AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಶಿಶುಗಳಿಗೆ ಜನ್ಮ ನೀಡಿ 7 ಹೆಣ್ಣುಮಕ್ಕಳ ತಾಯಿಯಾದ ಮಹಿಳೆ!

ಉತ್ತರ ಪ್ರದೇಶದ ಕನ್ನೌಜ್​​ನಲ್ಲಿ 30 ವರ್ಷದ ಮಹಿಳೆಯೊಬ್ಬರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸ್ಥಳೀಯ ನರ್ಸಿಂಗ್ ಹೋಂನಲ್ಲಿ ಆಕೆ 4 ಮಕ್ಕಳನ್ನು ಹೆತ್ತಿದ್ದಾರೆ. ಇದು ಬಹಳ ಅಪರೂಪದ ಘಟನೆಯಾಗಿದೆ. ಅದಕ್ಕಿಂತಲೂ ವಿಶೇಷ ಸಂಗತಿಯೆಂದರೆ ಈಗಾಗಲೇ 3 ಹೆಣ್ಣು ಮಕ್ಕಳ ತಾಯಿಯಾಗಿರುವ ಆ ಮಹಿಳೆ ಇದೀಗ 4 ಹೆಣ್ಣುಮಕ್ಕಳನ್ನು ಹೆರುವ ಮೂಲಕ 7 ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ! ಈ ಎಲ್ಲ ಮಕ್ಕಳೂ ನಾರ್ಮಲ್ ಡೆಲಿವರಿ ಮೂಲಕ ಜನಿಸಿವೆ.

4 ಶಿಶುಗಳಿಗೆ ಜನ್ಮ ನೀಡಿ 7 ಹೆಣ್ಣುಮಕ್ಕಳ ತಾಯಿಯಾದ ಮಹಿಳೆ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Dec 23, 2025 | 9:56 PM

Share

ನವದೆಹಲಿ, ಡಿಸೆಂಬರ್ 23: ಉತ್ತರ ಪ್ರದೇಶದಲ್ಲೊಂದು ಅತ್ಯಂತ ಅಪರೂಪದ ಘಟನೆ ನಡೆದಿದೆ. ಮಹಿಳೆಯೊಬ್ಬರು ನಾರ್ಮಲ್ ಡೆಲಿವರಿ ಮೂಲಕ 4 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆ ಈಗಾಗಲೇ 3 ಹೆಣ್ಣುಮಕ್ಕಳ ತಾಯಿಯಾಗಿದ್ದು, ಒಟ್ಟಾರೆ 7 ಮಕ್ಕಳ ತಾಯಿಯಾಗಿದ್ದಾರೆ. ಇವರೆಲ್ಲರೂ ನಾರ್ಮಲ್ ಡೆಲಿವರಿ ಮೂಲಕವೇ ಜನಿಸಿದ್ದು ಎಂಬುದು ವಿಶೇಷ.

ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ವೈಷ್ಣವಿ ನರ್ಸಿಂಗ್ ಹೋಂನಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಅಪರೂಪದ ಘಟನೆ ಆಸ್ಪತ್ರೆ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದೆ. ಡಿಸೆಂಬರ್ 21ರಂದು ಅನಿತಾ ಎಂಬ ಮಹಿಳೆ ನಾರ್ಮಲ್ ಡೆಲಿವರಿ ಮೂಲಕ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅನಿತಾ ಜನ್ಮ ನೀಡಿದ 4 ಹೆಣ್ಣು ಮಕ್ಕಳ ಜನನಗಳ ನಡುವೆ ಎರಡರಿಂದ ಮೂರು ನಿಮಿಷಗಳ ಅಂತರವಿತ್ತು.

ಇದನ್ನೂ ಓದಿ: ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!

ತಥಿಯಾ ಪಟ್ಟಣದ ನಿವಾಸಿ 30 ವರ್ಷದ ಅನಿತಾ ಅವರನ್ನು ಡಿಸೆಂಬರ್ 20ರಂದು ಅವರ ಪತಿ ಅನುಜ್ ಸಿಂಗ್ ಹೆರಿಗೆಗಾಗಿ ಬರ್ಧೈಯಾ ರಸ್ತೆಯಲ್ಲಿರುವ ವೈಷ್ಣವಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ಇಬ್ಬರು ಹೆಣ್ಣು ಮಕ್ಕಳ ತೂಕ ಸುಮಾರು ಒಂದು ಕೆಜಿ ಆಗಿದ್ದರೆ, ಉಳಿದ ಶಿಶುಗಳು ಒಂದೂವರೆ ಕೆಜಿಗಿಂತಲೂ ಹೆಚ್ಚು ತೂಕವಿತ್ತು.

ಇದೇ ರೀತಿ ಕೆಲವು ದಿನಗಳ ಹಿಂದೆ, ಮಹಾರಾಷ್ಟ್ರದ ಸತಾರಾದ ಜಿಲ್ಲಾ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿದ್ದರು. ಅವರಿಗೂ ಮೂವರು ಮಕ್ಕಳಿದ್ದರು. ಈ ಮೂಲಕ ಅವರು ಕೂಡ 7 ಮಕ್ಕಳ ತಾಯಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು