
ಆಪ್ಟಿಕಲ್ ಇಲ್ಯೂಷನ್ (Optical Illusion) ಬ್ರೈನ್ ಟೀಸರ್ ನಂತಹ ಒಗಟಿನ ಚಿತ್ರಗಳೇ ಸುಲಭವಾಗಿ ಕಂಡರೂ ಬಿಡಿಸುವುದು ಅಷ್ಟೇ ಕಷ್ಟ. ಇಂತಹ ಒಗಟಿನ ಆಟಗಳತ್ತ ಹೆಚ್ಚಿನವರು ಆಸಕ್ತಿ ತೋರುತ್ತಾರೆ. ಇದೀಗ ನಿಮ್ಮ ಬುದ್ಧಿವಂತಿಕೆ ಹಾಗೂ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವ ಚಿತ್ರವೊಂದಿದೆ. ಈ ಕೋಟೆಯ ಚಿತ್ರದಲ್ಲಿ ನವಿಲೊಂದಿದೆ. ಜಾಣತನದಿಂದ ಮರೆಮಾಡಲಾಗಿರುವ ಈ ಪಕ್ಷಿಯನ್ನು ಕಂಡುಹಿಡಿಯುವುದೇ ದೊಡ್ಡ ಸವಾಲು. ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಈ ಒಗಟನ್ನು ಬಿಡಿಸಲು ಸಾಧ್ಯವಿದ್ದು ನೀವು ಅವರಲ್ಲಿ ಒಬ್ಬರಾಗಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಕೋಟೆಯನ್ನು ಕಾಣಬಹುದು. ಕೋಟೆಯ ಮುಂದೆ ಹುಡುಗನೊಬ್ಬ ನಿಂತು ಕೊಂಡಿದ್ದಾನೆ. ಈ ಕೋಟೆಯಲ್ಲಿ ನವಿಲು ಕೂಡ ಇದೆ. ಇಲ್ಲಿರುವ ಸವಾಲು ಈ ಪಕ್ಷಿ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ನೀವು 7 ಸೆಕೆಂಡುಗಳಲ್ಲಿ ನವಿಲನ್ನು ಹುಡುಕಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ:ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ನಿಧಿ ಪೆಟ್ಟಿಗೆಯನ್ನು ಹುಡುಕಿ
ಮೊದಲ ನೋಟಕ್ಕೆ ಈ ಚಿತ್ರವನ್ನು ನೋಡಿದಾಗ ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಆದರೆ ಈ ಕೋಟೆಯಲ್ಲಿ ಅವಿತು ಕುಳಿತಿರುವ ನವಿಲನ್ನು ತ್ವರಿತ ವೀಕ್ಷಣಾ ಕೌಶಲ್ಯ ಹೊಂದಿದ್ದವರು ಮಾತ್ರ ಗುರುತಿಸಲು ಸಾಧ್ಯ. ಒಗಟು ಬಿಡಿಸುವಲ್ಲಿ ಸೋತಿದ್ದೀರಾ. ನಾವೇ ನಿಮಗೆ ನವಿಲು ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ನವಿಲು ಎಲ್ಲಿದೆ ಎಂದು ನಾವೇ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ