Trending Optical Illusion : ಮತ್ತೊಂದು ಆಪ್ಟಿಕಲ್ ಇಲ್ಲ್ಯೂಷನ್ ನಿಮ್ಮದುರಿಗಿದೆ. ಇದು ತೀರಾಕಷ್ಟದ್ದು ಎಂದು ನೆಟ್ಟಿಗರು ಬೇಸರಿಸಿಕೊಳ್ಳುತ್ತಿದ್ದಾರೆ. 30 ಸೆಕೆಂಡ್ ಅಲ್ಲ, ಎರಡು ನಿಮಿಷ ವ್ಯಯಿಸಿದರೂ ಈ ಮನುಷ್ಯನೊಳಗೆ ಅಡಗಿದ ಮೂರು ಹೆಣ್ಣುಮಕ್ಕಳನ್ನು ಕಂಡುಹಿಡಿಯಲಾಗಲಿಲ್ಲ ಎನ್ನುತ್ತಿದ್ದಾರೆ. ಸೂಕ್ಷ್ಮವಾಗಿ ನೋಡಿ ಬಹಳ ಮಜಾ ಇದೆ ಇದು ಈ ಚಿತ್ರ. ಆಗಾಗ ಇಂಥ ಚಿತ್ರಗಳನ್ನು ನೋಡಿ ನೋಡಿ ನಿಮಗೀಗ ಉತ್ತರ ಕಂಡುಕೊಳ್ಳುವುದು ಸುಲಭ ಎಂಬ ಅನಿಸಿಕೆ ನಮ್ಮದು. ಏನಂತೀರಿ?
ಶೇ. 1 ರಷ್ಟು ಜನ ಮಾತ್ರ ಮೂರು ಹೆಣ್ಣುಮಕ್ಕಳ ಮುಖವನ್ನು ಗುರುತಿಸಿದ್ದಾರೆ. ನಿಮಗೆ ಸುಳಿವು ಕೊಡಬೇಕಾ? ಗಮನಿಸಿ ಅವನ ಉದ್ದ ಮೂಗು, ಗಡ್ಡ ಮತ್ತು ಸೂಟ್ ಇವುಗಳನ್ನೇ ಗಮನಿಸುತ್ತಾ ಹೋಗಿ ಉತ್ತರ ಸಿಕ್ಕೇ ಸಿಗುತ್ತದೆ. ಇದು ಸ್ವಲ್ಪ ಕ್ಲಿಷ್ಟವೇ. ಆದರೂ ಆಗಾಗ ಪ್ರಕಟವಾಗುವ ಇಂಥ ಭ್ರಮಾತ್ಮಕ ಚಿತ್ರಗಳನ್ನು ನೋಡಿ ಮತ್ತು ಸವಾಲಿಗೆ ಉತ್ತರಗಳನ್ನು ಕಂಡುಕೊಂಡು ನಿಮ್ಮಲ್ಲಿ ತಾಳ್ಮೆ ಬೆಳೆದಿರಲು ಸಾಕು.
ಗೊತ್ತಾಯಿತಲ್ಲವಾ ಉತ್ತರ? ಮೂಗಿನ ಕೆಳಗೆ, ಕತ್ತಿನ ಕೆಳಭಾಗದಲ್ಲಿ, ಕತ್ತಿನ ಹಿಂಭಾಗದಲ್ಲಿ ಮೂರು ಹೆಣ್ಣುಮಕ್ಕಳ ಮುಖ ಇದೆ. ಹೊರಗೆ ಮೋಡ ಮುಸುಕಿದೆ. ಆಗಾಗ ಸೂರ್ಯ ಕಳ್ಳಾಟವಾಡುತ್ತಿದ್ದಾನೆ. ಕೆಲವೆಡೆ ಜಿಟಿಜಿಟಿ ಮಳೆ. ನಿಮಗಿರುವ ಮೂಡ್ಗೆ ಈ ಭ್ರಮಾತ್ಮಕ ಚಿತ್ರ ಸವಾಲನ್ನು ಒಡ್ಡಿ ಮನಸಿಗೆ, ಕಣ್ಣಿಗೆ, ಮೆದುಳಿಗೆ ಕೆಲಸ ಕೊಟ್ಟಿತಲ್ಲ?
ಮತ್ತಷ್ಟು ಇಂಥ ಸವಾಲುಗಳಿಗಾಗಿ ಕಾಯುತ್ತಾ ಇರಿ.
ಇನ್ನಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:29 am, Thu, 24 November 22