ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು…! ಫೋಟೋ ವೈರಲ್​​

|

Updated on: Apr 07, 2023 | 12:05 PM

ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​ ಇವೆ.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು...! ಫೋಟೋ ವೈರಲ್​​
ಒಂದು ಆಟೋ 3 ನಂಬರ್​ ಪ್ಲೇಟ್​​
Follow us on

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಆಗಾಗ ಅಚ್ಚರಿ ಸಂಗತಿಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಬೆಂಗಳೂರಿನ ಕೆಲ ಘಟನೆಗಳು ಸಾಮಾಜಿ ಜಾಲತಾಣದಲ್ಲಿ (Social Media) ಸಾಕಷ್ಟು ಸದ್ದು ಮಾಡುತ್ತವೆ. ಅದರಂತೆ ಈಗಲೂ ಕೂಡ ನಗರದ ಆಟೋರಿಕ್ಷಾ (Auto Riksha) ಒಂದರ ನಂಬರ್​ ಪ್ಲೇಟ್​​ ವಿಚಾರವಾಗಿ ಸುದ್ದಿಯಾಗಿದೆ. ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದುಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​. ಒಂದು ಓಲಾ ಗ್ರಾಹಕರಿಗೆ, ಒಂದು ರ್ಯಾಪಿಡೊ ಗ್ರಾಹಕರಿಗೆ ಮತ್ತು ಮತ್ತೊಂದು ಆರ್​ಟಿಒ ನೀಡಿದ ಹಳದಿ ಬಣ್ಣದ ನಂಬರ್​ ಪ್ಲೇಟ್​​​​​​.

ಈ ಕುರಿತು ಸುಪ್ರಿತ್​​ ಎಂಬುವರು ಟ್ವೀಟ್​ ಮಾಡಿದ್ದು, ಈ ಆಟೋಗೆ ಎಷ್ಟು ನಂಬರ್ ಪ್ಲೇಟ್​ ಇವೆ? ಎಷ್ಟು ಬಾರಿ ನೊಂದಣಿ ಮಾಡಿಸಲಾಗಿದೆ ಎಂದಿದ್ದಾರೆ. ಈ ಕುರಿತು ಯಾವ ಕಾನೂನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಟ್ವೀಟರ್​ ಬಳಕೆದಾರರು ​ಕೇಳಿದರು, ಇದು ಕಾನೂನುಬದ್ಧವೇ? ಓಲಾ / ರ್ಯಾಪಿಡೋ / ಉಬರ್ ವಾಹನಗಳು ನಿಜವಾದ (ಆರ್‌ಟಿಒ ಒದಗಿಸಿದ) ನೋಂದಣಿ ಸಂಖ್ಯೆಯನ್ನು ಬಳಸುತ್ತವೆ ಎಂದು ನಾನು ನಿರೀಕ್ಷಿಸುದ್ದೆ ಆದರೆ ಇದನ್ನು ಕಂಡು ನನಗೆ ಆಶ್ಚರ್ಯವುಂಟಾಗಿದೆ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Fri, 7 April 23