
ಇಂದಿನ ಬ್ಯುಸಿ ಲೈಫ್ ನಲ್ಲಿ ಅಡುಗೆ ಮಾಡಲು ಯಾರಿಗೂ ಸಮಯವಿಲ್ಲ. ಹೀಗಾಗಿ ಈ ಫುಡ್ ಆರ್ಡರ್ ಅಪ್ಲಿಕೇಶನ್ ಗಳನ್ನು (food order application) ಅವಲಂಬಿಸಿಕೊಂಡವರೇ ಹೆಚ್ಚು. ಇನ್ನೂ ರೆಸ್ಟೋರೆಂಟ್‌ಗೆ ಹೋಗುವ ಬದಲು ಆನ್‌ಲೈನ್‌ನಲ್ಲಿಯೇ ಹೆಚ್ಚಾಗಿ ಫುಡ್ ಆರ್ಡರ್ ಮಾಡ್ತಾರೆ. ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಲು ಸ್ವಿಗ್ಗಿ, ಝೊಮ್ಯಾಟೊ, ಜೆಪ್ಟೋ, ಬ್ಲಿಂಕಿಟ್ ಸೇರಿದಂತೆ ಹೀಗೆ ನೂರಾರು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಿಗ್ಗಿ ಮೂಲಕ ಫುಡ್ ಆರ್ಡರ್ (food order) ಮಾಡಿದ್ದು, ಆದರೆ ದರ ನೋಡಿ ಶಾಕ್ ಆಗಿದ್ದಾರೆ. ಹೌದು, ಸ್ವಿಗ್ಗಿಯಲ್ಲಿ ಆನ್ಲೈನ್ ಫುಡ್ ಡೆಲಿವರಿಗೆ ಶೇಕಡಾ 80 ರಷ್ಟು ಹೆಚ್ಚುವರಿ ಹಣ ವಿಧಿಸಲಾಗುತ್ತಿದೆ.ಈ ಗ್ರಾಹಕ ಆನ್ಲೈನ್ ಹಾಗೂ ಆಫ್ ಲೈನ್ ಬಿಲ್ ಶೇರ್ ಮಾಡಿಕೊಂಡು ಬಿಲ್ ನಲ್ಲಿ ಎಷ್ಟೆಲ್ಲಾ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
@SunderjiJB ಹೆಸರಿನ ಎಕ್ಸ್ ಖಾತೆಯಲ್ಲಿ ಆಫ್ ಲೈನ್ ಹಾಗೂ ಆನ್ಲೈನ್ ಬಿಲ್ ಶೇರ್ ಮಾಡಿಕೊಂಡು ಫುಡ್ ಡೆಲಿವರಿ ಅಪ್ಲಿಕೇಶನ್ ನಲ್ಲಿ ಆರ್ಡರ್ ಮಾಡಿದ ಆಹಾರಕ್ಕೆ ಶೇಕಡಾ 80 ರಷ್ಟು ಹೆಚ್ಚು ಹಣ ನೀಡಬೇಕಾಗುತ್ತದೆ. ಅದೇ ಕೇವಲ ಎರಡು ಕಿ.ಮೀ ದೂರದಲ್ಲಿರುವ ರೆಸ್ಟೋರೆಂಟ್‌ನಿಂದ ನೇರವಾಗಿ ಖರೀದಿಸಿದರೆ ಹೆಚ್ಚು ಖರ್ಚು ಆಗುವುದು ಉಳಿಯುತ್ತದೆ. ನಾನು ಫುಡ್ ಡೆಲಿವರಿಗಾಗಿ ಹೆಚ್ಚುವರಿ 663 ರೂ ಪಾವತಿಸುವಂತಾಯಿತು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
Hey @Swiggy, please explain. Why does ordering food in the app, 81% expensive than buying the same food from the same outlet, just 2kms away. Is this the real cost of convenience ? The extra that I have to pay to get the food delivered is INR 663. pic.twitter.com/rvLghtJJ3H
— Sunder (@SunderjiJB) September 7, 2025
ಆನ್ಲೈನ್ ಆರ್ಡರ್ ಮಾಡಿದ ಬಿಲ್‌ನಲ್ಲಿ 10 ಪರೋಟ, ಚಿಕನ್ 65, ನಾಲ್ಕು ಚಿಕನ್ ಲಾಲಿಪಪ್ ಹಾಗೂ ಎರಡು ಪ್ಲೇಟ್ ಚಿಕನ್ ತೊಕ್ಕು ಬಿರಿಯಾನಿ ಆರ್ಡರ್ ಮಾಡಿದ್ದು, ಇದಕ್ಕೆ ಡೆಲಿವರಿ, ಫ್ಲಾಟ್‌ಫಾರ್ಮ್ ಶುಲ್ಕವೆಲ್ಲವೂ ಸೇರಿ 1473 ರೂ ಆಗಿರುವುದನ್ನು ನೀವು ನೋಡಬಹುದು. ಇದೇ ಐಟಂನನ್ನು 2 ಕಿಮೀ ದೂರದಲ್ಲಿರುವ ಅದೇ ರೆಸ್ಟೋರೆಂಟ್‌ಗೆ ಹೋಗಿ ತಾವೇ ಖರೀದಿ ಮಾಡಿದ್ದು, ಆ ಬಿಲ್‌ನಲ್ಲಿ ಕೇವಲ 810 ರೂ ಇದೆ. ಈ ಎರಡು ಬಿಲ್‌ಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಇಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ:Viral: ಆಹಾರ ವೇಸ್ಟ್ ಮಾಡುವ ಗ್ರಾಹಕರಿಗೆ ಬೀಳುತ್ತೆ 20 ರೂ ದಂಡ, ಇದು ಪುಣೆಯ ಈ ರೆಸ್ಟೋರೆಂಟ್‌ನ ರೂಲ್ಸ್
ಸೆಪ್ಟೆಂಬರ್ 7 ರಂದು ಶೇರ್ ಮಾಡಲಾದ ಈ ಪೋಸ್ಟ್ 3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಸ್ವಿಗ್ಗಿ ಮತ್ತು ಜೊಮಾಟೊ ಉಚಿತವಾಗಿ ಕೆಲಸ ಮಾಡಬೇಕೆಂದು ನೀವು ಏಕೆ ಬಯಸುತ್ತೀರಿ? ಅವರು ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸುವುದಿಲ್ಲವೇ? ನೀವೇ ರೆಸ್ಟೋರೆಂಟ್‌ಗೆ ಹೋದಾಗ, ಅಲ್ಲಿ ಡೆಲಿವರಿ ಮಾಡುವ ವ್ಯಕ್ತಿ ಇರುವುದಿಲ್ಲ, ಪ್ಲಾಟ್‌ಫಾರ್ಮ್ ಇಲ್ಲ, ಏನೂ ಇರುವುದಿಲ್ಲ. ಆದ್ದರಿಂದ ಎಲ್ಲಾ ಹಣವು ನೇರವಾಗಿ ರೆಸ್ಟೋರೆಂಟ್‌ಗೆ ಹೋಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಎಚ್ಚರ ಎಂದಿದ್ದಾರೆ. ಇವು ರೆಸ್ಟೋರೆಂಟ್ ಶುಲ್ಕಗಳು. ಸ್ವಿಗ್ಗಿ ಶುಲ್ಕಗಳಲ್ಲ. ಸ್ವಿಗ್ಗಿ ರೆಸ್ಟೋರೆಂಟ್‌ಗಳಿಗೆ ಗೋಚರತೆಗಾಗಿ ಶುಲ್ಕ ವಿಧಿಸುತ್ತದೆ ಹಾಗೂ ಅದು ನೀವು ನೋಡುವ ಹೆಚ್ಚುವರಿ ವೆಚ್ಚವಾಗಿದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Tue, 9 September 25