AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೃಷಿ ಅಂದ್ರೆ ಖುಷಿ; ನೃತ್ಯ ಮಾಡುತ್ತಾ ಕೆಲಸವನ್ನು ಆನಂದಿಸಿದ ಮಹಿಳೆ

ಹಳ್ಳಿ ಜನರಿಗೆ ಕೃಷಿಯೇ ಜೀವಾಳ. ಕೃಷಿ ಕಾಯಕವನ್ನು ಖುಷಿಯಿಂದಲೇ ಮಾಡುತ್ತಾ ಆನಂದಿಸುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಕೃಷಿ ಕೆಲಸದಲ್ಲಿ ನಿರತರಾಗಿರುವ ಮಹಿಳೆಯೂ ಕಾಯಕದ ನಡುವೆ ಡ್ಯಾನ್ಸ್ ಮಾಡಿದ್ದಾರೆ. ಈ ಕೃಷಿ ಬದುಕನ್ನು ಆಸ್ವಾದಿಸುತ್ತಿರುವ ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ಕೃಷಿ ಅಂದ್ರೆ ಖುಷಿ; ನೃತ್ಯ ಮಾಡುತ್ತಾ ಕೆಲಸವನ್ನು ಆನಂದಿಸಿದ ಮಹಿಳೆ
ಕೃಷಿ ಬದುಕುImage Credit source: Instagram
ಸಾಯಿನಂದಾ
|

Updated on:Nov 19, 2025 | 5:59 PM

Share

ಹಳ್ಳಿ ಬದುಕು (Village life) ನಿಜಕ್ಕೂ ಸುಂದರ. ನೆಮ್ಮದಿಯ ನಿದ್ರೆಗಾಗಿ ಒಂದು ಪುಟ್ಟ ಮನೆ. ಬದುಕಿಗಾಗಿ ಕೃಷಿ ಕಾಯಕ. ಬೀಜ ಬಿತ್ತಿ ಪೈರು ಬರುತ್ತಿದ್ದಂತೆ, ಕಟಾವು ಕೆಲಸ ಶುರುವಾಗುತ್ತದೆ. ಕಟಾವು ಬಳಿಕ ತೆನೆಯಿಂದ ಭತ್ತವನ್ನು ಬೇರ್ಪಡಿಸುವವರೆಗೂ ಹಳ್ಳಿ ಜನರು ಕೃಷಿ ಕಾಯಕದಲ್ಲಿ ಬ್ಯುಸಿಯಾಗಿರುತ್ತಾರೆ. ಒಬ್ಬರಿಗೊಬ್ಬರು ನೆರವಾಗುತ್ತಾ ಹಳ್ಳಿ ಮಂದಿ ಜೊತೆ ಸೇರಿ ಕೃಷಿ (agriculture) ಕಾಯಕದಲ್ಲಿ ತೊಡಗುವ ರೀತಿಯನ್ನು ನೋಡಿದ್ರೆ ಖುಷಿಯಾಗುತ್ತದೆ. ಇದೀಗ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಹಳ್ಳಿ ಜನರು ಈ ಕೆಲಸವನ್ನೂ ಎಷ್ಟು ಆನಂದಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಕೃಷಿ ಕೆಲಸದ ನಡುವೆ  ಮಹಿಳೆ, ಕೆಲಸದ ನಡುವೆ ತನ್ನದೇ ದಾಟಿಯಲ್ಲಿ ಸ್ಟೆಪ್ ಹಾಕುತ್ತ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೃಷಿ ಕಾಯಕದಲ್ಲಿ ಖುಷಿ ಎಷ್ಟಿದೆ ನೋಡಿ

ranjith_s_shetty ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಳ್ಳಿ ಬದುಕಿನ ಚಿತ್ರಣವನ್ನು ತೆರೆದಿಡಲಾಗಿದೆ. ಮನೆಯಂಗಳದಲ್ಲಿ ಹಳ್ಳಿ ಜನರು ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ,ಮನೆಯಂಗಳದಲ್ಲಿ ಪೈರಿನಿಂದ ಭತ್ತವನ್ನು ಬೆರ್ಪಡಿಸುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಉಳಿದ ಮಹಿಳೆಯರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಒಬ್ಬ ಮಹಿಳೆಯೂ ಡ್ಯಾನ್ಸ್ ಮಾಡುತ್ತಾ ಈ ಹಳ್ಳಿ ಬದುಕನ್ನು ಆಸ್ವಾದಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಕೃಷಿ ಕೆಲಸದಲ್ಲೇ ಈ ಜನರಿಗೆ ಖುಷಿ; ಇದು ಹಳ್ಳಿ ಬದುಕಿನ ಸುಂದರ ದೃಶ್ಯಕಾವ್ಯ

ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಜವಾಗಿಯೂ ಈ ಹಾಡಿಗೆ ಕಲೆ ಬಂತು ಎಂದಿದ್ದಾರೆ. ಇನ್ನೊಬ್ಬರು, ನವಲತ್ತು ವರ್ಷದ ಹಿಂದಿನ ನೆನಪು ಆಯ್ತು. ನೃತ್ಯ ಮಾಡುವ ಅಕ್ಕನನ್ನು ನೋಡಿ ಖುಷಿ ಆಯ್ತು. ಜೈ ತುಳುನಾಡ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ನಮ್ಮ ತುಳುನಾಡ್ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Wed, 19 November 25

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು