
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಮೋಜಿನ ಆಟಗಳು ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ ಜೊತೆಗೆ ಮೆದುಳಿಗೆ ಖುಷಿ ಕೊಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ಒಗಟಿನ ಆಟಗಳು ವೈರಲ್ ಆಗುತ್ತಿರುತ್ತವೆ. ಕಡಿಮೆ ಸಮಯದಲ್ಲಿ ಈ ಒಗಟಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ. ಕೆಂಪು ಬಣ್ಣದ ಅಕ್ಟೋಪಸ್‌ಗಳ ನಡುವೆ ಮೀನನ್ನು ಜಾಣತನದಿಂದ ಮರೆ ಮಾಡಲಾಗಿದೆ. ತೀಕ್ಷ್ಣ ದೃಷ್ಟಿ ಸಾಮರ್ಥ್ಯವುಳ್ಳವರು ಮಾತ್ರ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಪತ್ತೆಹಚ್ಚಲು ಸಾಧ್ಯ.
ನಿಮ್ಮ ಕಣ್ಣುಗಳ ಸಾಮರ್ಥ್ಯವನ್ನು ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಆಪ್ಟಿಕಲ್ ಭ್ರಮೆ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಕೆಂಪು ಬಣ್ಣದ ಅಕ್ಟೋಪಸ್‌ಗಳ ನಡುವೆ ಮೀನೊಂದು ಅಡಗಿ ಕುಳಿತಿದೆ. ಹತ್ತು ಸೆಕೆಂಡುಗಳ ಒಳಗೆ ಈ ಮೀನನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಕೆಂಪು ಬಣ್ಣದ ಅಕ್ಟೋಪಸ್‌ಗಳು ನಿಮ್ಮ ಕಣ್ಣನ್ನು ಮೋಸಗೊಳಿಸಿ ಭ್ರಮೆಯನ್ನುಂಟು ಮಾಡುತ್ತದೆ. ಸುತ್ತಲೂ ಇರುವ ಅಕ್ಟೋಪಸ್‌ಗಳ ನಡುವೆ ಜಾಣತನದಿಂದ ಮರೆಮಾಡಲಾಗಿರುವ ಮೀನನ್ನು ಕಂಡುಹಿಡಿಯುವುದು ನಿಮಗೆ ಕಷ್ಟವಾಗಬಹುದು. ಒಂದು ವೇಳೆ ಈ ಮೀನು ನಿಮ್ಮ ಕಣ್ಣಿಗೆ ಬಿದ್ದರೆ ವೀಕ್ಷಣಾ ಕೌಶಲ್ಯವು ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ
ನೀವು ಎಷ್ಟೇ ಪ್ರಯತ್ನಿಸಿದರೂ ಮೀನು ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಲು, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಸೂಕ್ಷ್ಮ ದೃಷ್ಟಿಯಿಂದ ಸ್ಕ್ಯಾನ್ ಮಾಡಿ. ಆದರೆ ಕೆಲವೇ ಜನರು ಈ ಒಗಟನ್ನು 10 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ ಅಭಿನಂದನೆಗಳು. ಒಂದು ವೇಳೆ ಈ ಅಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲವೆಂದಾದರೆ ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ಈ ಮೇಲಿನ ಚಿತ್ರದಲ್ಲಿ ಅಕ್ಟೋಪಸ್ ಗಳ ನಡುವೆ ಅಡಗಿರುವ ಮೀನನ್ನು ಬಿಳಿ ಬಣ್ಣದಿಂದ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ