
ಈಗಿನ ಜನರಿಗೆ ದಿನದ ಇಪ್ಪತ್ತನಾಲ್ಕು ಗಂಟೆಯಿದ್ದರೂ ಸಾಲಲ್ಲ. ಮನಸ್ಸು ಹಾಗೂ ಮೈಂಡ್‌ನನ್ನು ರಿಲ್ಯಾಕ್ಸ್ ಆಗಿಸಲು ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರವನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಇದು ನಿಮ್ಮನ್ನು ರಿಲ್ಯಾಕ್ಸ್ ಆಗಿಸುವುದಲ್ಲದೇ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೀಗ ಮೆದುಳಿನ ತೀಕ್ಷ್ಣತೆ, ಕಣ್ಣಿನ ಚುರುಕುತನವನ್ನು ಪರೀಕ್ಷಿಸುವ ಈ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿರುವ ಕಾರುಗಳಲ್ಲೇ ಒಗಟೊಂದಿದೆ. ಹೌದು, ಟ್ರಾಫಿಕ್ ಜಾಮ್‌ಗೆ ಯಾವ ಕಾರು ಕಾರಣವಾಗಿದೆ ಎಂದು ಹೇಳುವ ಸವಾಲು ಇಲ್ಲಿದೆ. ಈ ಸವಾಲು ಸ್ವೀಕರಿಸಲು ಸಿದ್ಧವಿದ್ರೆ ಇದೀಗ ಈ ಸಮಯ ನಿಮ್ಮದು.
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದನ್ನು ಕಾಣಬಹುದು. ಇಲ್ಲಿ ಏಳು ಕಾರುಗಳಿದ್ದು, ಯಾವ ಕಾರನ್ನು ತೆಗೆದು ಹಾಕಿದರೆ ಟ್ರಾಫಿಕ್ ನಿಂದ ಮುಕ್ತಗೊಳಿಸಬಹುದು. ನೀವು ಈ ಚಿತ್ರದಲ್ಲಿ ಕಾರುಗಳನ್ನು ಗಮನಿಸಿ, ಒಂದು ಕಾರನ್ನು ತೆಗೆದು ಹಾಕಿದರೆಉಳಿದ ವಾಹನಗಳು ಸಹ ಸುಲಭವಾಗಿ ಹಾದುಹೋಗಲು ಸಾಧ್ಯವಾಗುತ್ತದೆ ಎಂದು ಹೇಳುವ ಸವಾಲು ಇಲ್ಲಿದೆ. ಸರಿಯಾದ ಉತ್ತರ ಹುಡುಕಿದ್ರೆ ನಿಮ್ಮ ಕಣ್ಣು ಮತ್ತು ಬುದ್ಧಿಶಕ್ತಿ ಶಾರ್ಪ್ ಆಗಿದೆ ಎಂದರ್ಥ.
ಇದನ್ನೂ ಓದಿ:ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕಿ
ಯಾವ ಕಾರನ್ನು ತೆಗೆದುಹಾಕಿದರೆ ಟ್ರಾಫಿಕ್ ಜಾಮ್ ನಿವಾರಣೆಯಾಗುತ್ತದೆ. ನೀವು ಇಲ್ಲಿ ಉಳಿದ ವಾಹನಗಳು ಸಹ ಸುಲಭವಾಗಿ ಹಾದುಹೋಗಲು ಯಾವ ಕಾರನ್ನು ಮುಂದಕ್ಕೆ ಹೋಗಲು ಅನುವು ಮಾಡಿಕೊಡಬೇಕು ಎಂದು ಈ ಟ್ರಿಕ್ಕಿ ಒಗಟು ಬಿಡಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದೀರಾ. ಈ ಒಗಟು ಬಿಡಿಸಲು ನಿಮ್ಮ ಬುದ್ಧಿಯನ್ನು ಖರ್ಚು ಮಾಡಬೇಕು. ಎಷ್ಟೇ ಯೋಚನೆ ಮಾಡಿದ್ರೂ ಟ್ರಾಫಿಕ್ ಕಾರಣವಾಗಿರುವ ಕಾರು ಯಾವುದೆಂದು ಹೇಳಲು ಸಾಧ್ಯವಾಗುತ್ತಿಲ್ಲವೇ. ಆ ಕಾರು ಯಾವುದೆಂದು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ನೀವು ಕಾರು ಸಂಖ್ಯೆ 3 ಅನ್ನು ತೆಗೆದುಹಾಕಿದರೆ, ಛೇದಕದಲ್ಲಿನ ಟ್ರಾಫಿಕ್ ಜಾಮ್‌ನಿಂದ ಈ ರಸ್ತೆಯೂ ಮುಕ್ತವಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ