Video: ಕಾಲ ಸರಿದಂತೆ ಮರೆಯಾಗುತ್ತಿದೆ ಸಾಂಪ್ರದಾಯಿಕ ಉಗ್ರಾಣ ಈ ಭತ್ತದ ಕಣಜ
ಕೃಷಿಕರ ಬದುಕಿನ ಚಿತ್ರಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೃಷಿಕರು ತಾವು ಬೆಳೆದ ಬೆಳೆಯನ್ನು ಸಾಂಪ್ರದಾಯಿಕ ವಿಧಾನ ಬಳಸಿ ಹೇಗೆ ಶೇಖರಿಸಿ ಇಡುತ್ತಿದ್ದರು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ಭತ್ತದ ಕಣಜದ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹಳ್ಳಿಯ ಬದುಕು (Village life), ಕೃಷಿಕರ ಜೀವನ ಹಾಗೂ ಅವರು ಮಾಡುವ ಕೆಲಸವನ್ನು ನೋಡುವಾಗ ಎಷ್ಟು ಶ್ರಮ ಜೀವಿಗಳು ಇವರು ಎಂದೆನಿಸುವುದು ಸಹಜ. ಆದರೆ ಹೀಗೆಲ್ಲಾ ಕೃಷಿ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆಲ್ಲಾ ಉಳುಮೆ, ಪೈರು ಬಿತ್ತನೆಯಿಂದ ಹಿಡಿದು ಭತ್ತದಿಂದ ಅಕ್ಕಿ ಮಾಡುವ ವಿಧಾನಗಳೆಲ್ಲಾ ಸಾಂಪ್ರದಾಯಿಕವಾಗಿದ್ದವು. ಹೌದು, ಹಿಂದೆ ಭತ್ತದ ಕಣಜ ಮಾಡಿ ಬೆಳೆದ ಭತ್ತವನ್ನು ಸಂಗ್ರಹಿಸಿಡುತ್ತಿದ್ದ ವಿಡಿಯೋ ವೈರಲ್ ಆಗಿದೆ. ಕೃಷಿಕರ ಶ್ರಮದ ಬದುಕಿನ ಜತೆಗೆ ಕೃಷಿಯಲ್ಲಿ ಸಾಂಪ್ರದಾಯಿಕ ವಿಧಾನಗಳ (traditional method) ಅಳವಡಿಕೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಕಡಲ ತೀರ (Kadala teera) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೃಷಿಕರ ಬದುಕಿನ ಚಿತ್ರಣವನ್ನು ತೆರೆದಿಡಲಾಗಿದೆ. ಈ ವಿಡಿಯೋಗೆ ಭಟ್ರ ಮನೆಯ ಕಣಜ – ಮಲೆನಾಡು ಅಥವಾ ಕರಾವಳಿಯ ಸಾಂಪ್ರದಾಯಿಕ ಕೃಷಿಕ ಬದುಕಿನ ಸಮೃದ್ಧಿ ಮತ್ತು ಸಂಸ್ಕೃತಿಯ ಪ್ರತಿಬಿಂಬ. ಕಷ್ಟಪಟ್ಟು ಬೆಳೆದ ಭತ್ತವನ್ನು ಮಳೆ, ಗಾಳಿ ಮತ್ತು ಕೀಟಗಳಿಂದ ರಕ್ಷಸಿ, ಮುಂದಿನ ವರ್ಷದ ಬಿತ್ತನೆಗೆ ಹಾಗೂ ಬಳಕೆಗೆ ಸುರಕ್ಷಿತವಾಗಿ ಸಂಗ್ರಹಿಸಿಡುವ ಸಾಂಪ್ರದಾಯಿಕ ಉಗ್ರಾಣವೇ ಈ ‘ಭತ್ತದ ಕಣಜ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ರೈತರೆಲ್ಲಾ ಸೇರಿಕೊಂಡು ಮನೆಯ ಅಂಗಳದಲ್ಲಿ ಹುಲ್ಲನ್ನು ಬಳಸಿ ಭತ್ತದ ಕಣಜವನ್ನು ಮಾಡುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಇದು ಹಳ್ಳಿ ಜೀವನದ ಗಮ್ಮತ್ತು; ಕೃಷಿ ಕಾಯಕದಲ್ಲಿ ನಿರತರಾಗಿರುವ ಹಳ್ಳಿ ಜನ್ರು
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ ಎಂದಿದ್ದಾರೆ. ಮತ್ತೊಬ್ಬರು, ಭತ್ತ ಕೊಯ್ಯುವ ಯಂತ್ರಗಳು ಬಂದ ನಂತರ ಈ ಸುಗ್ಗಿಯ ಸಂಭ್ರಮ ಸಡಗರ ಮರೆಯಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ವರ್ಣಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




