ಬೆಂಗಳೂರಿನಲ್ಲಿ ಮೊಮೊಸ್ ಮಾರಾಟ ಮಾಡಿ ತಿಂಗಳಿಗೆ 31 ಲಕ್ಷ ರೂ. ಗಳಿಸಿದ ವ್ಯಕ್ತಿ, ಇದು ನಿಜಾನಾ? ಎಂದ ನೆಟ್ಟಿಗರು
ಇಶಾನ್ ಶರ್ಮಾ ಎಂಬ ಕಂಟೆಂಟ್ ಕ್ರಿಯೇಟರ್ ಮೊಮೊಸ್ನಿಂದ ಲಕ್ಷ ಲಕ್ಷ ಗಳಿಸಬಹುದು ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಾಸಿಕ 30 ಲಕ್ಷ ರೂ. ದುಡಿಯಬಹುದು ಎಂದು ಸ್ವತಃ ತಾವೇ ಹೋಗಿ ಮೊಮೊಸ ಮಾರಾಟ ಮಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆ ಕಾರಣವಾಗಿದೆ. ಈ ಸುದ್ದಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲ ಮೂಡಿಸಿದೆ.

ಬೆಂಗಳೂರಿನಲ್ಲಿ ಯಾವುದೇ ವ್ಯಾಪಾರ ಮಾಡಿದ್ರು ಲಕ್ಷ..ಲಕ್ಷ ದುಡಿಯಬಹುದು ಎಂಬುದಕ್ಕೆ ಈ ವ್ಯಕ್ತಿ ಸಾಕ್ಷಿ ನೋಡಿ. ಇಶಾನ್ ಶರ್ಮಾ ಅವರು ಒಬ್ಬ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (ಕ್ಯಾಸಿ ಪರೇರಾ) ಬೆಂಗಳೂರಿನ ಬೀದಿಯಲ್ಲಿ ಮೊಮೊಸ್ (Bengaluru Momos) ಮಾರಾಟ ಮಾಡಿ ಲಕ್ಷ.. ಲಕ್ಷ ದುಡಿಯುವ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮೊಮೊಸ್ ಮಾರಾಟದಿಂದ ತಿಂಗಳಿಗೆ 30 ಲಕ್ಷ ರೂ ಸಂಪಾದಿಸಬಹುದು, ಅಂದರೆ ದಿನಕ್ಕೆ 1 ಲಕ್ಷ ರೂ. ಆಯಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ. ಕೆಕೆ ಮೊಮೊಸ್ ಎಂಬ ಈ ಸ್ಟಾಲ್, ಹೆಚ್ಚು ಗ್ರಾಹಕರನ್ನು ಗಳಿಸಿಕೊಂಡಿದೆ. ಚಿಕ್ಕ ಸ್ಟಾಲ್ ಆದ್ರೂ ಲಕ್ಷ ಲಕ್ಷ ಗಳಿಸುತ್ತಿದೆ. ಇಲ್ಲಿನ ಮೊಮೊಸ್ ಅನ್ನು ಜನ ಅಷ್ಟೊಂದು ಇಷ್ಟಪಡುತ್ತಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಬೆಂಗಳೂರಿನ ಈ ಮೊಮೊಸ್ ಸ್ಟಾಲ್ನಲ್ಲಿ ಒಂದು ದಿನದ ಮಟ್ಟಿಗೆ ಕೆಲಸ ಮಾಡಬೇಕು ಎಂದು ಹೋದೆ. ನಾನೇ ಮೊಮೊಸ್ ತಯಾರಿಸಿ ಮಾರಾಟ ಮಾಡಿದೆ. ಇದಕ್ಕೆ ಆ ಸ್ಟಾಲ್ನ ಮಾಲೀಕರು ಕೂಡ ಸ್ವಲ್ಪ ಸಹಾಯ ಮಾಡಿದ್ದಾರೆ. ಇಲ್ಲಿ ಜನ ಇಷ್ಟಪಟ್ಟು ಮೊಮೊಸ್ ತಿನ್ನುತ್ತಾರೆ. ಒಂದು ಗಂಟೆಯಲ್ಲಿ 118 ಪ್ಲೇಟ್ ಮೊಮೊಸ್ ಖರೀದಿಯಾಗುತ್ತದೆ. ಸ್ವಲ್ಪವೂ ವಿರಾಮ ತೆಗೆದುಕೊಳ್ಳದೇ ಕೆಲಸ ಮಾಡಿದ್ದೇನೆ. ಇಲ್ಲಿಗೆ ಬರುವ ಜನರಿಗೆ ಕುಡಿಯಲು ನೀರಿನಿಂದ ಹಿಡಿದು ಮೊಮೊಸ್ ಮಾಡುವವರೆಗೆ ಎಲ್ಲವನ್ನು ನಾನೇ ಮಾಡಿದೆ. ಜತೆಗೆ ಇಲ್ಲಿ ಸೂಪ್ ಕೂಡ ಇದೆ. ಅದಕ್ಕೂ ಬೇಡಿಕೆಯಿದೆ. ಮೊಮೊಸ್ನಲ್ಲಿ ಬೇರೆ ಬೇರೆ ಪಾಕಗಳು ಇದೆ. ದಿನದಲ್ಲಿ 950 ಪ್ಲೇಟ್ ಮೊಮೊಸ್ ಮಾರಾಟವಾಗುತ್ತದೆ. ಒಂದು ಪ್ಲೇಟ್ ಮೊಮೊಸ್ಗೆ 110 ರೂ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ ಪ್ಲೀಸ್ ನನ್ನ ಹಣ ನೀಡಿ: ದುಡಿದ ಹಣಕ್ಕಾಗಿ ರೈಲಿನ ಹಿಂದೆ ಓಡಿದ ಕೂಲಿ
ಇಲ್ಲಿದೆ ನೋಡಿ ವಿಡಿಯೋ
View this post on Instagram
ದಿನಕ್ಕೆ ಒಂದು ಪ್ಲೇಟ್ ಮೊಮೊಸ್ಗೆ 110 ರೂ. ಬೆಲೆಯಾದರೆ, ದಿನಕ್ಕೆ 1 ಲಕ್ಷ ದುಡಿಯುತ್ತಾರೆ ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದನ್ನು ನೆಟ್ಟಿಗರು ನಂಬಿಲ್ಲ. ಏಕೆಂದರೆ ಈ ಹಿಂದೆ ಯೂಟ್ಯೂಬರ್ ಇಶಾನ್ ಶರ್ಮಾ ಅವರು ಬೆಂಗಳೂರಿನಲ್ಲಿ ತಮ್ಮ ಮೊದಲ ಮನೆಯನ್ನು ಖರೀದಿಸುವ ಬಗ್ಗೆ ಎಕ್ನಲ್ಲಿ ಹಂಚಿಕೊಂಡಿದರು. ಈ ಬಗ್ಗೆ ಭಾರೀ ಟೀಕೆಗಳು ಬಂತು. ಇದು ಸುಳ್ಳು ಎಂದು ನೆಟ್ಟಿಗರು ಹೇಳಿದ್ದರು. ಇದೀಗ ಮೊಮೊಸ್ ಬಗ್ಗೆ ಎಕ್ಸ್ನಲ್ಲಿ ಹಾಕಿಕೊಂಡು ಮತ್ತೆ ಟೀಕೆಗೆ ಒಳಲಾಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Sat, 15 November 25




