ಇಂದಿನ ಆಪ್ಟಿಕಲ್ ಇಲ್ಯೂಷನ್((Optical Illusions) ಸವಾಲು ಕಷ್ಟಕರವಾಗಿದ್ದು, ಶೇ.2ರಷ್ಟು ಮಂದಿ ಮಾತ್ರ ಉತ್ತರವನ್ನು ಕಂಡು ಹಿಡಿಯಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಕಣ್ಣುಗಳೂ ನಮ್ಮನ್ನು ಮೋಸಗೊಳಿಸುತ್ತವೆ.ವಿಶೇಷವಾಗಿ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಕಣ್ಣುಗಳನ್ನು ಮೋಸಗೊಳಿಸುತ್ತವೆ. ಸದ್ಯ ಇಂತಹ ಆಪ್ಟಿಕಲ್ ಇಲ್ಯೂಷನ್ ಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಚಿತ್ರದಲ್ಲಿ ಹಲವಾರು 8ಗಳನ್ನು ಕಾಣಬಹುದು. ಆದರೆ ಇದರಲ್ಲಿ ಅಡಗಿರುವ ನಂಬರ್ 3ರನ್ನು ನೀವು ಕಂಡು ಹುಡುಕಬೇಕಿದೆ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ. ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಐದು ಸೆಕೆಂಡ್ ಗಳ ಒಳಗೆ ಈ ಚಿತ್ರದಲ್ಲಿರುವ ಸಂಖ್ಯೆ ’3’ ರನ್ನು ಕಂಡುಹಿಡಿಯಬಲ್ಲಿರಾ?
ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ
ನೀವು ಮೇಲಿನ ಫೋಟೋವನ್ನು ನೋಡಿದಾಗ, ನೀವು 8 ಸಂಖ್ಯೆಗಳನ್ನು ನೋಡಬಹುದು. ಆದರೆ ಈ ಸಂಖ್ಯೆಗಳ ಮಧ್ಯದಲ್ಲಿ ಸಂಖ್ಯೆ 3 ಅಡಗಿರುವುದನ್ನು ನೀವು ನೋಡಿದ್ದೀರಾ? ಈ ಫೋಟೋ ಪಝಲ್‌ನ ಮುಖ್ಯ ಉದ್ದೇಶವೆಂದರೆ ಆ ಸಂಖ್ಯೆಯನ್ನು ಕಂಡುಹಿಡಿಯುವುದು. ಆದರೆ ನೀವು ಕೇವಲ 5 ಸೆಕೆಂಡುಗಳಲ್ಲಿ ಸಂಖ್ಯೆ 3ರನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದ್ದರೆ, ಆಗ ಈ ಕಣ್ಣಿನ ಶಕ್ತಿಯು ತೀಕ್ಷ್ಣವಾಗಿರುತ್ತದೆ ಎಂದರ್ಥ. ಈ ಫೋಟೋ ಪಝಲ್‌ನಲ್ಲಿ ನೀವು ಸಂಖ್ಯೆ 3 ಅನ್ನು ಕಂಡುಕೊಂಡಿದ್ದೀರಾ? ಫೋಟೋವನ್ನು ಹತ್ತಿರದಿಂದ ನೋಡಿ ಮತ್ತು ನೀವು ಈ ಸಂಖ್ಯೆಯನ್ನು ಕಂಡುಹಿಡಿಯಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ಸಂಖ್ಯೆ ಕಾಣಿಸದಿದ್ದರೆ, ಉತ್ತರಕ್ಕಾಗಿ ಕೆಳಗಿನ ಫೋಟೋವನ್ನು ನೋಡಿ.
ಉತ್ತರ ಇಲ್ಲಿದೆ:
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ