AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಾಜಿನಲ್ಲಿ ಗೆದ್ದ ಸೂಟ್​ಕೇಸ್​ ಅನ್ನು ಮನೆಯಲ್ಲಿ ತೆರೆದು ನೋಡಿದಾಗ ಇಡೀ ಕುಟುಂಬವೇ ಶಾಕ್!

ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬವೊಂದು ಸೂಟ್​ಕೇಸ್​ಗಳನ್ನು ತನ್ನದಾಗಿಸಿಕೊಂಡಿದೆ. ನಿಯಮಗಳ ಪ್ರಕಾರ ಮನೆಗೆ ಹೋಗಿ ತೆರೆದು ನೋಡಿದಾಗ ಇಡೀ ಕುಟುಂಬವೇ ಭೀತಿಗೊಂಡಿದೆ. ಈ ಬಗ್ಗೆ ಕುತೂಹಲಕಾರಿ ಸ್ಟೋರಿ ಇಲ್ಲಿದೆ..

ಹರಾಜಿನಲ್ಲಿ ಗೆದ್ದ ಸೂಟ್​ಕೇಸ್​ ಅನ್ನು ಮನೆಯಲ್ಲಿ ತೆರೆದು ನೋಡಿದಾಗ ಇಡೀ ಕುಟುಂಬವೇ ಶಾಕ್!
ಸೂಟ್​ಕೇಸ್
Rakesh Nayak Manchi
| Updated By: ಆಯೇಷಾ ಬಾನು|

Updated on:Aug 16, 2022 | 8:08 PM

Share

ಅದೇನು ಅದೃಷ್ಟವೋ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬವೊಂದು ಸೂಟ್​ಕೇಸ್​ಗಳನ್ನು(Suitcases) ತನ್ನದಾಗಿಸಿಕೊಂಡಿದೆ. ನಿಯಮಗಳಂತೆ ಅದನ್ನು ಸ್ಥಳದಲ್ಲೇ ತೆರೆದು ನೋಡುವಂತಿಲ್ಲ, ಅದರಂತೆ ಅದರಲ್ಲೇನಿದೆಯೋ ಎಂಬ ಕುತೂಹಲದಲ್ಲೇ ಖುಷಿ ಖುಷಿಯಾಗಿ ಮನೆಗೆ ತೆರಳಿದ ಕುಟುಂಬ ಸೂಟ್​ಕೇಸ್ ತೆರೆದು ನೋಡಿದಾಗ ನಿಬ್ಬೆರಗಾಗಿದೆ. ಹಾಗಿದ್ದರೆ ಆ ಸೂಟ್​ಕೇಸ್​ನಲ್ಲಿ ಇದ್ದದ್ದಾದರೂ ಏನು? ಕುತೂಹಲಕಾರಿ ಸುದ್ದಿ ಇಲ್ಲಿದೆ ಓದಿ…

ನ್ಯೂಜಿಲೆಂಡ್‌ನ ದಕ್ಷಿಣ ಆಕ್ಲೆಂಡ್‌ನ ಕುಟುಂಬವೊಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು. ಅದರಂತೆ ಹರಾಜಿನಲ್ಲಿ ನಡೆದ ಡ್ರಾದಲ್ಲಿ ಆ ಕುಟುಂಬವು 5 ಸೂಟ್‌ಕೇಸ್‌ಗಳನ್ನು ಗೆದ್ದುಕೊಂಡಿದೆ. ಹರಾಜು ನಡೆಯುತ್ತಿದ್ದಾಗ ಆ ಸೂಟ್‌ಕೇಸ್‌ಗಳನ್ನು ತೆರೆಯಬಾರದು ಎಂಬ ನಿಯಮವಿದ್ದುದರಿಂದ ಮನೆಗೆ ಹೋಗಿ ತೆರೆದಿದ್ದಾರೆ. ಹೀಗೆ ಸೂಟ್​ಕೇಸ್​ಗಳನ್ನು ತೆರೆದ ಕುಟುಂಬಕ್ಕೆ ಸಿಕ್ಕಿದ್ದು ಮಾನವನ ಅವಶೇಷಗಳು.

ಭೀತಿಗೊಂಡ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು, ಅವಶೇಷಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ, ಈ ಕುಟುಂಬಕ್ಕೂ ಕೊಲೆಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಸುದ್ದಿಯನ್ನು ತೆಲುಗಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Tue, 16 August 22

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್