Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ

Manike Mage Hithe: ಮನಿಕೆ ಮಗೆ ಹಿತೆ ಹಾಡು ಹೇಳಲು ಪ್ರಯತ್ನಿಸಿದ ವ್ಯಕ್ತಿಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್​ ಆಗಿದೆ. ವಿಡಿಯೊ ನೋಡಿ..

Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ
ಮನಿಕೆ ಮಗೆ ಹಿತೆ ಹಾಡು ಹೇಳಲು ಪ್ರಯತ್ನಿಸಿದ ವ್ಯಕ್ತಿ
Edited By:

Updated on: Nov 04, 2021 | 9:15 AM

ಮನಿಕೆ ಮಗೆ ಹಿತೆ ಹಾಡು ಇತ್ತೀಚೆಗೆ ಫುಲ್ ಫೇಮಸ್ ಆಗಿದೆ. ಇನ್​ಸ್ಟಾಗ್ರಾಂ ಫೇಸ್ ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ನೆಚ್ಚಿನ ಹಾಡನ್ನು ಇಷ್ಟ ಪಟ್ಟು ಜನರು ಹಾಡುತ್ತಾ, ನೃತ್ಯ ಮಾಡುತ್ತಾ ವಿಡಿಯೊವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅವುಗಳಲ್ಲಿ ಕೆಲವು ತಮಾಷೆಯಾಗಿರುತ್ತೆ! ಅಂಥಹುದೇ ಒಂದು ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ಇಲ್ಲೊರ್ವ ವ್ಯಕ್ತಿಗೆ ಮನಿಕೆ ಮಗೆ ಹಿತೆ ಹಾಡಿನ ಲಿರಿಕ್ ಬರುತ್ತಿಲ್ಲ ಆದರೂ ಬಿಡದೇ ತನ್ನದೇ ಭಾಷೆಯಲ್ಲಿ ಹಾಡುತ್ತಿದ್ದಾನೆ. ಇದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು ಫುಲ್ ವೈರಲ್ ಆಗಿದೆ.

ಜನಪ್ರಿಯತೆ ಗಳಿಸಿಕೊಂಡಿರುವ ಹಾಡನ್ನು ಸಂಗೀತ ಪ್ರಿಯರು ಒಮ್ಮೆ ಹಾಡಲು ಪ್ರಯತ್ನಿಸುತ್ತಿದ್ದಾರೆ. ಪ್ಲೇ ಆಗುತ್ತಿರುವ ಹಾಡಿನ ಸಾಲಿನ ಜೊತೆಗೆ ಇಲ್ಲೋರ್ವ ವ್ಯಕ್ತಿ ಹಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಉಚ್ಚಾರಣೆ ಬರುತ್ತಿಲ್ಲ ಜೊತೆಗೆ ಸಾಹಿತ್ಯ ಕೂಡಾ ಬರುವುದಿಲ್ಲ. ಆದರೂ ಹಾಡನ್ನು ಆನಂದಿಸುತ್ತಾ ತನ್ನದೇ ಸಾಹಿತ್ಯ ಸೇರಿಸಿಕೊಂಡು ಹಾಡುತ್ತಿದ್ದಾರೆ. ಈ ತಮಾಷೆಯ ದೃಶ್ಯ ನೋಡಿ ನೆಟ್ಟಿಗರು ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ.

ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ.  ಈ ತಮಾಷೆಯ ವಿಡಿಯೊ ಜನರನ್ನು ನಗೆಗಡಲಲ್ಲಿ ತೇಲಿಸಿದೆ. 15 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಹಿರಿಯ ವ್ಯಕ್ತಿಯ ಹಾಡು ಕೇಳಿದ ಜನರು ತಮಾಷೆ ಮಾಡಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನು ಓದಿ:

Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್​; ನೆಟ್ಟಿಗರೆಲ್ಲಾ ಫಿದಾ

Ranu Mondal: ಮನಿಕೆ ಮಗೆ ಹಿತೆ.. ಸೂಪರ್ ಹಿಟ್ ಹಾಡು ಹಾಡಿದ ರಾನು ಮಂಡಲ್; ವಿಡಿಯೋ ನೋಡಿ

Published On - 9:12 am, Thu, 4 November 21