AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಳಗ್ಗೆಯಿಂದ ರಾತ್ರಿ ತನಕ ಬ್ಯುಸಿ, ಆದ್ರೂ ಲೈಫ್‌ನಲ್ಲಿ ಫುಲ್‌ ಹ್ಯಾಪಿ; ಈ ಯುವಕನ ಬ್ಯುಸಿ ಶೆಡ್ಯೂಲ್ ಹೇಗಿದೆ ನೋಡಿ

ಮನಸ್ಸು ಮಾಡಿದ್ರೆ ಅಸಾಧ್ಯವಾದದ್ದು ಯಾವುದಿಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಯುವಕ. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಆಫೀಸ್ ಕೆಲಸ ಮಾಡಿ, ಸಂಜೆ ಬೈಕ್ ಟ್ಯಾಕ್ಸಿ ಓಡಿಸುವುದರಲ್ಲಿ ಬ್ಯುಸಿ ಈ ಎನರ್ಜಿಟಿಕ್‌ ಯುವಕ. ಹೌದು, ಒಂದೇ ಒಂದು ನಿಮಿಷ ಬಿಡುವಿಲ್ಲದೆ ಸದಾ ಬ್ಯುಸಿಯಾಗಿರುವ ಯುವಕನ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಯುವಕನ ಬ್ಯುಸಿ ಲೈಫ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಳಗ್ಗೆಯಿಂದ ರಾತ್ರಿ ತನಕ ಬ್ಯುಸಿ, ಆದ್ರೂ ಲೈಫ್‌ನಲ್ಲಿ ಫುಲ್‌ ಹ್ಯಾಪಿ; ಈ ಯುವಕನ ಬ್ಯುಸಿ ಶೆಡ್ಯೂಲ್ ಹೇಗಿದೆ ನೋಡಿ
ದೀಪಕ್ ಪಾಂಡೆImage Credit source: Instagram
ಸಾಯಿನಂದಾ
|

Updated on:Jun 04, 2026 | 1:18 PM

Share

ನಮ್ಮಲ್ಲಿ ಯಾರನ್ನಾದ್ರೂ ಕೇಳಿದ್ರೆ ಕೆಲಸಕ್ಕೆ (Office) ಹೋಗಿ ಬಂದು ಸುಸ್ತು ಆಗುತ್ತದೆ. ಆಫೀಸ್‌ಗೆ ಹೋಗಿ ಬರುವಷ್ಟರಲ್ಲಿ ಟೈಮ್ ಆಗಿ ಬಿಡುತ್ತದೆ. ಮನೆಗೆ ಬಂದು ಮಲಗಿದ್ರೆ ಸಾಕು ಎಂದು ಹೇಳುವವರೇ ಹೆಚ್ಚು. ಇದೆಲ್ಲದರ ನಡುವೆ ಈ ಯುವಕನ ಬಿಡುವಿಲ್ಲದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಎನರ್ಜಿಟಿಕ್ ಯುವಕನ ಹೆಸರು ದೀಪಕ್ ಪಾಂಡೆ (Deepak Pandey). ಬೆಳಗ್ಗೆ 9 ರಿಂದ 5 ಗಂಟೆ ತನಕ ಆಫೀಸ್ ಕೆಲಸ. ಸಂಜೆ ಆಫೀಸ್‌ ಮುಗಿಸಿ ಬಂದು ರಾತ್ರಿ 11 ಗಂಟೆವರೆಗೆ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಾನೆ. ಅದರ ಪಿಹೆಚ್‌ಡಿ ಓದು ಹಾಗೂ ವಿಡಿಯೋ ಎಡಿಟಿಂಗ್ ಹೀಗೆ ಎಲ್ಲಾ ಕೆಲಸವನ್ನು ಯಾವುದೇ ಒತ್ತಡವಿಲ್ಲದೇ ನಿಭಾಯಿಸಿಕೊಂಡು ಹೋಗುವುದನ್ನು ಕಂಡು ಎಲ್ಲರೂ ಅಚ್ಚರಿ ಪಟ್ಟುಕೊಂಡಿದ್ದಾರೆ. ಸದಾ ಆಕ್ಟಿವ್ ಆಗಿರುವ ಈ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಕ್ ಪಾಂಡೆ ಎಂಬ ಯುವಕ ತನ್ನ ಇನ್‌ಸ್ಟಾಗ್ರಾಮ್‌ ವಿಡಿಯೋ ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್‌ನಲ್ಲಿ ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ. ನಾನು ಯಾಕೆ ಖುಷಿಯಾಗಿದ್ದೇನೆ ಗೊತ್ತಾ? ನನ್ನ ಜೀವನದಲ್ಲಿ ಮೊದಲ ಬಾರಿಗೆ, ನನ್ನಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಎಂಬುದು ನನಗೆ ತಿಳಿಯಿತು. ನಾಲ್ಕು ಜನ ಏನು ಅಂತಾರೋ ನನ್ನಿಂದ ಈ ಕೆಲಸ ಸಾಧ್ಯವಿಲ್ಲ ಅಥವಾ ಹೊಸದಾಗಿ ಏನಾದರೂ ಮಾಡಬೇಕೆಂದರೆ ನಾನು ಈಗ ಮಾಡುವ ಕೆಲಸ ಬಿಡಬೇಕು ಎಂಬ ಭಯವಿತ್ತು. ಈ ಭಯದಿಂದಲೇ ನನಗೆ ನನ್ನ ಸಾಮರ್ಥ್ಯದ ಅರಿವಿರಲಿಲ್ಲ. ನಾನು ನಿಧಾನವಾಗಿ ನನನ್ನು ಬದಲಾಯಿಸಿಕೊಂಡೆ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಮೊದಲಿಗೆ ಪಿಎಚ್‌ಡಿಗೆ ಸೇರಿಕೊಂಡೆ, ಆ ಬಳಿಕ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾದೆ. ತದನಂತರದಲ್ಲಿ ಕಂಟೆಂಟ್ ಕ್ರಿಯೇಷನ್‌ ನತ್ತ ಹೆಜ್ಜೆ ಹಾಕಿದೆ.. ಇಂದು ನಾನು ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಲ್ಲೆ ಎಂಬ ಧೈರ್ಯ ಹಾಗೂ ಆತ್ಮವಿಶ್ವಾಸವಿದೆ ಎಂದಿದ್ದಾನೆ.

ಇದೆಲ್ಲವನ್ನು ಓದಿದ ಮೇಲೆ ನಿಮಗೂ ಇದೆಲ್ಲವೂ ನನಗೇಕೆ ಸಾಧ್ಯವಿಲ್ಲ, ನಾನೇಕೆ ಮಾಡಬಾರದು ಎಂದು ಅನಿಸಬಹುದು. ನಿಮ್ಮಲ್ಲಿ ಸಾಮರ್ಥ್ಯವಿದೆ, ನಿಮಗೆ ಏನಾದ್ರೂ ಮಾಡಬೇಕು ಎಂದುಕೊಂಡಿದ್ದರೆ ಅದಕ್ಕಾಗಿ ಕೆಲಸ ಮಾಡಿ. ನೀವು ಅಂದುಕೊಂಡದ್ದನ್ನು ಮಾಡಲು ಓದು ನಿಲ್ಲಿಸಬೇಡಿ, ಕೆಲಸ ಬಿಡಬೇಡಿ. ಒಮ್ಮಿಂದ ಒಮ್ಮೆ ಕಷ್ಟಗಳು ಬರುತ್ತದೆ. ಆದರೆ ಯಶಸ್ಸು ಸಿಕ್ಕಾಗ, ನಿಮ್ಮ ಸಾಮರ್ಥ್ಯದ ಅರಿವಾದಾಗ ನಿಮಗೆ ನಿಜಕ್ಕೂ ಖುಷಿ ಸಿಗುತ್ತದೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಆಲ್ ದಿ ಬೆಸ್ಟ್, ನಿಮಗೆ ಒಳ್ಳೆದಾಗಲಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ಯುವಕ ಸ್ಫೂರ್ತಿ ಎಂದರೆ, ಮತ್ತೊಬ್ಬರು, ನೀವು ನಿಜಕ್ಕೂ ಗ್ರೇಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Thu, 4 June 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ