Optical illusion: ಈ ಚಿತ್ರದಲ್ಲಿ ಮರವಿಲ್ಲದಿರುವ ಮನೆಯನ್ನು ಕಂಡು ಹಿಡಿಯಬಲ್ಲಿರಾ?

| Updated By: Digi Tech Desk

Updated on: Dec 12, 2024 | 12:50 PM

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಸವಾಲುಗಳು ತುಂಬಾ ಸುಲಭವಾಗಿದ್ದರೆ, ಇನ್ನೂ ಕೆಲವು ಸವಾಲುಗಳು ತುಂಬಾನೇ ಟ್ರಿಕ್ಕಿ ಆಗಿರುತ್ತವೆ. ಇದೀಗ ಅಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಕ್ರಿಸ್‌ಮಸ್‌ ಟ್ರೀ ಇರದ ಮನೆಯನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಮರವಿಲ್ಲದ ಆ ಮನೆಯನ್ನು ಕೇವಲ 10 ಸೆಕೆಂಡುಗಳಲ್ಲಿ ನೀವು ಹುಡುಕಬಲ್ಲಿರಾ?

Optical illusion: ಈ ಚಿತ್ರದಲ್ಲಿ ಮರವಿಲ್ಲದಿರುವ ಮನೆಯನ್ನು ಕಂಡು ಹಿಡಿಯಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Follow us on

ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಸ್ವಲ್ಪ ಟ್ರಿಕ್ಕಿ ಆಗಿದ್ದರೂ ಈ ಸವಾಲುಗಳನ್ನು ಎದುರಿಸುವ ಖುಷಿಯೇ ಬೇರೆ. ಇದು ಟೈಮ್‌ ಪಾಸ್‌ ಆಟ ಮಾತ್ರವಲ್ಲದೆ ನಮ್ಮ ದೃಷ್ಟಿ ಮತ್ತು ಮೆದುಳಿನ ತೀಷ್ಣತೆಯನ್ನು ಕೂಡಾ ಹೆಚ್ಚಿಸುವಂತಹ ಆಟವಾಗಿದೆ. ನೀವು ಕೂಡಾ ಇಂತಹ ಹಲವಾರು ಒಗಟಿನ ಚಟುವಟಿಕೆಗಳನ್ನು ಆಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಇಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಕ್ರಿಸ್‌ಮಸ್‌ ಟ್ರೀ ಇರದ ಮನೆಯನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಮರವಿಲ್ಲದ ಆ ಮನೆಯನ್ನು ಕೇವಲ 10 ಸೆಕೆಂಡುಗಳಲ್ಲಿ ನೀವು ಹುಡುಕಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಚಟುವಟಿಕೆಗಳು ನಮ್ಮನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಇಂತಹ ಟ್ರಿಕ್ಕಿಯಾಗಿರುವಂತಹ ಆಪ್ಟಿಕಲ್‌ ಇಲ್ಯೂಷನ್‌ ಫೋಟೋವೊಂದು ಇದೀಗ ವೈರಲ್‌ ಆಗಿದೆ. ಈ ಚಿತ್ರದಲ್ಲಿ ಸಾಲಾಗಿ ನಿಂತಿರುವ ಮನೆಗಳಲ್ಲಿ ಕಿಟಕಿ ಪಕ್ಕ, ಬಾಗಿಲಿನ ಪಕ್ಕ ಒಂದೊಂದು ಕ್ರಿಸ್‌ಮಸ್‌ ಟ್ರೀಗಳನ್ನು ಸಹ ಇಡಲಾಗಿದೆ. ಕ್ರಿಸ್‌ಮಸ್‌ ಟ್ರೀಗಳಿರುವ ಮನೆಗಳ ಮಧ್ಯೆ ಮರವಿಲ್ಲದ ಒಂದು ಮನೆ ಕೂಡಾ ಅಡಕವಾಗಿದೆ. ಈ ಮರವಿಲ್ಲದ ಮನೆಯನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ನಿಮ್ಮ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸಲು ಈ ಸವಾಲನ್ನು ಸ್ವೀಕರಿಸುವಿರಾ?

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಚಿತ್ರದಲ್ಲಿದಲ್ಲಿರುವ ಮನೆಗಳಲ್ಲಿ ಕಿಟಕಿ ಪಕ್ಕ ಬಾಗಿಲಿನ ಪಕ್ಕ ಒಂದೊಂದು ಕ್ರಿಸ್‌ಮಸ್‌ ಟ್ರೀ ಇರುವುದನ್ನು ನೋಡಿದ್ದೀರಿ ಅಲ್ವಾ. ಹಾಗೇನೆ ಈ ಚಿತ್ರವನ್ನು ಗಮನವಿಟ್ಟು ಹಾಗೂ ಏಕಾಗ್ರತೆಯಿಂದ ನೋಡಿ… ಅಲ್ಲಿ ಮರವಿಲ್ಲದ ಮನೆಯೂ ನಿಮಗೆ ಕಾಣಿಸುತ್ತೆ.

ಇದನ್ನೂ ಓದಿ; ಏಕಾಏಕಿ ಫುಟ್‌ಪಾತ್​ನಲ್ಲಿ ಸ್ಫೋಟ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರ ಇಲ್ಲಿದೆ:

ಅಯ್ಯೋ ಎಷ್ಟೇ ಹುಡುಕಿದರೂ ಮರವಿಲ್ಲದ ಮನೆ ಮಾತ್ರ ಕಾಣಿಸುತ್ತಿಲ್ಲ ಎಂದು ತಲೆ ಕಡೆಸಿಕೊಂಡಿದ್ದೀರಾ? ಹಾಗಿದ್ರೆ ಯೋಚಿಸಬೇಡಿ ಇಲ್ಲಿದೆ ಉತ್ತರ. ಚಿತ್ರದ ಕೆಳಗಿನಿಂದ ಎರಡನೇ ಸಾಲಿನತ್ತ ಕಣ್ಣಾಯಿಸಿ, ಆ ಎರಡನೇ ಸಾಲಿನಲ್ಲಿ ಎಡದಿಂದ ನಾಲ್ಕನೇ ಸಾಲಿನಲ್ಲಿರುವ ಮನೆಯೇ ಮರವಿಲ್ಲದಿರುವ ಮನೆಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Thu, 12 December 24