Viral Video: ಐಸಿಯುನಲ್ಲಿದ್ದ  ತಂದೆಯ ಮುಂದೆಯೇ ನೆರವೇರಿತು ಇಬ್ಬರು ಹೆಣ್ಣು ಮಕ್ಕಳ ಮದುವೆ, ಭಾವನಾತ್ಮಕ ವಿಡಿಯೋ  

ಇನ್ನೇನು ಮಕ್ಕಳ ಮದುವೆ ಹತ್ತಿರ ಬರುತ್ತಿದ್ದಂತೆ ಲಕ್ನೋದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ಮಕ್ಕಳ ಮದುವೆ ನೋಡಬೇಕೆಂದು ಅವರು ಬಯಸಿದ್ದರು. ಹೀಗೆ  ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯ ಮಹದಾಸೆಯನ್ನು ಈಡೇರಿಸಲು ಅವರ ಮಕ್ಕಳಿಬ್ಬರು ಐಸಿಯುವಿನಲ್ಲಿಯೇ ವಿವಾಹವಾಗಿದ್ದಾರೆ. ಈ ಭಾವನಾತ್ಮಕ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. 

Viral Video: ಐಸಿಯುನಲ್ಲಿದ್ದ  ತಂದೆಯ ಮುಂದೆಯೇ ನೆರವೇರಿತು ಇಬ್ಬರು ಹೆಣ್ಣು ಮಕ್ಕಳ ಮದುವೆ, ಭಾವನಾತ್ಮಕ ವಿಡಿಯೋ  
ವೈರಲ್ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 18, 2024 | 4:12 PM

ತಂದೆಯಂದಿರಿಗೆ ತಮ್ಮ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೆಣ್ಣು ಮಕ್ಕಳಿಗೂ ಅಷ್ಟೇ ತಂದೆಯೆಂದರೆ ಪ್ರೀತಿ ತುಸು ಜಾಸ್ತಿನೇ.  ಅದರಲ್ಲೂ ತಂದೆಯಂದಿರು ತಮ್ಮ ಮಗಳ ಮದುವೆಯ ಬಗ್ಗೆ ವಿಶೇಷವಾದ ಕನಸುಗಳನ್ನು ಕಟ್ಟಿರುತ್ತಾರೆ. ಮಗಳಿಗೆ  ರಾಜಕುಮಾರನಂತ ಹುಡುಗನನ್ನು ತರಬೇಕು, ನಾನು ಬದುಕಿರುವಾಗಲೇ ಮಗಳ ಮದುವೆ ನಡೆಯಬೇಕು ಎಂದು ಪ್ರತಿಯೊಬ್ಬ ತಂದೆಯೂ  ಆಸೆ ಪಡ್ತಾರೆ. ಅದೇ ರೀತಿ ಇಲ್ಲೊಬ್ಬರೂ ತಂದೆ ಕೂಡಾ ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆ ನೋಡಬೇಕೆಂದು ಹಂಬಲಿಸಿದ್ದು, ಈ  ಮಹದಾಸೆಯನ್ನು ನೆರವೇರಿಸಲು ಮಕ್ಕಳಿಬ್ಬರು ಅನಾರೋಗ್ಯದಿಂದ ಐಸಿಯು ನಲ್ಲಿ ದಾಖಲಾದ ತಂದೆಯ ಮುಂದೆಯೇ ವಿವಾಹವಾಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಅಪರೂಪದ ಘಟನೆ ಲಕ್ನೋದಲ್ಲಿ ನಡೆದಿದ್ದು, ಇಲ್ಲಿನ ಎರಾ ಮೆಡಿಕಲ್‌ ಕಾಲೇಜಿನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯ ಮುಂದೆಯೇ ಮಕ್ಕಳಿಬ್ಬರು  ವಿವಾಹವಾಗಿದ್ದಾರೆ. ಇನ್ನೇನು ಮಕ್ಕಳ ಮದುವೆಗೆ ದಿನ ಹತ್ತಿರವಾಗುತ್ತಿದ್ದಂತೆ ಇಕ್ಬಾಲ್‌ ಎಂಬವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಮತ್ತು ಅವರಿಗೆ ಐಸಿಯುನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತಾನು ಈ ಸ್ಥಿತಿಯಲ್ಲಿದ್ದರೂ ಅವರ ಮನಸ್ಸು ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ನೋಡಲು ಬಯಸುತ್ತಿತ್ತು. ಹೀಗೆ ತಮ್ಮ ತಂದೆಯ ಈ ಮಹದಾಸೆಯನ್ನು ನೆರವೇರಿಸಲು ಅವರ ಇಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಯ ಅಧಿಕಾರಿಗಳ ಅನುಮತಿ ಪಡೆದು ಐಸಿಯು ನಲ್ಲಿ ತಂದೆಯ ಮುಂದೆ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು ಪಿಯುಶ್‌ ರೈ (@Benarasiyaa)  ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಲಕ್ನೋದ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆಸೆಯನ್ನು ಪೂರೈಸಲು ಐಸಿಯು ನಲ್ಲಿ ಮದುವೆಯಾದ ಮಕ್ಕಳು” ಎಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಏಕಾಏಕಿ ಎಸ್ಕಲೇಟರ್‌ನಲ್ಲಿ ಸಿಲುಕಿಕೊಂಡ ಬಾಲಕಿಯ ಕಾಲು; ವಿಡಿಯೋ ವೈರಲ್​​

ವೈರಲ್‌ ವಿಡಿಯೋದಲ್ಲಿ ಇಬ್ಬರು ಜೋಡಿಗಳು ತಮ್ಮ ತಂದೆಯ ಸಮ್ಮಖದಲ್ಲಿ ವಿವಾಹದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಜೋಡಿಗಳು ತಮ್ಮ ತಂದೆಯ ಮುಂದೆ ನಿಂತು ಸರಳವಾಗಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಜೂನ್‌ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:11 pm, Tue, 18 June 24

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?