AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು 15 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ ನೋಡೋಣ

ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ಫೋಟೋಗಳಲ್ಲಿ ಅಡಗಿರುವ ಒಗಟುಗಳನ್ನು ಬಿಡಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಇದೀಗ ಇಲ್ಲೊಂದು ಕಷ್ಟಕರವಾದ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಮರದ ದಿಮ್ಮಿಗಳ ನಡುವೆ ಬೆಕ್ಕೊಂದು ಅಡಗಿ ಕುಳಿತಿದೆ. ಈ ಬೆಕ್ಕನ್ನು ನಿರ್ದಿಷ್ಟ ಸಮಯದೊಳಗೆ ಎಲ್ಲರೂ ಕೂಡ ಹುಡುಕಲು ಸಾಧ್ಯವಿಲ್ಲ. ಆದ್ರೆ ನೀವು ಈ ಒಗಟು ಬಿಡಿಸಲು ಪ್ರಯತ್ನಿಸಿ ನೋಡಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು 15 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ ನೋಡೋಣ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Reddit
ಸಾಯಿನಂದಾ
|

Updated on: Nov 02, 2025 | 10:31 AM

Share

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್ (Optical Illusion) ಸೇರಿದಂತೆ ಕಠಿಣ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಆಟವನ್ನು ಆಡುವ ಮಜಾನೇ ಬೇರೆ. ಈ ಒಗಟಿನ ಆಟಗಳು ಟೈಮ್‌ ಪಾಸ್‌ ಮಾತ್ರವಲ್ಲದೆ ನಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇದೀಗ ಇಲ್ಲೊಂದು ನಿಮ್ಮ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರ ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಸಾಲು ಸಾಲು ಮರದ ದಿಮ್ಮಿಗಳಿದ್ದು, ಇದರಲ್ಲಿ ಮರೆ ಮಾಡಲಾಗಿರುವ ಬೆಕ್ಕನ್ನು (cat) ಹದಿನೈದು ಸೆಕೆಂಡುಗಳ ಒಳಗೆ ಕಂಡು ಹಿಡಿಯಬೇಕು. ಕಣ್ಣಿನ ಸೂಕ್ಷ್ಮತೆ ಮತ್ತು ಏಕಾಗ್ರತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ಸಹಾಯಕವಾಗಿರುವ ಈ ಒಗಟನ್ನು ಬಿಡಿಸಲು ಸಾಧ್ಯನಾ ಎಂದು ನೋಡಿ.

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಏನು ಕಾಣಿಸಿತು?

FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಚಿತ್ರಕ್ಕೆ ಮರದ ದಿಮ್ಮಿಗಳ ನಡುವೆ ಇರುವ ಈ ಬೆಕ್ಕನ್ನು ನೀವು ಹುಡುಕಬಹುದೇ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಮೊದಲ ನೋಟದಲ್ಲಿ ನೀವು ಕಾಡಿನಲ್ಲಿ ರಾಶಿ ರಾಶಿ ಮರದ ದಿಮ್ಮಿಗಳನ್ನು ನೋಡುತ್ತೀರಿ. ಇಲ್ಲಿ ಮರದ ದಿಮ್ಮಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಆದರೆ ಮರದ ದಿಮ್ಮಿಗಳ ನಡುವೆ, ಒಂದು ಕಳ್ಳ ಬೆಕ್ಕು ಜಾಣತನದಿಂದ ಅಡಗಿಕೊಂಡು ಕುಳಿತಿದೆ. ನಿಮ್ಮ ತಾಳ್ಮೆ ಹಾಗೂ ಏಕಾಗ್ರತೆಯಿಂದ ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಕೇವಲ ಹದಿನೈದು ಸೆಕೆಂಡುಗಳ ಒಳಗೆ ಈ ಒಗಟು ಬಿಡಿಸಿ ನೀವು ಜಾಣರು ಎನಿಸಿಕೊಳ್ಳಿ.

ನೀವು ಈ ಸವಾಲನ್ನು ಸ್ವೀಕರಿಸಿದ್ದೀರಾ?

ಮರದ ದಿಮ್ಮಿಗಳ ನಡುವೆ ಅಡಗಿರುವ ಬೆಕ್ಕನ್ನು ಕಂಡುಹಿಡಿಯುವುದು ಹೇಳುವಷ್ಟು ಸುಲಭವಲ್ಲ. ಬೆಕ್ಕಿನ ತುಪ್ಪಳದ ಬಣ್ಣವು ಈ ಮರದ ದಿಮ್ಮಿಗಳ ಬಣ್ಣಕ್ಕೆ ಹೋಲುತ್ತದೆ. ಕಂದು, ಹಳದಿ ಮತ್ತು ನೆರಳುಗಳು ಸಂಪೂರ್ಣವಾಗಿ ಮಿಶ್ರಣವಾಗಿ ಬೆಕ್ಕು ಸುಲಭವಾಗಿ ನಿಮ್ಮ ಕಣ್ಣಿಗೆ ಬೀಳದಂತೆ ಮರೆ ಮಾಡಲಾಗಿದೆ. ಹೀಗಾಗಿ ನೀವು ತಾಳ್ಮೆ ಕಳೆದುಕೊಳ್ಳದೇ ಏಕಾಗ್ರತೆಯಿಂದ ಈ ಬೆಕ್ಕನ್ನು ಕಂಡು ಹಿಡಿಯಲು ಪ್ರಯತ್ನಿಸಿ.

ಇದನ್ನೂ ಓದಿ
Image
ಮನೆಯ ಹೊರಾಂಗಣದಲ್ಲಿ ಅಡಗಿ ಕುಳಿತಿರುವ ಕಪ್ಪು ಬೆಕ್ಕನ್ನು ಗುರುತಿಸಬಲ್ಲಿರಾ
Image
ಈ ಚಿತ್ರದಲ್ಲಿ ನಿಂಬೆ ಹಣ್ಣು ಎಲ್ಲಿದೆ ಎಂದು ಕಂಡುಹಿಡಿಯಿರಿ
Image
ಈ ಚಿತ್ರದಲ್ಲಿರುವ ತಪ್ಪನ್ನು 6 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ?
Image
ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಿರಿ

ಇದನ್ನೂ ಓದಿ:ಮನೆಯ ಹೊರಾಂಗಣದಲ್ಲಿ ಅಡಗಿ ಕುಳಿತಿರುವ ಕಪ್ಪು ಬೆಕ್ಕನ್ನು ಗುರುತಿಸಬಲ್ಲಿರಾ

ಬೆಕ್ಕನ್ನು ಕಂಡುಹಿಡಿಯಲು ಸಾಧ್ಯವಾಯಿತೇ?

Optical Illusion Photo

ಅಬ್ಬಬ್ಬಾ ಎಷ್ಟೇ ಹುಡುಕಿದರೂ ಮರದ ದಿಮ್ಮಿಗಳ ನಡುವೆ ಅಡಗಿ ಕುಳಿತಿರುವ ಬೆಕ್ಕನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ. ಚಿಂತಿಸಬೇಡಿ, ಬೆಕ್ಕು ಎಲ್ಲಿ ಅಡಗಿ ಕುಳಿತಿದೆ ಎಂಬುದನ್ನು ನಾವು ಹೇಳುತ್ತೇವೆ. ನಾವು ಹೇಳಿದ ಸುಳಿವನ್ನು ಗಮನಿಸಿ ಬೆಕ್ಕನ್ನು ಕಂಡು ಹಿಡಿಯಲು ಪ್ರಯತ್ನಿಸಿ. ಬೆಕ್ಕು ಮರದ ದಿಮ್ಮಿಗಳ ಮಧ್ಯದ ರಾಶಿಯಲ್ಲಿ, ಮೇಲ್ಭಾಗದಲ್ಲಿ ಅಡಗಿ ಕುಳಿತಿದೆ. ನೀವು ಹತ್ತಿರದಿಂದ ನೋಡಿದರೆ, ಅದರ ಮುಖವು ಮರದ ದಿಮ್ಮಿಗಳ ನಡುವೆ ಇಣುಕುವುದು ನಿಮಗೆ ಕಾಣಿಸುತ್ತದೆ. ಹೀಗಾಗಿ ನೀವು ಗಮನ ಹರಿಸಿ ಈ ಬೆಕ್ಕನ್ನು ಕಂಡುಹಿಡಿಯಲು ಪ್ರಯತ್ನಿಸಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ