Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ ಹಣ್ಣುಗಳನ್ನು ಗುರುತಿಸಿ ನೋಡೋಣ
ಮನೋವಿಜ್ಞಾನವನ್ನು ಆಧರಿಸಿರುವ ಆಪ್ಟಿಕಲ್ ಇಲ್ಯೂಷನ್‌ನಂತಹ ಮೋಜಿನ ಆಟಗಳು ನಮ್ಮ ಬುದ್ಧಿಶಕ್ತಿಯನ್ನು ಚುರುಕುಗೊಳಿಸುವುದು ಮಾತ್ರವಲ್ಲದೇ ನೀವೆಷ್ಟು ಜಾಣರು ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಮರೆ ಮಾಡಲಾಗಿರುವ ಎಂಟು ಹಣ್ಣುಗಳನ್ನು ಗುರುತಿಸಬೇಕು. ಆದರೆ ಈ ಒಗಟು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ.

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಇದೊಂದು ಮೋಜಿನ ಆಟವಾಗಿದ್ದು ಮೆದುಳಿಗೆ ಕೆಲಸ ನೀಡುವುದರ ಜೊತೆಗೆ ಬುದ್ಧಿವಂತಿಕೆಗೂ ಸವಾಲೆಸುಗುತ್ತದೆ. ಮೇಲ್ನೋಟಕ್ಕೆ ಈ ಒಗಟಿನ ಚಿತ್ರಗಳು ಸುಲಭವಾಗಿ ಕಂಡರೂ ಇದು ಟ್ರಿಕ್ಕಿಯಾಗಿದ್ದು ಉತ್ತರ ಹುಡುಕುವುದು ಕಷ್ಟ. ಇದೀಗ ಇಂತಹದ್ದೇ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಜಾಣತನದಿಂದ ಮರೆ ಮಾಡಲಾಗಿರುವ ಹಣ್ಣುಗಳನ್ನು (fruits) ಹುಡುಕಬೇಕು. ಈ ಒಗಟು ಬಿಡಿಸಲು ಸಮಯಾವಕಾಶವಿಲ್ಲದ್ರೂ ಆದಷ್ಟು ಬೇಗ ಹಣ್ಣುಗಳನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನಿದೆ?
r/OpticalIllusions ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್ ಭ್ರಮೆವುಳ್ಳ ಚಿತ್ರದಲ್ಲಿ, ಕಾಡಿನ ದೃಶ್ಯದ ರೇಖಾಚಿತ್ರದಲ್ಲಿ ಮರೆಮಾಡಲಾಗಿರುವ ಎಂಟು ಹಣ್ಣುಗಳನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಚಿತ್ರದಲ್ಲಿ ಉದ್ದವಾದ, ಹರಿಯುವ ಚಿನ್ನದ ಕೂದಲಿನ ಮಹಿಳೆ ನಗುತ್ತಿರುವಂತೆ, ಅವಳ ಒಂದು ಕೈಯಿಂದ ಒಂದೇ ಒಂದು ಸೇಬು ನೇತಾಡುತ್ತಿದೆ. ಇತ್ತ ಸ್ನೇಹಪರವಾಗಿ ಕಾಣುವ ಹಾವು ಅವಳನ್ನು ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಇದೇ ಚಿತ್ರದಲ್ಲಿ ವಿವಿಧ ಬಗೆಯ ಹಣ್ಣುಗಳಿದ್ದು, ಅವುಗಳನ್ನು ಪತ್ತೆ ಹಚ್ಚಬೇಕು.
ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು 15 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ ನೋಡೋಣ
ಎಂಟು ಹಣ್ಣುಗಳನ್ನು ಗುರುತಿಸಲು ಸಾಧ್ಯವಾಯಿತೇ?
ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಗಮನವು ಪ್ರಮುಖ ಪಾತ್ರಗಳಾದ ಮಹಿಳೆ ಮತ್ತು ಹಾವಿನ ಕಡೆಗೆ ಸೆಳೆಯಲ್ಪಡುತ್ತವೆ. ಹೀಗಾಗಿ ಆರಂಭದಲ್ಲಿ ಹಣ್ಣುಗಳು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಈ ಹಣ್ಣುಗಳ ಬಣ್ಣಗಳು ಸುತ್ತಮುತ್ತಲಿನ ಸಸ್ಯಗಳು ಮತ್ತು ಕೂದಲಿನ ಬಣ್ಣಗಳೊಂದಿಗೆ ಬೆರೆತು ಹೋಗಿದ್ದು, ಹಣ್ಣುಗಳನ್ನು ಹುಡುಕಲು ಸಾಧ್ಯವಾಗದೇ ಹೋಗಬಹುದು. ಆದರೆ ನಾವು ನಿಮಗೆ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ಹಣ್ಣುಗಳು ಎಲ್ಲಿವೆ ಎಂದು ಹೇಳುತ್ತೇವೆ.
ಪೇರಳೆ ಹಣ್ಣು ಈ ಮಹಿಳೆಯ ಕೂದಲಿನ ಎಡಭಾಗದಲ್ಲಿದೆ, ಅನಾನಸ್ ಹಾವಿನ ಬಾಲದ ಕೆಳಭಾಗದಲ್ಲಿ ಮರೆ ಮಾಡಲಾಗಿದೆ. ಬಾಳೆಹಣ್ಣು ಮಹಿಳೆಯ ಕೂದಲಿನ ಮೇಲ್ಭಾಗದಲ್ಲಿದೆ. ಕಿತ್ತಳೆ ಹಣ್ಣು ಈ ಚಿತ್ರದ ಎಡಭಾಗದಲ್ಲಿದೆ. ದ್ರಾಕ್ಷಿಗಳು ಎಡಭಾಗದಲ್ಲಿ ಮಧ್ಯದಲ್ಲಿ ಮರೆ ಮಾಡಿರುವುದನ್ನು ನೋಡಬಹುದು. ಆದರೆ ನಿಂಬೆ ಹಾವಿನ ತಲೆಯ ಕೆಳಗೆ ಮರೆಮಾಡಲಾಗಿದೆ. ಕಲ್ಲಂಗಡಿ ಹಾವಿನ ಹಿಂದಿನ ಹಿನ್ನೆಲೆಯಾಗಿದ್ದು, ಚೆರ್ರಿಗಳು ಕೆಳಭಾಗದಲ್ಲಿದೆ. ನಾವು ಹೇಳಿದ ಉತ್ತರಕ್ಕೆ ಅನುಗುಣವಾಗಿ ನೀವು ಈ ಚಿತ್ರಲ್ಲಿ ಮರೆ ಮಾಡಲಾಗಿರುವ ಎಂಟು ಹಣ್ಣುಗಳನ್ನು ಗುರುತಿಸಿದ್ದೀರಾ ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 am, Mon, 3 November 25








