Visual Puzzle: ಚಿತ್ರದಲ್ಲಿ ಒಟ್ಟು 7 ಸಂಖ್ಯೆಗಳಿವೆ; ಎಷ್ಟೆಂದು ಹೇಳಬಲ್ಲಿರಾ?

ಎಷ್ಟೇ ದಿಟ್ಟಿಸಿ ನೋಡಿದರೂ ನಿಮಗೆ ಪೂರ್ತಿ ಒಟ್ಟು 7 ಸಂಖ್ಯೆಯನ್ನು ಕಂಡು ಹಿಡಿಯಲು ಸಾಧ್ಯವಿಲ್ಲವೆಂದಾದರೆ ಉತ್ತರವನ್ನು ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Visual Puzzle: ಚಿತ್ರದಲ್ಲಿ ಒಟ್ಟು 7 ಸಂಖ್ಯೆಗಳಿವೆ; ಎಷ್ಟೆಂದು ಹೇಳಬಲ್ಲಿರಾ?
ಚಿತ್ರದಲ್ಲಿ ಒಟ್ಟು 7 ಸಂಖ್ಯೆಗಳಿವೆ; ಎಷ್ಟೆಂದು ಹೇಳಬಲ್ಲಿರಾ?

Updated on: Apr 27, 2024 | 6:19 PM

ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ಸವಾಲೆಸೆಯುವ ಈ ಚಿತ್ರದಲ್ಲಿ ನೀವು ಒಟ್ಟು 7 ಸಂಖ್ಯೆಗಳನ್ನು ಗುರುತಿಸಿ ಅವು ಯಾವುದೆಂದು ಹೇಳಬೇಕಿದೆ. ಈ ಚಿತ್ರವನ್ನು ನೀವು ನೋಡಿದಾಗ ನಿಮಗೆ ಸುತ್ತುತ್ತಿರುವಂತೆ ಕಾಣಿಸಬಹುದು. ಆದರೆ ಆ ಚಿತ್ರದಲ್ಲಿ ಕೆಲವು ಸಂಖ್ಯೆಗಳಿವೆ. ಅವು ಸ್ಪಷ್ಟವಾಗಿಲ್ಲ. ಆ ಸಂಖ್ಯೆಗಳನ್ನು ಸರಿಯಾಗಿ ಗುರುತಿಸಿ ಯಾವುದೆಂದು ಹೇಳುವುದು ನಿಮ್ಮ ಕೆಲಸ.

ಚಿತ್ರವನ್ನು ಗಮನಿಸುತ್ತಾ ಹೋದ ಹಾಗೆ ಪ್ರಾರಂಭದಲ್ಲಿ ನಿಮಗೆ ಒಂದು ಸಂಖ್ಯೆ ಕಾಣಿಸಬಹುದು. ಬಳಿಕ ಇನ್ನಷ್ಟು ದಿಟ್ಟಿಸಿ ನೋಡಿದರೆ “4528” ಅಕ್ಷರ ಕಾಣಿಸಬಹುದು. ಆದರೆ ಈ ಅಕ್ಷರಗಳ ಬಳಿಕವೂ ನೀವು ಉಳಿದ ಸಂಖ್ಯೆಯನ್ನು ಕಂಡು ಹುಡುಕುವುದು ಅಷ್ಟು ಸುಲಭವಲ್ಲ. ಎಷ್ಟೇ ದಿಟ್ಟಿಸಿ ನೋಡಿದರೂ ನಿಮಗೆ ಪೂರ್ತಿ ಒಟ್ಟು 7 ಸಂಖ್ಯೆಯನ್ನು ಕಂಡು ಹಿಡಿಯಲು ಸಾಧ್ಯವಿಲ್ಲವೆಂದಾದರೆ ಉತ್ತರವನ್ನು ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ

ನಿಮ್ಮ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚರುಕುಗೊಳಿಸುವ ಈ ಸವಾಲಿನ ಆಟದಲ್ಲಿ ನಿಮಗೆ ಉತ್ತರವನ್ನು ಕಂಡು ಹುಡುಕಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ. ಚಿತ್ರದಲ್ಲಿ ಒಟ್ಟು 7 ಸಂಖ್ಯೆಗಳಿವೆ ಎಂದು ನಾವು ಮೊದಲೇ ಹೇಳಿದ್ದರಿಂದ ಆ ಏಳು ಸಂಖ್ಯೆ ಯಾವುದೆಂದು ಇಲ್ಲಿ ತಿಳಿದುಕೊಳ್ಳಿ. ಸೂಕ್ಷ್ಮವಾಗಿ ಗಮನಿಸಿ. ಅಲ್ಲಿರುವ ಸಂಖ್ಯೆಗಳು ಯಾವುದೆಂದರೆ 3452839. ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us