
ಆಪ್ಟಿಕಲ್ ಇಲ್ಯೂಷನ್‌ನಂತಹ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದರೊಂದಿಗೆ ದೃಷ್ಟಿ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಆಟಗಳನ್ನು ಆಡಲು ಕೆಲವರು ಇಷ್ಟ ಪಡುತ್ತಾರೆ. ಇಂತಹ ಒಗಟಿನ ಚಿತ್ರಗಳಲ್ಲಿ ಒಂದಾದ ಈ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳಿಗೆ ಉತ್ತರ ಹುಡುಕುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಈ ಚಿತ್ರದಲ್ಲಿ ವಿಶಾಲವಾದ ಪ್ರದೇಶವನ್ನು ಕಾಣಬಹುದು. ಒಣ ಸೇರಿದಂತೆ ಹಚ್ಚ ಹಸಿರಿನ ಪ್ರದೇಶವನ್ನೊಳಗೊಂಡ ಈ ಚಿರತೆಯನ್ನು ಮರೆ ಮಾಡಲಾಗಿದೆ. ಇಲ್ಲಿ ನೀಡಿರುವ ಹದಿನೈದು ಸೆಕೆಂಡುಗಳಲ್ಲಿ ಈ ಪ್ರಾಣಿಯನ್ನು ಗುರುತಿಸುವ ಸವಾಲು ನೀಡಲಾಗಿದೆ.
ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ಕಣ್ಣನ್ನು ಸುಲಭವಾಗಿ ಮೋಸಗೊಳಿಸುತ್ತದೆ. ಈ ಚಿತ್ರದಲ್ಲಿ ಪ್ರಶಾಂತ ಹಾಗೂ ವಿಶಾಲವಾದ ಪ್ರದೇಶವನ್ನು ಕಾಣಬಹುದು. ಅಲ್ಲಲ್ಲಿ ಹಸಿರಾದ ಹುಲ್ಲು ಹಾಗೂ ಒಣಗಿದ ಹುಲ್ಲನ್ನು ಕಾಣಬಹುದು. ಮೇಲ್ನೋಟಕ್ಕೆ ಏನು ಇಲ್ಲ ಎಂದೆನಿಸಿದರೂ ಇಲ್ಲಿ ಚಿರತೆಯನ್ನು ಜಾಣತನದಿಂದ ಮರೆ ಮಾಡಲಾಗಿದೆ.ಈ ಕ್ರೂರ ಪ್ರಾಣಿಯನ್ನು ಕೇವಲ 15 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿದ್ರೆ ನೀವು ಬುದ್ಧಿವಂತರು ಹಾಗೂ ನಿಮ್ಮ ಐಕ್ಯೂ ಲೆವೆಲ್ ಚೆನ್ನಾಗಿದೆ ಎಂದರ್ಥ. ಒಗಟನ್ನು ಬಿಡಿಸಲು ನೀವು ರೆಡಿ ಇದ್ದೀರಾ, ಹಾಗಾದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ 8 ವಸ್ತುಗಳನ್ನು ಪತ್ತೆ ಹಚ್ಚಿ ನೋಡೋಣ
ಈ ಭ್ರಮೆ ಉಂಟು ಮಾಡುವ ಈ ಚಿತ್ರವು ಸರಳವಾಗಿ ಕಂಡರೂ ಇಲ್ಲಿ ಚಿರತೆಯನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಆದರೆ ನೀವು ಸೂಕ್ಷ್ಮವಾಗಿ ಹಾಗೂ ತಾಳ್ಮೆಯಿಂದ ಗಮನಿಸಿದರೆ ಚಿರತೆ ಖಂಡಿತ ನಿಮ್ಮ ಕಣ್ಣಿಗೆ ಬೀಳುತ್ತದೆ. ಈ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಚಿರತೆ ಎಲ್ಲಿದೆ ಎಂದು ಹಳದಿ ಬಣ್ಣದಲ್ಲಿ ಈ ಮೇಲಿನ ಚಿತ್ರದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 am, Tue, 21 October 25