Video Viral: ಮಹಿಳೆಯನ್ನು ಕೊಂಬಿನಿಂದ ತಿವಿದು 500 ಮೀಟರ್ ಎಳೆದೊಯ್ದ ಎಮ್ಮೆ

ಮಹಿಳೆಯನ್ನು ಕೊಂಬಿನಿಂದ ತಿರುಚಿ ಅಲ್ಲಿಂದ ಸುಮಾರು 500 ಮೀಟರ್ ಎಳೆದೊಯ್ದಿದೆ. ಆಕೆಯನ್ನು ರಕ್ಷಿಸಲು ಮುಂದಾದ ಇಬ್ಬರ ಮೇಲೂ ದಾಳಿ ಮಾಡಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ.

Video Viral: ಮಹಿಳೆಯನ್ನು ಕೊಂಬಿನಿಂದ ತಿವಿದು 500 ಮೀಟರ್ ಎಳೆದೊಯ್ದ ಎಮ್ಮೆ
ಮಹಿಳೆಯನ್ನು ಕೊಂಬಿನಿಂದ ತಿವಿದು 500 ಮೀಟರ್ ಎಳೆದೊಯ್ದ ಎಮ್ಮೆ
Follow us
ಅಕ್ಷತಾ ವರ್ಕಾಡಿ
|

Updated on: Jun 18, 2024 | 5:20 PM

ತಮಿಳುನಾಡು: ಚೆನ್ನೈನ ತಿರುವೊಟ್ಟಿಯೂರ್ ಪ್ರದೇಶದಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅನಿರೀಕ್ಷಿತವಾಗಿ ಎಮ್ಮೆಯೊಂದು ಏಕಾಏಕಿ ಬಂದು ದಾಳಿ ಮಾಡಿದೆ. ಮಹಿಳೆಯನ್ನು ಕೊಂಬಿನಿಂದ ತಿರುಚಿ ಅಲ್ಲಿಂದ ಸುಮಾರು 500 ಮೀಟರ್ ಎಳೆದೊಯ್ದಿದೆ. ಆಕೆಯನ್ನು ರಕ್ಷಿಸಲು ಮುಂದಾದ ಇಬ್ಬರ ಮೇಲೂ ದಾಳಿ ಮಾಡಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ.

ಎಮ್ಮೆಯ ದಾಳಿಯಿಂದ ತೀವ್ರವಾಗಿ ಗಾಯಗೊಳಗಾದ ಮಹಿಳೆಯನ್ನು ಮಧುಮತಿ (35) ಎಂದು ಗುರುತಿಸಲಾಗಿದೆ. ಮಧುಮತಿ ತನ್ನ ಮಕ್ಕಳಿಗೆ ಊಟ ಕೊಡಲು ಮನೆಗೆ ಹೋದಾಗ ಈ ಭೀಕರ ಘಟನೆ ನಡೆದಿದೆ. ಮಹಿಳೆಯ ಕೈ, ಕಾಲು ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿವೆ. ಜತೆಗೆ ಮಹಿಳೆಯನ್ನು ರಕ್ಷಿಸಿದ ಇಬ್ಬರಿಗೂ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮದುವೆ ಮನೆಯಿಂದಲೇ ವಧುವನ್ನು ಹೊತ್ಯೊಯ್ದ ನಾಲ್ವರು ಯುವಕರು

ಇದೀಗ ಮಹಿಳೆಯ ಮೇಲೆ ದಾಳಿ ಮಾಡಿದ ಎಮ್ಮೆಯ ಮಾಲೀಕರನ್ನು ಬಂಧಿಸುವಂತೆ ಸಂತ್ರಸ್ತೆಯ ಕುಟುಂಬದವರು ಒತ್ತಾಯಿಸಿದ್ದಾರೆ. ಜಾನುವಾರುಗಳು ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅಪಾಯ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚೆನ್ನೈ ಕಾರ್ಪೊರೇಷನ್ ಎಚ್ಚರಿಕೆ ನೀಡಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: