
ಮೆದುಳಿಗೆ ಕೆಲಸ ನೀಡುವ ಪಝಲ್ ಗೇಮ್‌ಗಳು, ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ನೀವು ಈಗಾಗಲೇ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸಿರುತ್ತೀರಿ. ಆದರೆ ಪ್ರತಿ ಬಾರಿ ಈ ಒಗಟು ಬಿಡಿಸಲು ಸಾಧ್ಯವಾಗದೇ ಇದ್ದೀರಬಹುದು. ಆದರೆ ಇದೀಗ ಅಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಈ ಮಲಗುವ ಕೋಣೆಯಲ್ಲಿರುವ ಮೀನನ್ನು ಕಂಡು ಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ನೋಡಿ.
ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಒಗಟಿನ ಚಿತ್ರಗಳು ನಿಮಗೆ ಸಹಾಯ ಮಾಡುತ್ತದೆ. ಇದೀಗ ಈ ಒಗಟಿನ ಆಟವು ನಿಮ್ಮ ಮುಂದಿದೆ. ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದೇ ಬೆಡ್ ರೂಮ್. ಈ ಕೋಣೆಯಲ್ಲಿ ವಿವಿಧ ವಸ್ತುಗಳಿವೆ. ಆದರೆ ಇದೆಲ್ಲವರ ನಡುವೆ ಅಡಗಿರುವ ಮೀನನ್ನು 7 ಸೆಕೆಂಡುಗಳೊಳಗೆ ನೀವು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ನೋಡಿ.
ಇದನ್ನೂ ಓದಿ: ಜಸ್ಟ್ 15 ಸೆಕೆಂಡುಗಳಲ್ಲಿ ಈ ಉದ್ಯಾನವನದಲ್ಲಿ ಅಡಗಿರುವ ಶ್ವಾನವನ್ನು ಹುಡುಕಿ
ನಿಮ್ಮ ಕಣ್ಣಿಗೆ ಈ ಬೆಡ್ ರೂಮ್‌ನಲ್ಲಿರುವ ವಿವಿಧ ವಸ್ತುಗಳು ಬಿದ್ದಿರಬಹುದು. ಆದರೆ ಮೀನನ್ನು ಹುಡುಕುವುದೇ ನಿಮಗಿರುವ ಬಹುದೊಡ್ಡ ಸವಾಲು. ಇದೀಗ ನೀವು ಈ ಚಿತ್ರವನ್ನು ಸೂಕ್ಷವಾಗಿ ಗಮನಿಸಿ. ಎಷ್ಟೇ ಕಣ್ಣು ಅಗಲಿಸಿ ನೋಡಿದರೂ ಮೀನು ಕಾಣಿಸುತ್ತಿಲ್ಲವೇ. ನಿಮಗೆ ಅಂತಲ್ಲ. ನೂರರಲ್ಲಿ ಹತ್ತು ಜನರು ಮಾತ್ರ ಈ ಮೀನನ್ನು ಕಂಡು ಹಿಡಿಯಲು ಸಾಧ್ಯ. ಈ ಕೆಳಗಿನ ಚಿತ್ರದಲ್ಲಿ ಮೀನನ್ನು ಗುರುತಿಸಿದ್ದೇವೆ. ಬೆಡ್ ಮೇಲೆ ಮೀನು ಇರುವುದನ್ನು ನೀವು ಗಮನಿಸಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Mon, 12 January 26