Optical Illusion: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ನಿಧಿ ಪೆಟ್ಟಿಗೆಯನ್ನು ಹುಡುಕಿ
ಮೆದುಳಿಗೆ ಕೆಲಸ ನೀಡುವ ಪಝಲ್ ಗೇಮ್‌ಗಳು, ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಆಟಗಳನ್ನು ಆಡಿರುತ್ತೀರಿ. ಇದೀಗ ಅಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಸಮುದ್ರ ಒಳಗೆ ಅಡಗಿರುವ ನಿಧಿಯನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಹಾಗಾದ್ರೆ ಈ ಚಿತ್ರದಲ್ಲಿರುವ ನಿಧಿ ಪೆಟ್ಟಿಗೆಯನ್ನು ಹುಡುಕಬಲ್ಲಿರಾ.

ಬುದ್ಧಿವಂತಿಕೆಗೆ ಸವಾಲೊಡ್ಡುವ, ಮೆದುಳಿಗೆ ವ್ಯಾಯಾಮ ನೀಡುವ ಮನೋರಂಜನಾತ್ಮಕ ಆಪ್ಟಿಕಲ್ ಇಲ್ಯೂಷನ್ (Optical Illusion) ಆಟಗಳನ್ನು ಆಡಿರುತ್ತೀರಿ ಅಲ್ವಾ. ಆದರೆ ಪ್ರತಿ ಬಾರಿ ಈ ಒಗಟು ಬಿಡಿಸಲು ಸಾಧ್ಯವಾಗದೇ ಇದ್ದೀರಬಹುದು. ಇದೀಗ ಇಲ್ಲೊಂದು ಅಂತಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಹರಿದಾಡುತ್ತಿದ್ದು, ಚಿನ್ನದಿಂದ ತುಂಬಿದ ನಿಧಿ ಪೆಟ್ಟಿಗೆ ಎಲ್ಲಿದೆ ಎಂದು ಹುಡುಕುವ ಸವಾಲನ್ನು ನೀಡಲಾಗಿದೆ. ತುಂಬಾ ಕುತೂಹಲಕಾರಿಯಾಗಿರುವ ಈ ಒಗಟಿನ ಆಟಗಳು ಬಿಡಿಸಲು ನೀವು ಸಿದ್ದವಿದ್ದೀರಾ. ಹಾಗಾದ್ರೆ 15 ಸೆಕೆಂಡುಗಳಲ್ಲಿ ಒಗಟು ಬಿಡಿಸಲು ಪ್ರಯತ್ನಿಸಿ.
ಈ ಚಿತ್ರ ಏನು ಹೇಳುತ್ತದೆ?

ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಬಹುದಾದ ಒಗಟಿನ ಆಟವು ನಿಮ್ಮ ಮುಂದಿದೆ. ಈ ಇಲ್ಯೂಷನ್ ಚಿತ್ರದಲ್ಲಿ ಸಮುದ್ರದ ತಳವನ್ನು ಕಾಣಬಹುದು. ಇಲ್ಲಿ ಮೀನು ಸೇರಿದಂತೆ ವಿವಿಧ ಜಲಚರ ಜೀವಿಗಳನ್ನು ನೋಡಬಹುದು. ಇಲ್ಲಿ ನಿಧಿ ಪೆಟ್ಟಿಗೆಯೊಂದಿದ್ದು, ಈ ಒಗಟನ್ನು ಬಿಡಿಸಲು 15 ಸೆಕೆಂಡುಗಳಷ್ಟು ಕಾಲವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವಿರಾ
ನಿಧಿ ಪೆಟ್ಟಿಗೆ ಸಿಕ್ಕಿತೇ?
ಈ ಸಮುದ್ರ ತಳದಲ್ಲಿ ಮೀನು ಸೇರಿದಂತೆ ಇನ್ನಿತ್ತರ ಜಲಚರ ಜೀವಿಗಳು ಕಣ್ಣಿಗೆ ಬಿದ್ದಿರಬಹುದು. ಇದೀಗ ಸೂಕ್ಷವಾಗಿ ಗಮನಿಸಿ ಚಿನ್ನದ ಪೆಟ್ಟಿಗೆ ಕಂಡುಹಿಡಿಯಿರಿ.. ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ ನಿಧಿ ಪೆಟ್ಟಿಗೆ ಕಾಣಿಸುತ್ತಿಲ್ಲವೇ. ನಾವೇ ನಿಮಗೆ ನಿಧಿ ಪೆಟ್ಟಿಗೆ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ನಿಧಿ ಪೆಟ್ಟಿಗೆಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




