AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದು ಹಳ್ಳಿ ಜೀವನದ ಗಮ್ಮತ್ತು; ಕೃಷಿ ಕಾಯಕದಲ್ಲಿ ನಿರತರಾಗಿರುವ ಹಳ್ಳಿ ಜನ್ರು

ಹಳ್ಳಿಯ ಅದೆಷ್ಟೋ ಕುಟುಂಬಗಳು ಕೃಷಿಯನ್ನೇ ನಂಬಿ ಬದುಕುತ್ತವೆ. ಹೀಗಾಗಿ ಹಳ್ಳಿ ಜನರು ಕೃಷಿ ಕಾಯಕವನ್ನು ಖುಷಿಯಿಂದಲೇ ಮಾಡುತ್ತಾ ಆನಂದಿಸುತ್ತಾರೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಎಲ್ಲರೂ ಜತೆ ಸೇರಿ ಪೈರಿನಿಂದ ಭತ್ತವನ್ನು ಬೆರ್ಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಹಳ್ಳಿ ಜನರ ಕೃಷಿ ಕಾಯಕದ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

Video: ಇದು ಹಳ್ಳಿ ಜೀವನದ ಗಮ್ಮತ್ತು; ಕೃಷಿ ಕಾಯಕದಲ್ಲಿ ನಿರತರಾಗಿರುವ ಹಳ್ಳಿ ಜನ್ರು
ವೈರಲ್‌ ವಿಡಿಯೋ
ಸಾಯಿನಂದಾ
|

Updated on: Dec 10, 2025 | 12:09 PM

Share

ಹಳ್ಳಿಯ ಜನರು (village people) ಕಾಯಕವೇ ಕೈಲಾಸ ಎಂದು ಬದುಕುತ್ತಿರುವವರು. ಈ ಜನರಿಗೆ ಕೃಷಿ (agriculture) ಅಂದ್ರೆ ಜೀವಾಳ. ಬೆಳೆ ಮನೆಯಂಗಳಕ್ಕೆ ಬರುತ್ತಿದ್ದಂತೆ ಅದೇನೋ ಖುಷಿ. ಕಟಾವು ಮಾಡಿ ಪೈರಿನಿಂದ ಭತ್ತವನ್ನು ಸಾಂಪ್ರದಾಯಿಕ ವಿಧಾನದ ಮೂಲಕ ಬೇರ್ಪಡಿಸುವುದನ್ನು ನೋಡುವುದೇ ಚಂದ. ಎಲ್ಲರೂ ಸೇರಿ ಕೃಷಿ ಕಾಯಕದಲ್ಲಿ ತೊಡಗಿರುವ ಹಳ್ಳಿ ಜನರ ವಿಡಿಯೋ ವೈರಲ್ ಆಗಿದೆ. ತಮ್ಮ ರೈತಾಫಿ ವರ್ಗದ ಕಾಯಕವನ್ನು ಆನಂದಿಸುತ್ತಿರುವುದನ್ನು ದೃಶ್ಯವನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಳ್ಯ ವ್ಲಾಗ್‌ (Sullia.vologs) ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಳ್ಳಿ ಜನರು ಕೃಷಿ ಕಾಯಕದಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ. ಈ ವಿಡಿಯೋದಲ್ಲಿ ಹಳ್ಳಿ ಜನರು ಜತೆ ಸೇರಿ ಮನೆಯಂಗಳದಲ್ಲಿ ಪೈರಿನಿಂದ ಭತ್ತವನ್ನು ಬೆರ್ಪಡಿಸುವ ಕಾಯಕದಲ್ಲಿ ನಿರತವಾಗಿದ್ದಾರೆ. ತಮ್ಮ ಕೆಲಸವನ್ನು ಖುಷಿಯಿಂದಲೇ ಆಸ್ವಾದಿಸುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by sullia vlogs (@sullia.vlogs)

ಇದನ್ನೂ ಓದಿ: ಕೃಷಿ ಅಂದ್ರೆ ಖುಷಿ; ನೃತ್ಯ ಮಾಡುತ್ತಾ ಕೆಲಸವನ್ನು ಆನಂದಿಸಿದ ಮಹಿಳೆ

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇವಾಗ ಇದೆಲ್ಲಾ ಕಣ್ಮರೆಯಾಗಿದೆ, ದುಃಖದ ವಿಷ್ಯ ಎಂದಿದ್ದಾರೆ. ಇನ್ನೊಬ್ಬರು, ರೈತರ ಜೀವನ ಸೂಪರ್ ಎಂದರೆ ಮತ್ತೊಬ್ಬರು, ನಮ್ಮ ತುಳುನಾಡ ಸಂಸ್ಕೃತಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ