Video: ನಮ್ಮ ವಸ್ತುಗಳು ಇಲ್ಲಿ ಸೇಫ್, ಬೆಂಗಳೂರು ಇಷ್ಟವಾಗೋದು ಇದೇ ಕಾರಣಕ್ಕೆ ಎಂದ ಇಟಲಿಯನ್ ಮಹಿಳೆ
ವಿದೇಶಿ ಮಹಿಳೆಯು ಅಂಗಡಿಯೊಂದರ ಹೊರಗಡೆ ನಿಲ್ಲಿಸಿದ ವಾಹನದಲ್ಲಿಯೇ ಹೆಲ್ಮೆಟ್ ಅನ್ನು ಬಿಟ್ಟು ಬಂದಿದ್ದಾರೆ. ತಾವು ಹೆಲ್ಮೆಟ್ ಮರೆತು ಬಂದಿರುವ ಬಗ್ಗೆ ವಿಡಿಯೋ ಮಾಡಿದ್ದು, ಬೆಂಗಳೂರಿನಲ್ಲಿ ವಸ್ತುಗಳು ಎಷ್ಟು ಸುರಕ್ಷಿತವಾಗಿರುತ್ತವೆ ಹಾಗೂ ಇದು ಸೇಫ್ ಸಿಟಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ವಿದೇಶಿಯರಿಗೆ ಭಾರತವೆಂದರೆ ಅದೇನೋ ಸೆಳೆತ. ಹೀಗಾಗಿ ಇಲ್ಲಿನ ಪ್ರವಾಸಿ ತಾಣಗಳ ಸವಿಯಲು ಬರುವ ಇಲ್ಲಿನ ಜನರು ತೋರುವ ಪ್ರೀತಿಗೆ ಕಳೆದೇ ಹೋಗುತ್ತಾರೆ. ಇಲ್ಲಿನ ಆಚಾರ ವಿಚಾರವನ್ನು ಇಷ್ಟ ಪಟ್ಟು ಭಾರತದಲ್ಲೇ ನೆಲೆಸಲು ಇಷ್ಟ ಪಡುತ್ತಾರೆ. ಇಟಲಿಯನ್ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ (Bengaluru) ನೆಲೆಸಿದ್ದಾರೆ. ತಾವು ಬಳಸುವ ವಸ್ತುಗಳು ಈ ನಗರದಲ್ಲಿ ಎಷ್ಟು ಸೇಫ್ ಆಗಿರುತ್ತವೆ ಎನ್ನುವುದನ್ನು ಅರಿತು ಕೊಂಡಿದ್ದಾರೆ. ಹೌದು, ಬೆಂಗಳೂರಿನಲ್ಲಿ ಅಂಗಡಿಯೊಂದಕ್ಕೆ ತೆರಳಿದ ವಿದೇಶಿ ಮಹಿಳೆ ಹೆಲ್ಮೆಟ್‌ನ್ನು ಮರೆತು ಸ್ಕೂಟರ್‌ನಲ್ಲೇ ಬಿಟ್ಟಿದ್ದಾರೆ. ಕೊನೆಗೆ ಈ ಬಗ್ಗೆ ಅರಿವಿಗೆ ಬಂದಿದೆ. ಕೂಡಲೇ ಹೆಲ್ಮೆಟ್ ಇದೆಯೇ ಎಂದು ವಾಹನದ ಕಡೆಗೆ ನೋಡಿದ್ದಾರೆ. ಈ ಕ್ಲಿಪ್ ವಿದೇಶಿ ಮಹಿಳೆ ಅನುಭವಿಸಿದ ಸುರಕ್ಷತೆಯ ಭಾವನೆಯನ್ನು ಎತ್ತಿ ತೋರಿಸಿದೆ. ಈ ವಿಡಿಯೋದಲ್ಲಿ ಸುರಕ್ಷತೆ ಹಾಗೂ ಭದ್ರತೆಯಲ್ಲಿ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ.
serenaspeaksalot ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೆರೆನಾ ಎಂಬ ವಿದೇಶಿ ಮಹಿಳೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಭಾರತದಲ್ಲಿ ವಾಸಿಸುವುದರಿಂದ ನನಗೆ ಸಿಕ್ಕ ಲಾಭಗಳು ಇಲ್ಲಿ ಸುರಕ್ಷಿತವೆನಿಸುತ್ತದೆ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದಲ್ಲಿ ವಿದೇಶಿ ಮಹಿಳೆಯೊಬ್ಬಳು ದ್ವಿ ಚಕ್ರ ವಾಹನದಲ್ಲೇ ಹೆಲ್ಮೆಟ್ ಬಿಟ್ಟು ಅಂಗಡಿಗೆ ತೆರಳಿದ್ಧಾರೆ. ನಾನು ನನ್ನ ಹೆಲ್ಮೆಟನ್ನು ಅಲ್ಲಿಯೇ ಬಿಟ್ಟೆ ಎಂದು ವಿಡಿಯೋದ ಮೇಲೆ ಬರೆಯಲಾಗಿದೆ. ಆ ಬಳಿಕ ಈ ಮಹಿಳೆ ಅಂಗಡಿಯಿಂದ ಹೊರ ಬಂದು ಸ್ಕೂಟರ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಈ ಕ್ಲಿಪ್ ನಲ್ಲಿ ಅಯ್ಯೋ ಇಟಲಿಯಲ್ಲಿಯಾದ್ರೆ 2 ನಿಮಿಷ ಕೂಡ ಈ ವಸ್ತುಗಳು ಉಳಿಯಲ್ಲ ಎಂದು ಬರೆದಿರುವುದನ್ನು ನೋಡಬಹುದು.
ಇದನ್ನೂ ಓದಿ:ಬೆಂಗಳೂರಿನಲ್ಲಿ ವಸತಿ ದರ ಹೆಚ್ಚಳ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ
ಈ ವಿಡಿಯೋ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೆಂಗಳೂರಿನಲ್ಲಿ ನಿಮ್ಮ ಹೆಲ್ಮೆಟ್ ಎಲ್ಲಿ ಬಿಟ್ಟು ಹೋಗ್ಬಹುದು, ಸೇಫ್ ಆಗಿರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಕಾರಣಕ್ಕಾಗಿ ನಾನು ಭಾರತವನ್ನು ಪ್ರೀತಿಸುತ್ತೇವೆ ಎಂದಿದ್ದಾರೆ. ಇನ್ನೊಬ್ಬರು, ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




