕೆಲಸದ ಬಗ್ಗೆ ತಿಳಿದಿಲ್ಲ. ಆದರೆ ಸಿಟಿ ಜನರು ಮೈ ದಂಡಿಸಿ ಹಳ್ಳಿ ಜನರು ಮಾಡೋ ಕೆಲಸವನ್ನು ಜಿಮ್ ಅಥವಾ ಫಿಟ್ನೆಸ್ ಸೆಂಟರ್‌ನಲ್ಲಿ ಮಾಡುವಂತಾಗಿದೆ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಹಳ್ಳಿ ಜನರಿಗೆ ಇದು ದಿನನಿತ್ಯದ ಕೆಲ್ಸ, ಸಿಟಿ ಜನರಿಗೆ ಇದುವೇ ವರ್ಕ್ ಔಟ್
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Nov 16, 2025 | 5:03 PM

Share

ಆಧುನಿಕತೆಯ ಹೆಸರಿನಲ್ಲಿ ನಾವಿಂದು ಬದಲಾಗಿದ್ದೇವೆ. ನಾವು ಮಾಡಬಹುದಾದ ದಿನನಿತ್ಯದ ಕೆಲಸಗಳನ್ನು (daily work) ಈ ಮೆಷಿನ್ ಗಳೇ ಮಾಡಿ ಮುಗಿಸುತ್ತಿವೆ. ಹೀಗಾಗಿ ಸಿಟಿ ಜನರು ಉಂಡು ತಿಂದು ರೆಸ್ಟ್ ಮಾಡ್ತಾ ಇದ್ದಾರೆ. ಮೈ ದಂಡಿಸಿಕೊಳ್ಳಲು ಜಿಮ್, ವರ್ಕ್ ಔಟ್ (workout) ಹಾಗೂ ಫಿಟ್ ನೆಸ್ ಸೆಂಟರ್‌ಗಳಿಗೆ ತೆರಳಿ ಒಂದಿಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಇದೀಗ ಇತಿಹಾಸ ಮರುಕಳಿಸುತ್ತಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹಳ್ಳಿ ಜನರು ತಮ್ಮ ದಿನನಿತ್ಯ ಮಾಡುವ ಕೆಲಸವನ್ನು ಸಿಟಿ ಜನರು ಫಿಟ್‌ನೆಟ್‌ ಹಾಗೂ ವರ್ಕ್ ಔಟ್ ಹೆಸರಿನಲ್ಲಿ ಮಾಡುತ್ತಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ.

ಕೆಲ್ಸ ಒಂದೇ, ಆಯ್ಕೆ ಮಾಡಿಕೊಂಡ ರೀತಿ ಬೇರೆ

Tripurantahaka GL ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಅರ್ಥ ಪೂರ್ಣ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋಗೆ ಎಲ್ಲಿ ಮಾಡಬೇಕು ಅಲ್ಲಿ ಮಾಡಿದ್ದರೆ ಇಲ್ಲಿ ಹೀಗೆ ಮಾಡುವ ಅಗತ್ಯವಿರಲಿಲ್ಲ. ಹಾಸ್ಯ ಸನ್ನಿವೇಶ ಬಂದಾಗ ನಗದೆ ಮುಖ ಗಂಟೆಕ್ಕಿಕೊಂಡು, ವೈದ್ಯರ ಸಲಹೆ ಮೇರೆಗೆ ನಗೆ ಕ್ಲಬ್ ಸೇರಿದಂತೆ, ವಿನಾಕಾರಣ ನಕ್ಕು ಹಾಸ್ಯಾಸ್ಪದವಾಗುವಂತೆ, ಮನೆಯಲ್ಲಿ ಫಿಟ್‌ ಆಗುವ ಅವಕಾಶಗಳನ್ನು ಕಳೆದುಕೊಂಡರೆ ಫಿಟ್‌ನೆಸ್‌ ಸೆಂಟರ್‌ಗೆ ಸೇರಬೇಕಾಗುತ್ತದೆ ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ಹಳ್ಳಿ ಜನರು ಮಾಡುವ ಬಟ್ಟೆ ತೊಳೆಯುವ, ಹಾಲು ಕರೆಯುವ ಹಾಗೂ ಬೆರಣಿ ತಟ್ಟುವ ಕೆಲಸವನ್ನು ಸಿಟಿಯ ಮಹಿಳೆಯರು ವರ್ಕ್ ಔಟ್‌ ಹೆಸರಿನಲ್ಲಿ ಫಿಟ್‌ನೆಸ್‌ ಸೆಂಟರ್‌ನಲ್ಲಿ ಮಾಡುತ್ತಿರುವುದನ್ನು ಗಮನಿಸಬಹುದು.

ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದೇ ಕೆಲಸವನ್ನು ಮನೆಯಲ್ಲಿ ಮಾಡಿದರೆ ತಾಯಿಗೂ ಸಹಾಯ ಮಾಡಿದ್ದಂಗೆ ಆಗುತ್ತೆ, ಆರೋಗ್ಯವು ಚೆನ್ನಾಗಿ ಇರುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇತ್ತೀಚೆಗಿನ ಜೀವನ ಐಷಾರಾಮಿ, ಅರ್ಧ ವಯಸ್ಸಿಗೆ ಪೂರ್ಣ ವಿರಾಮ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಸರ್​​ ಪ್ಲೀಸ್​​ ನನ್ನ ಹಣ ನೀಡಿ: ದುಡಿದ ಹಣಕ್ಕಾಗಿ ರೈಲಿನ ಹಿಂದೆ ಓಡಿದ ಕೂಲಿ

ಇನ್ನೊಬ್ಬ ಬಳಕೆದಾರ ಇದೆಲ್ಲಾ ಬೇಕಿತ್ತಾ ಇದನ್ನೇ ಪ್ರಾಯೋಗಿಕವಾಗಿ ಮನೆಯಲ್ಲೇ ಮಾಡಿ, ಮನೆಯಲ್ಲಿ ಕೆಲಸಕ್ಕೆ ಆಳು ಇದ್ದರೇ ಬಿಡಿಸಿ ಸ್ವತಃ ನೀವೇ ಮಾಡ್ರಮ್ಮ,,, ಹಿಂದೆ ಅಮ್ಮ ಅಜ್ಜಿ ಕಾಲದಲ್ಲಿ ಅಡುಗೆ ಮನೆ ಜಿಮ್ ಆಗಿತ್ತು,, ಕುಟ್ಟುವುದು, ರುಬ್ಬುವುದು, ಬೀಸುವುದು, ನೆಲದ ಮೇಲೆ ಕುಳಿತು ತರಕಾರಿ ಹೆಚ್ಚುವುದು, ಬಾವಿ ಕಟ್ಟೆ ಯಲ್ಲಿ ನೀರು ಸೇದುವುದು. ಅದಕ್ಕೆ ಅವರು ಆರೋಗ್ಯವಾಗಿ 100 ವರ್ಷ ಬದುಕಿದ್ದು. ವಯಸ್ಸಾಗಿ ಸತ್ತರೆ ಹೊರತು ಖಾಯಿಲೆ ಬಿದ್ದು ಅಲ್ಲಾ ಎಂದು ವಾಸ್ತವ ಸ್ಥಿತಿ ಬಗ್ಗೆ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Sun, 16 November 25