Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಸಿರು ಬಣ್ಣದ ಕಪ್ಪೆಯನ್ನು ಕಂಡು ಹಿಡಿಯಿರಿ

ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಈ ಒಗಟಿನ ಚಿತ್ರಗಳು ಟೈಮ್ ಪಾಸ್ ಮಾತ್ರವಲ್ಲ, ಮೆದುಳು ಹಾಗೂ ಕಣ್ಣಿಗೆ ಕೆಲಸ ನೀಡುತ್ತದೆ. ಜತೆಗೆ ನೀವೆಷ್ಟು ಶಾರ್ಪ್ ಇದ್ದೀರಾ ಎಂದು ತಿಳಿದುಕೊಳ್ಳಬಹುದು. ಇದೀಗ ಅಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದೆ. ಈ ಚಿತ್ರದಲ್ಲಿ ಅಡಗಿರುವ ಹಸಿರು ಬಣ್ಣದ ಕಪ್ಪೆಯನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ.

Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಸಿರು ಬಣ್ಣದ ಕಪ್ಪೆಯನ್ನು ಕಂಡು ಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Sep 29, 2025 | 5:41 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳಲ್ಲಿನ ಒಗಟುಗಳನ್ನು ಬಿಡಿಸುವುದು ಕೆಲವರಿಗೆ ಇಷ್ಟ. ಇನ್ನು ಕೆಲವರಿಗೆ ಕಷ್ಟಕರ, ತಲೆ ನೋವಿನ ಕೆಲಸ. ಹೀಗಾಗಿ ಕೆಲವೇ ಕೆಲವು ಜನರಷ್ಟೇ ಇಂತಹ ಒಗಟುಗಳನ್ನು ಬಿಡಿಸಲು ಆಸಕ್ತಿ ತೋರಿಸುತ್ತಾರೆ. ಇದು ಯೋಚನಾ ಸಾಮರ್ಥ್ಯ, ದೃಷ್ಟಿ ತೀಕ್ಷ್ಣತೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಇದೀಗ ಟ್ರಿಕ್ಕಿಯಾಗಿರುವ ಫೋಟೋವೊಂದು ವೈರಲ್‌ ಆಗಿದೆ. ಈ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದ್ದು, ಬೆಣಚು ಕಲ್ಲು ಹಾಗೂ ಕಳೆ ಸಸ್ಯಗಳ ನಡುವೆ ಮರೆಮಾಡಲಾಗಿರುವ ಕಪ್ಪೆಯನ್ನು ಹತ್ತೇ ಹತ್ತು ಸೆಕೆಂಡುಗಳ ಒಳಗೆ ಕಂಡುಹಿಡಿಯುವ ಸವಾಲು ನೀಡಲಾಗಿದೆ. ಒಗಟು ಟ್ರಿಕ್ಕಿಯಾಗಿದ್ದರೂ ಬಿಡಿಸಲು ಸಾಧ್ಯವೇ ಎಂದು ನೋಡಿ.

ಈ ಚಿತ್ರದಲ್ಲಿ ಏನಿದೆ?

ಫೈಂಡ್‌ದಿಸ್ನಿಪರ್ (FindTheSniper) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಫೋಟೋವನ್ನು ನೀರಿನಲ್ಲಿ ಬೆಣಚು ಕಲ್ಲುಗಳು ಹಾಗೂ ಅಲ್ಲಲ್ಲಿ ಕಳೆ ಸಸ್ಯಗಳಿವೆ. ಈ ನೀರ್ಜಿವ ವಸ್ತುಗಳ ನಡುವೆ ಹಸಿರು ಕಪ್ಪೆ ಇದೆ. ನೀವು ಬಹಳ ಎಚ್ಚರಿಕೆಯಿಂದ ಈ ಚಿತ್ರವನ್ನು ಗಮನಿಸಿದರೆ ಮಾತ್ರ ಕಪ್ಪೆ ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಆದರೆ ಈ ಕಪ್ಪೆಯನ್ನು ಕಂಡುಹಿಡಿಯಲು ನಿಮಗೆ ಇರುವುದು ಹತ್ತು ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿ ಇರಲಿ. ಏಕ್ರಾಗತೆಯಿಂದ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕಿ
ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಗುರುತಿಸಿ ಜಾಣರು ಎನಿಸಿಕೊಳ್ಳಿ
ಈ ಚಿತ್ರದಲ್ಲಿ ಅಡಗಿರುವ ಕಾಳಿಂಗ ಸರ್ಪಗಳನ್ನು ಕಂಡುಹಿಡಿಯಿರಿ
ಈ ಚಿತ್ರದಲ್ಲಿರುವ ಎರಡನೇ ವ್ಯಕ್ತಿಯನ್ನು ಕಂಡು ಹಿಡಿಯಿರಿ

ಇದನ್ನೂ ಓದಿ:Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕಿ

ಹಸಿರು ಕಪ್ಪೆ ನಿಮ್ಮ ಕಣ್ಣಿಗೆ ಬಿದ್ದಿತೇ?

ಇದು ಕಷ್ಟಕರವಾದ ಒಗಟಿನ ಚಿತ್ರವಾಗಿದ್ದು ಮೊದಲ ನೋಟದಲ್ಲಿ ಕಪ್ಪೆ ಹುಡುಕಿ ಉತ್ತರ ಹುಡುಕುವುದು ಕಷ್ಟಕರವೇ. ಆದರೆ ನೀವು ನಿರ್ದಿಷ್ಟ ಸಮಯದೊಳಗೆ ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗಿದ್ದರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ಒಗಟು ಸಹಜವಾಗಿ ಟ್ರಿಕ್ಕಿಯಾಗಿದ್ದು, ಬಿಡಿಸುವುದು ಕಷ್ಟಕರವಾಗಿರುತ್ತದೆ. ಇಲ್ಲಿರುವ ಕಳೆ ಸಸ್ಯ ಗಳು ಕಪ್ಪೆಯ ಬಾಹ್ಯರೇಖೆಯನ್ನು ಹೋಲುತ್ತವೆ. ಈ ಚಿತ್ರದ ಮಧ್ಯದಿಂದ ಸ್ವಲ್ಪ ಎಡಭಾಗಕ್ಕೆ ಹಸಿರು ಕಪ್ಪೆ ಇದೆ. ಈ ಸುಳಿವಿನ ಅನುಸಾರ ಚಿತ್ರ ನೋಡಿ ಕಪ್ಪೆಯನ್ನು ಕಂಡು ಹಿಡಿಯಿರಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ