Viral Video: ಕೆಟಿಎಂ ಬೈಕ್‌ನಲ್ಲಿ ಪತ್ನಿಯನ್ನು ಕೂರಿಸಿಕೊಂಡು ತಾತನ ಜಾಲಿ ರೈಡ್‌; ವಿಡಿಯೋ ಇಲ್ಲಿದೆ ನೋಡಿ

|

Updated on: Jun 18, 2024 | 6:59 PM

ಸಾಮಾನ್ಯವಾಗಿ ಸ್ಟೈಲಿಶ್‌ ಆಗಿರುವ ಕೆಟಿಎಂ ಬೈಕ್‌ಗಳನ್ನು ಯುವಕರು ಮಾತ್ರ ಓಡಿಸುತ್ತಾರೆ. ಆದ್ರೆ ಇಲ್ಲೊಬ್ಬರು ತಾತ ಯುವಕರಿಂತ ನಾನೇನು ಕಮ್ಮಿಯಿಲ್ಲ ಎಂಬಂತೆ ಕೆಟಿಎಂ ಆರ್‌.ಸಿ 390 ಬೈಕ್‌ನಲ್ಲಿ ತಮ್ಮ ಪತ್ನಿಯನ್ನು ಕೂರಿಸಿಕೊಂಡು ಜಾಲಿ ರೈಡ್‌ ಹೋಗಿದ್ದಾರೆ. ತಾತನ ಈ ಜಬರ್ದಸ್ತ್ ಬೈಕ್‌ ರೈಡಿಂಗ್‌ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಏಜ್‌ ಈಸ್‌ ಜಸ್ಟ್‌ ಎ ನಂಬರ್‌ ಅಂತಿದ್ದಾರೆ ನೆಟ್ಟಿಗರು.

Viral Video: ಕೆಟಿಎಂ ಬೈಕ್‌ನಲ್ಲಿ ಪತ್ನಿಯನ್ನು ಕೂರಿಸಿಕೊಂಡು ತಾತನ ಜಾಲಿ ರೈಡ್‌; ವಿಡಿಯೋ ಇಲ್ಲಿದೆ ನೋಡಿ
Follow us on

ಕೆಟಿಎಂ ಅದೆಷ್ಟೋ ಹುಡುಗರ ನಿದ್ದೆಗೆಡಿಸಿದ ಬೈಕ್‌ ಅಂತಾನೇ ಹೇಳಬಹುದು. ಯುವಕರಿಗಂತೂ ಈ ಕಂಪೆನಿ ಪರಿಚಯಿಸಿದ ಎಲ್ಲಾ ಬೈಕ್‌ ಫೇವರೇಟ್‌. ಈ ಬೈಕ್‌ನಲ್ಲಿ ಯುವಕರು ಸ್ಟೈಲ್‌ ಆಗಿ ಜಾಲಿ ರೈಡ್‌ ಹೋಗುತ್ತಿರುತ್ತಾರೆ. ಸಾಮಾನ್ಯವಾಗಿ ಕೆಟಿಎಂ ಸೇರಿದಂತೆ ಇನ್ನಿತರೆ ಹೊಸ ಮಾಡೆಲ್‌ ಬೈಕ್‌ಗಳ ಸೀಟ್‌ ಸ್ವಲ್ಪ ಎತ್ತರವಾಗಿರುವುದರಿಂದ ಹಿರಿ ಜೀವಗಳು ಅಷ್ಟಾಗಿ ಇಂತಹ ಬೈಕ್‌ಗಳಲ್ಲಿ ಕೂರಲು ಇಷ್ಟಪಡುವುದಿಲ್ಲ. ಆದ್ರೆ ಇಲ್ಲೊಬ್ಬರು ತಾತ ಮಾತ್ರ ಏನಪ್ಪಾ ಯುವಕರು ಮಾತ್ರವೇ ಕೆಟಿಎಂ ಬೈಕ್‌ ಓಡಿಸೋದಾ, ನಾನು ಕೂಡಾ ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಾ ಕೆಟಿಎಂ ಆರ್‌.ಸಿ 390 ಬೈಕ್‌ನಲ್ಲಿ ತಮ್ಮ ಪತ್ನಿಯನ್ನು ಕೂರಿಸಿಕೊಂಡು ಜಾಲಿ ರೈಡ್‌ ಹೋಗಿದ್ದಾರೆ. ತಾತನ ಈ ಜಬರ್ದಸ್ತ್ ಬೈಕ್‌ ರೈಡಿಂಗ್‌ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ತಮಿಳುನಾಡು ಮೂಲದ ವೃದ್ಧ ದಂಪತಿ ಕೆಟಿಎಂ ಆರ್‌ಸಿ 390 ಬೈಕ್‌ನಲ್ಲಿ ಜಾಲಿ ರೈಡ್‌ ಹೊರಟಿದ್ದು, ಈ ಕುರಿತ ಇಂಟರೆಸ್ಟಿಂಗ್‌ ವಿಡಿಯೋವೊಂದನ್ನು rancibridalmakeup ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಬಿದ್ದ ಮುದ್ದಾದ ಜೋಡಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್‌ ವಿಡಿಯೋದಲ್ಲಿ ಬಿಳಿ ಪಂಚೆ ಅಂಗಿ, ಹಸಿರು ಶಾಲು ತೊಟ್ಟು, ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿಕೊಂಡು ತಾತಪ್ಪ ಸ್ಟೈಲಿಶ್‌ ಆಗಿ ಬೈಕ್‌ ಓಡಿಸುತ್ತಿರುವಂತಹ ಸುಂದರ ದೃಶ್ಯವನ್ನು ಕಾಣಬಹುದು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರರು ಇವರ ವಿಡಿಯೋ ಮಾಡಿದಾಗ ಈ ಹಿರಿಯ ಜೋಡಿ ನಾಚಿ ನೀರಾಗಿದ್ದಾರೆ.

ಇದನ್ನೂ ಓದಿ: “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ”… ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ

5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 38 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ 2.8 ಮಿಲಿಯನ್‌ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು, ತಾತನ ಈ ಜಬರ್ದಸ್ತ್‌ ಬೈಕ್‌ ರೈಡಿಂಗ್‌ ವಿಡಿಯೋ ನೋಡಿ ಏಜ್‌ ಈಸ್‌ ಜಸ್ಟ್‌ ಎ ನಂಬರ್‌ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: