Optical Illusion: ಬೇಟೆಗಾರನ ಕಣ್ತಪ್ಪಿಸಿ ಅಡಗಿಕೊಂಡಿರುವ ಆನೆಯನ್ನು ನೀವು ಪತ್ತೆಹಚ್ಚ ಬಲ್ಲಿರಾ?

ಬೇಟೆಗಾರನೊಬ್ಬ ಗನ್ ಹಿಡಿದುಕೊಂಡು ಕಾಡಿನಲ್ಲಿ ಸುತ್ತುತ್ತಿರುವ ಚಿತ್ರದಲ್ಲಿ ಆನೆಯೊಂದು ಅಡಗಿಕೊಂಡಿದೆ. ಈ ಆನೆಯನ್ನು ನೀವು ಪತ್ತೆಹಚ್ಚುವಿರಾ?

Optical Illusion: ಬೇಟೆಗಾರನ ಕಣ್ತಪ್ಪಿಸಿ ಅಡಗಿಕೊಂಡಿರುವ ಆನೆಯನ್ನು ನೀವು ಪತ್ತೆಹಚ್ಚ ಬಲ್ಲಿರಾ?
ವೈರಲ್ ಚಿತ್ರ
Updated By: Digi Tech Desk

Updated on: Aug 17, 2022 | 12:49 PM

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುವುದು ಗೊತ್ತೇ ಇದೆ. ಈ ಫೋಟೋ ಮನಸ್ಸನ್ನು ಸರಾಗಗೊಳಿಸುವುದಲ್ಲದೆ ಮೆದುಳನ್ನು ಚುರುಕುಗೊಳಿಸುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ, ಮೆದುಳಿನ ಕಾರ್ಯವನ್ನು ಬದಲಾಯಿಸುತ್ತದೆ. ಮನಸ್ಸು, ದೃಷ್ಟಿ, ಮೆದುಳು ಈ ಮೂರನ್ನೂ ಒಟ್ಟುಗೂಡಿಸಿ ಚಿಂತನೆಯನ್ನು ಚುರುಕುಗೊಳಿಸುತ್ತವೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಈ ಆಪ್ಟಿಕಲ್ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಅಂತಹ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈಂಡ್ ಜರ್ನಲ್ ಪ್ರಕಾರ, ನೀವು ಎಷ್ಟು ಸ್ಮಾರ್ಟ್ ಎಂಬುದನ್ನು ಕಂಡುಹಿಡಿಯಲು ಈ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯನ್ನು ತೆಗೆದುಕೊಳ್ಳಿ. ಟಿಕ್​ಟಾಕ್ ಬಳಕೆದಾರ ಹೆಕ್ಟಿಕ್ ನಿಕ್ ಈ ಚಿತ್ರವನ್ನು ಅಂತರ್ಜಾಲದಲ್ಲಿ ಹಂಚಿಕೊಂಡು ವೀಕ್ಷಕರಿಗೆ ಸವಾಲು ಹಾಕಿದ್ದಾರೆ. ಸವಾಲು ಏನು ಎಂದು ನೀವು ಆಶ್ಚರ್ಯ ಪಡುತ್ತೀರಾ? ಮೇಲಿನ ಫೋಟೋದಲ್ಲಿ ಆನೆಯೊಂದು ಗೌಪ್ಯವಾಗಿದೆ. ಆ ಆನೆಯನ್ನು ನೀಡು ಪತ್ತೆ ಹಚ್ಚಬೇಕು. ಕೇವಲ 1 ಪ್ರತಿಶತದಷ್ಟು ಮಂದಿ ಮಾತ್ರ ಈ ಸವಾಲನ್ನು ಗೆದ್ದುಕೊಂಡಿದ್ದಾರೆ.

Elephant

ಆನೆ

ಮೇಲಿನ ಫೋಟೋದಲ್ಲಿ ಗನ್ ಹಿಡಿದುಕೊಂಡಿರುವ ಬೇಟೆಗಾರ ಕಾಡಿನಲ್ಲಿ ಮರಗಳ ನಡುವೆ ತಿರುಗಾಡುತ್ತಿದ್ದಾನೆ. ಈ ಬೇಟೆಗಾರನ ಕಣ್ಣುತಪ್ಪಿಸಿ ಆನೆಯೊಂದು ಅಡಗಿಕೊಂಡಿದೆ. ಈ ಆನೆಯನ್ನು ನೀವು ಪತ್ತೆಹಚ್ಚಬೇಕು. ಬಹಳ ಎಚ್ಚರಿಕೆಯಿಂದ, ಸಂಪೂರ್ಣ ಬುದ್ಧಶಕ್ತಿ ಉಪಯೋಗಿಸಿ.

ನೀವು ಈಗಲೂ ಸಣ್ಣ ಫೋಟೋದಲ್ಲಿ ದೈತ್ಯ ಆನೆಯನ್ನು ಹುಡಕಲು ವಿಫಲರಾಗಿದ್ದೀರೇ? ಹಾಗಿದ್ದರೆ ಇಲ್ಲಿದೆ ನೀವು ಮಾಡಬೇಕಿರುವುಉದ ಇಷ್ಟೆ, ನಿಮ್ಮ ಮೊಬೈಲ್ ಅನ್ನು ಉಲ್ಟ ಮಾಡಿ ನೋಡಿ ಆನೆಯನ್ನು ಪತ್ತೆಯಾಗುತ್ತದೆ. ಮರಗಳು ಆನೆಯ  ಸೊಂಡಿಲು, ಬಾಲ, ಕಾಲುಗಳಾಗಿವೆ. ಹುಲ್ಲುಗಳು ಆನೆಯ ದೇಹವಾಗಿದೆ.

ಆನೆ

Published On - 6:00 pm, Tue, 16 August 22