Optical Illusion: ಕಾಡಿನಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಿ

ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ತಿಳಿದುಕೊಳ್ಳಬೇಕೇ, ಹಾಗಾದ್ರೆ ನೀವು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದತ್ತ ಕಣ್ಣಾಯಿಸಿ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಒಣಗಿದ ಪೊದೆಗಳ ನಡುವೆ ಅಡಗಿರುವ ಜಿಂಕೆಯನ್ನು ಕಂಡುಹಿಡಿಯಬೇಕು. ಏಕಾಗ್ರತೆಯಿಂದ ಈ ಒಗಟು ಬಿಡಿಸಲು ಪ್ರಯತ್ನಿಸಿ.

Optical Illusion: ಕಾಡಿನಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Reddit

Updated on: Dec 03, 2025 | 10:17 AM

ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಹಾಗೂ ವೀಕ್ಷಣಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಚಿತ್ರಗಳತ್ತ ಹೆಚ್ಚಿನವರು ಕಣ್ಣಾಯಿಸುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟನ್ನು ಬಿಡಿಸುತ್ತಾ ಕುಳಿತು ಬಿಡುತ್ತಾರೆ. ಯೋಚನಾ ಶಕ್ತಿಗೆ ಸವಾಲು ನೀಡುವ ಇಂತಹ ಸವಾಲಿನ ಒಗಟು ಬಿಡಿಸಲು ಆಗದೇ ಇರಬಹುದು. ಈ ಚಿತ್ರದಲ್ಲಿ ಒಣಗಿದ ಪೊದೆಗಳಿಂದ ಆವೃತ್ತವಾದ ಕಾಡಿನ ಪ್ರದೇಶದಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಏನನ್ನು ಹೇಳುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು r/FindTheSniper ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಒಣಗಿದ ಪೊದೆಗಳು ಹಾಗೂ ನೆಲದ ಮೇಲೆ ಬಿದ್ದ ರಾಶಿ ಒಣ ಎಲೆಗಳು ಕಾಣಿಸುತ್ತದೆ. ಕಾಡಿನ ಪ್ರದೇಶವು ನಿಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಈ ದೃಶ್ಯದಲ್ಲಿ ಜಿಂಕೆಯೊಂದು ಮರೆಯಲ್ಲಿ ಅಡಗಿ ಕುಳಿತಿದೆ. ಬಹಳ ಎಚ್ಚರಿಕೆಯಿಂದ ಈ ಪ್ರಾಣಿಯನ್ನು ಗುರುತಿಸಬೇಕು. ಇದಕ್ಕಿರುವ ಸಮಯ  ಹತ್ತು ಸೆಕೆಂಡುಗಳು ಮಾತ್ರ. ಈ ಪ್ರಾಣಿಯನ್ನು ಹುಡುಕಲು ಪ್ರಯತ್ನಿಸಿ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Deer
byu/uNki23 inFindTheSniper

ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಸಳೆಯನ್ನು ಗುರುತಿಸಬಲ್ಲಿರಾ

ಜಿಂಕೆಯನ್ನು ಕಂಡುಹಿಡಿಯಲು ಸಾಧ್ಯವಾಯಿತೇ?

ಈ ಒಗಟಿನ ಚಿತ್ರಗಳು ಸಹಜವಾಗಿಯೇ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಈ ಜಿಂಕೆಯು ಒಣ ಪೊದೆಗಳಲ್ಲಿ ಸಂಪೂರ್ಣವಾಗಿ ಬೆರೆತು ಹೋಗಿರುವುದರಿಂದ ಈ ಪ್ರಾಣಿಯನ್ನು ಕಂಡು ಹಿಡಿಯುವುದು ಸ್ವಲ್ಪ ಕಷ್ಟವೇ. ಬೆಳಕು ಪೊದೆಗಳ ಮೇಲೆ ಬೀಳುವುದರಿಂದ ಚೂಪಾದ ಅಂಚುಗಳು ಸಹ ಜಿಂಕೆಯಂತೆಯೇ ಕಾಣುತ್ತದೆ. ಹೀಗಾಗಿ ನೀವು ಕಣ್ಣನ್ನು ಅಗಲಿಸಿ ಎಲ್ಲಿದೆ ಎಂದು ಹುಡುಕಿ. ಈ ರೆಡ್ಡಿಟ್ ಪೋಸ್ಟ್‌ನ ಕಾಮೆಂಟ್‌ಗಳನ್ನು ಆಧರಿಸಿ ಜಿಂಕೆ ನಿಮ್ಮ ಕಣ್ಣಿಗೆ ಬೀಳುತ್ತದೆಯೇ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ