
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಮೋಜಿನ ಆಟಗಳು ಖುಷಿಕೊಡುತ್ತದೆ. ಜೊತೆಗೆ ಮೆದುಳಿಗೆ ಕೆಲಸ ನೀಡುತ್ತದೆ. ಹೀಗಾಗಿ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಇಷ್ಟ ಪಡುತ್ತಾರೆ. ಆದರೆ ಬುದ್ಧಿವಂತರು ಮಾತ್ರ ಕಡಿಮೆ ಸಮಯದಲ್ಲಿ ಉತ್ತರ ಕಂಡುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಅಡಗಿರುವ ಮೀನನ್ನು (fish) ಹುಡುಕಲು ಸಾಧ್ಯವೇ ಎಂದು ಒಮ್ಮೆ ನೋಡಿ. ಹಚ್ಚಹರಿಸಿನ ಮರ ಹಾಗೂ ಮನುಷ್ಯರ ನಡುವೆ ಜಾಣತನದಿಂದ ಮರೆ ಮಾಡಲಾಗಿರುವ ಮೀನನ್ನು ನಿರ್ದಿಷ್ಟ ಸಮಯದೊಳಗೆ ಹುಡುಕಿ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಜನರನ್ನು ಸುಲಭವಾಗಿ ಮೋಸಗೊಳಿಸುತ್ತವೆ. ಈ ಚಿತ್ರವು ಸಾಮಾನ್ಯದಂತೆ ತೋರುತ್ತಿದ್ದು, ಹಚ್ಚಹಸಿರಾದ ಮರ ಗಿಡಗಳು, ಮನುಷ್ಯರು ಹಾಗೂ ಪ್ರಾಣಿಗಳು ಇವೆ. ಆದರೆ ಈ ಚಿತ್ರದಲ್ಲಿ ಮೀನನ್ನು ಜಾಣತನದಿಂದ ಮರೆ ಮಾಡಲಾಗಿದ್ದು, ಹೀಗಾಗಿ ಈ ಒಗಟು ಬಿಡಿಸುವುದು ಅತ್ಯಂತ ಕಷ್ಟಕರವೆಂಬಂತೆ ನಿಮಗೆ ಕಾಣಬಹುದು. ಅದೆಲ್ಲವನ್ನು ಮೀರಿ 21 ಸೆಕೆಂಡುಗಳಲ್ಲೇ ಮೀನನ್ನು ಕಂಡುಹಿಡಿದರೆ ನಿಮ್ಮ ವೀಕ್ಷಣಾ ಕೌಶಲ್ಯವು ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ:ಈ ಚಿತ್ರದಲ್ಲಿ ಮರೆಮಾಡಲಾಗಿರುವ ಹಣ್ಣುಗಳನ್ನು ಗುರುತಿಸಿ ನೋಡೋಣ
ಭ್ರಮೆಯನ್ನುಂಟು ಮಾಡುವ ಈ ಚಿತ್ರಗಳಲ್ಲಿನ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವು ಸವಾಲಿನದ್ದಾಗಿದೆ. ನೀವು ಎಷ್ಟೇ ಪ್ರಯತ್ನಿಸಿದರೂ ಮೀನು ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಈ ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಂಡು ಪ್ರತಿಯೊಂದು ಭಾಗವನ್ನು ಸೂಕ್ಷ್ಮವಾಗಿ ನೋಡಿ. ಒಂದು ವೇಳೆ ನಿಮ್ಮ ಕಣ್ಣಿಗೆ ಮೀನು ಬಿದ್ದರೆ ನೀವು ಒಗಟು ಬಿಡಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದರ್ಥ. ಇಲ್ಲವಾದರೆ ನಾವು ನಿಮಗೆ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ, ಮೀನು ಎಲ್ಲಿದೆ ಎಂದು ಕೆಂಪು ಬಣ್ಣದಲ್ಲಿ ಗುರುತು ಹಾಕಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ